ಆಟೋದಲ್ಲಿ ನಿಗೂಢ ಸ್ಫೋಟ: ಗಾಯಗೊಂಡಿದ್ದ ಪ್ರಯಾಣಿಕನ ಸ್ಥಿತಿ ಗಂಭೀರ: ಪೊಲೀಸ್ ಆಯುಕ್ತ ಶಶಿಕುಮಾರ್
ಮಂಗಳೂರಿನಲ್ಲಿ ಆಟೋ ರಿಕ್ಷಾನಲ್ಲಿ ಸಂಭವಿಸಿದ ನಿಗೂಢ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಘಟನೆಯಲ್ಲಿ ಗಾಯಗೊಂಡಿರುವ ಆಟೋ ಪ್ರಯಾಣಿಕನ ಸ್ಥಿತಿ ಗಂಭೀರವಾಗಿದೆ.
ಮಂಗಳೂರು: ಮಂಗಳೂರಿನ ಕಂಕನಾಡಿ ಬಳಿ ಆಟೋದಲ್ಲಿ (Mangaluru Auto Blast) ಸಂಭವಿಸಿದ ನಿಗೂಢ ಸ್ಫೋಟ ಪ್ರಕರಣಕ್ಕೆ ಕ್ಷಣಕ್ಕೊಂದು ತಿರುವು ಸಿಗುತ್ತಿದೆ. ಆಟೋ ಪ್ರಯಾಣಿಕನ ನಿಗೂಢ ಹೆಜ್ಜೆಗಳು ಭಯ ಹುಟ್ಟಿಸುತ್ತಿವೆ. ಇದರ ಮಧ್ಯೆ ಸ್ಫೋಟದಲ್ಲಿ ಗಾಯಗೊಂಡಿದ್ದ ಆಟೋ ಪ್ರಯಾಣಿಕನ ಸ್ಥಿತಿ ಗಂಭೀರವಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ (Shashi kumar) ಮಾಹಿತಿ ನೀಡಿದ್ದಾರೆ.
ಆಟೋದಲ್ಲಿ ನಿಗೂಢ ಸ್ಪೋಟ: ಹಿಂದೂ ಹೆಸರಿನಲ್ಲಿ ಆಧಾರ್ ಕಾರ್ಡ್ ಹೊಂದಿದ್ದ ಪ್ರಯಾಣಿಕನಿಗೆ ಸುನ್ನತ್ ಆಗಿರೋದು ಬೆಳಕಿಗೆ
ಮಂಗಳೂರಿನಲ್ಲಿ ಇಂದು(ನವೆಂಬರ್ 20) ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಶಶಿಕುಮಾರ್, ಘಟನೆಯಲ್ಲಿ ಶಂಕಿತ ವ್ಯಕ್ತಿ(ಆಟೋ ಪ್ರಯಾಣಿಕ) ಹಾಗೂ ಆಟೋ ಚಾಲಕನಿಗೆ ಗಾಯಗಳಾಗಿವೆ. ಆದ್ರೆ, ಆಟೋ ಚಾಲಕ ಪುರುಷೋತ್ತಮ್ ಪ್ರಾಣಾಪಾಯದಿಂದ ಪಾರಾಗಿದ್ದು, ಶಂಕಿತ ವ್ಯಕ್ತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು.
ಸುಟ್ಟಗಾಯವಾದ್ದರಿಂದ ಮಾತಾಡಲು ವೈದ್ಯರು ಯಾರನ್ನೂ ಬಿಡುತ್ತಿಲ್ಲ. ಶಂಕಿತ ವ್ಯಕ್ತಿಗೆ ಇನ್ಫೆಕ್ಷನ್ ಆಗುತ್ತೆ ಎಂದು ವಿಚಾರಣೆ ಸಾಧ್ಯವಾಗಿಲ್ಲ. ಶಂಕಿತ ವ್ಯಕ್ತಿಯ ಪ್ರಯಾಣದ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತೇವೆ ಎಂದು ಹೇಳಿದರು.
ಆಟೋ ಚಾಲಕನ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿದ್ದೇವೆ. ಚಾಲಕನ ಜತೆ ಶಂಕಿತ ವ್ಯಕ್ತಿ ಯಾವುದೇ ಮಾತುಕತೆ ಮಾಡಿಲ್ಲ. ಶಂಕಿತನಿಗೆ ಬೇರೆ ಲಿಂಕ್ ಇರುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದ್ದು, ಗಾಯಾಳು ಗುಣಮುಖವಾಗುತ್ತಿದ್ದಂತೆ ವಿಚಾರಣೆ ಮಾಡುತ್ತೇವೆ. ತನಿಖೆ ಬಳಿಕ ಎಲ್ಲಾ ಮಾಹಿತಿ ಹೊರಬರಲಿದೆ ಎಂದು ಸ್ಪಷ್ಟಪಡಿಸಿದರು.
ಶಂಕಿತ ವ್ಯಕ್ತಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕ್ರಿಟಿಕಲ್ ಎಂಬ ಮಾಹಿತಿ ವೈದ್ಯರಿಂದ ನಮಗೆ ಸಿಕ್ಕಿದೆ. ನಮ್ಮ ಹಿರಿಯ ಅಧಿಕಾರಿಗಳು ಕ್ಷಣ ಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಆಟೋ ಚಾಲಕನ ಹೇಳಿಕೆ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಚಾಲಕನ ಜೊತೆ ಶಂಕಿತ ವ್ಯಕ್ತಿ ಯಾವುದೇ ಮಾತುಕತೆ ಮಾಡಿಲ್ಲ. ಈ ವರೆಗೆ ಈ ಘಟನೆಯನ್ನು ಯಾವುದೇ ಬೇರೆ ಲಿಂಕ್ ಇರುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಸಾರ್ವಜನಿಕರಲ್ಲಿ ಆತಂಕ ಮೂಡದೇ ಇರಲಿ ಎನ್ನುವ ಕಾರಣಕ್ಕೆ ತನಿಖೆಯನ್ನು ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಅನುಮಾನಾಸ್ಪದ ವ್ಯಕ್ತಿ ವಸ್ತು ಪ್ರದೇಶಗಳನ್ನು ನಿಗಾ ವಹಿಸಲಾಗಿದೆ. ಪೊಲೀಸ್ ಸಿಬ್ಬಂದಿ ವ್ಯಕ್ತಿಗಳು ಮತ್ತು ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ ಎಂದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 5:38 pm, Sun, 20 November 22