ಹಣದ ವಿಚಾರಕ್ಕೆ ತಂದೆಯನ್ನೇ ಕೊಲೆ ಮಾಡಿ, ದೇಹವನ್ನು ಕತ್ತರಿಸಿ ಬಿಸಾಡಿದ ಮಗ

| Updated By: ವಿವೇಕ ಬಿರಾದಾರ

Updated on: Nov 21, 2022 | 12:24 AM

ಮಗ, ತಂದೆಯನ್ನೇ ಕೊಲೆ ಮಾಡಿ, ನಂತರ ತಂದೆಯ ದೇಹವನ್ನು ಕತ್ತರಿಸಿ ಬಿಸಾಡಿರುವ ಘಟನೆ ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ ನಡೆದಿದೆ.

ಹಣದ ವಿಚಾರಕ್ಕೆ ತಂದೆಯನ್ನೇ ಕೊಲೆ ಮಾಡಿ, ದೇಹವನ್ನು ಕತ್ತರಿಸಿ ಬಿಸಾಡಿದ ಮಗ
ಸಾಂದರ್ಭಿಕ ಚಿತ್ರ
Follow us on

ಪಶ್ಚಿಮ ಬಂಗಾಳ: ದೆಹಲಿಯ ಶ್ರದ್ಧಾ ಪ್ರಕರಣ ಮಾಸುವ ಮುನ್ನವೇ, ಪಶ್ಚಿಮ ಬಂಗಾಳದ (West Bengal) ಬರುಯಿಪುರದಲ್ಲಿ ಹೃದಯವಿದ್ರಾಹಕ ಘಟನೆಯೊಂದು ನಡೆದಿದೆ. ಮಗ, ತಂದೆಯನ್ನೇ ಕೊಲೆ ಮಾಡಿ, ನಂತರ ತಂದೆಯ ದೇಹವನ್ನು ಕತ್ತರಿಸಿ ಬಿಸಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿ ಮಾಜಿ ನೌಕಾಪಡೆಯ ಉಜ್ವಲ್ ಚಕ್ರವರ್ತಿ (55) ಎಂದು ಗುರುತಿಸಲಾಗಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಶ್ಯಾಮಲಿ (48) ಮತ್ತು ಮಗ ಜಾಯ್ (25) ನನ್ನು ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 13 ರಂದು ಮಗ ಜಾಯ್, ತಂದೆ ಉಜ್ವಲ್ ಚಕ್ರವರ್ತಿಯನ್ನು ಕೊಲೆ ಮಾಡಿದ್ದಾನೆ. ನಂತರ ಮಗ, ತಾಯಿ ಶ್ಯಾಮಲಿ ಸಹಾಯದಿಂದ ಉಜ್ವಲ್ ಚಕ್ರವರ್ತಿ ಅವರ ದೇಹವನ್ನು ಕತ್ತರಿಸಿ ಕೊಳಗಳು ಮತ್ತು ಪೊದೆಗಳಲ್ಲಿ ಎಸೆದಿದ್ದಾನೆ. ಬಳಿಕ ಇಬ್ಬರೂ ಉಜ್ವಲ್ ಚಕ್ರವರ್ತಿ ಕಾಣೆಯಾಗಿದ್ದಾರೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆಲವು ದಿನಗಳ ಬಳಿಕ ಉಜ್ವಲ್ ಚಕ್ರವರ್ತಿ ಅವರ ತೆಲೆ ಹರಿಹರಪುರ ಕೊಳದಲ್ಲಿ ಪತ್ತೆಯಾಗಿದೆ. ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ  ಟೈಮ್ಸ್​​ ​ ನೌ ವರದಿ ಮಾಡಿದೆ. ಇನ್ನೂ ಉಜ್ವಲ್ ಚಕ್ರವರ್ತಿ ದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಎಸೆದಿದ್ದಾನೆ. ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇದರಿಂದ ಅನುಮಾನಗೊಂಡ ಪೊಲೀಸ್​ರು ತಾಯಿ-ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದಾರೆ. ಜಾಯ್​ ಪಾಲಿಟೆಕ್ನಿಕ್‌ (carpentry polytechnic) ಓದುತ್ತಿದ್ದಾನೆ. ಜಾಯ್​ ಪರೀಕ್ಷಾ ಶುಲ್ಕ ತುಂಬಲು 3,000 ರೂಪಾಯಿಯನ್ನು ತಂದೆ ಬಳಿ ಕೇಳಿದ್ದಾನೆ. ಇದಕ್ಕೆ ಉಜ್ವಲ್ ಚಕ್ರವರ್ತಿ ಹಣ ಕೊಡಲು ನಿರಾಕರಿಸಿದ್ದಾರೆ. ಅಲ್ಲದೇ ಜಾಯ್​ಗೆ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಜಾಯ್​​, ತಂದೆಯನ್ನು ತಳ್ಳಿದ್ದಾನೆ.  ನಂತರ ಕೆಳಗೆ ಬಿದ್ದ ತಂದೆಯ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.

ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಗಳ ಪ್ರಕಾರ ದೇಹದ ಮೇಲೆ ಹಲವಾರು ಗಾಯದ ಗುರುತುಗಳಿವೆ. ಉಜ್ವಲ್ ಚಕ್ರವರ್ತಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಬರುಯಿಪುರ ಎಸ್ಪಿ ಪುಷ್ಪಾ ತಿಳಿಸಿದ್ದಾರೆ.

Published On - 11:08 pm, Sun, 20 November 22