ಬೀದರ, ಡಿಸೆಂಬರ್ 10: ಪ್ರಿಯಕರನ ಜೊತೆ ಸೇರಿ ಪತ್ನಿ (Wife) ಪತಿಯನ್ನು (Husband) ಕೊಲೆ ಮಾಡಿ ಜೈಲು ಸೇರಿದ್ದಾಳೆ. ರೇವಣಸಿದ್ದಪ್ಪ ಮೃತ ದುರ್ದೈವಿ. ಪತ್ನಿ ಭಾಗ್ಯಶ್ರಿ ಮತ್ತು ಪ್ರಿಯಕರ ವಿರೇಶ್ ಕೊಲೆ ಆರೋಪಿಗಳು. ಹೆಂಡತಿ ಗಂಡನನ್ನು ಏಕೆ ಕೊಲೆ ಮಾಡಿದಳು? ಆರೋಪಿಗಳು ಸೆರೆ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…
ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ನಿಳಕೊಡ ಗ್ರಾಮದ ರೇವಣಸಿದ್ದ ಎಂಬುವುರು ವಾಸವಾಗಿದ್ದರು. ಇವರದ್ದು ರೈತಾಪಿ ಕುಟುಂಬ. ರೇವಣಸಿದ್ದಪ್ಪ ಅವರಿಗೆ ಇಬ್ಬರು ತಮ್ಮಂದಿರಿದ್ದಾರೆ. ಈ ಕುಟುಂಬದಲ್ಲಿ ಡಿಗ್ರಿವರೆಗೂ ಓದಿದವ ರೇವಣಸಿದ್ದ ಒಬ್ಬನೆ. ರೇವಣಸಿದ್ದ ಅವರದ್ದು ಕೃಷಿ ಕುಟುಂಬ, 15 ಎಕರೆ ಜಮೀನು ಇದೆ. ರೇವಣಸಿದ್ದಪ್ಪ ಅವರು ಓದಿದವನಾಗಿದ್ದರಿಂದ ಖಾಸಗಿ ಕಂನಿಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮದು ತುಂಬು ಕುಟುಂಬವಾಗಿದ್ದರಿಂದ, ತುಂಬು ಕುಟುಂಬದ ಹೆಣ್ಣುಮಗಳನ್ನೇ ಮದುವೆ ಮಾಡಬೇಕು ಅಂತ ರೇವಣಸಿದ್ದನ ತಂದೆ-ತಾಯಿ ನಿರ್ಧರಿಸಿದರು.
ಹೀಗಾಗಿ ಬೀದರ್ ಜಿಲ್ಲೆಯ ಘೋರಂಪಳ್ಳಿ ಗ್ರಾಮದ ತುಂಬು ಕುಟುಂಬ ಹೆಣ್ಣು ಮಗಳಾದ ಭಾಗಶ್ರೀಯನ್ನು ತಮ್ಮ ಮನೆಗೆ ಸೊಸೆಯಾಗಿ ತಂದುಕೊಳ್ಳಲು ನಿಶ್ಚಯಿಸಿದರು. ಅದರಂತೆ 2022ರ ಮೇ 20 ರಂದು ಅದ್ದೂರಿಯಾಗಿ ಮದುವೆ ನೆರವೇರಿತು. ಮದುವೆಯಾದ ಬಳಿಕ ಭಾಗಶ್ರೀ ಹಾಗೂ ರೇವಣಸಿದ್ದಪ್ಪ ಇಬ್ಬರು ಯಾದಗಿರಿ ಜಿಲ್ಲೆಯ ಶಹಪುರನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಒಂದು ವರ್ಷದ ವಾಸವಿದ್ದರು. ನಂತರ ರೇವಣಸಿದ್ದ ಅವರಿಗೆ ಅಲ್ಲಿಂದ ವರ್ಗಾವಣೆಯಾಗಿದ್ದು, ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಟೀಚರ್ ಕಾಲೋನಿಯಲ್ಲಿ ಬಂದು ವಾಸವಾಗಿದ್ದರು.
ರೇವಣಸಿದ್ದ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹೋದರೆ ಸಂಜೆ 9 ಗಂಟೆ ನಂತರ ಮನೆಗೆ ಬರುತ್ತಿದ್ದನು. ರೇವಣಸಿದ್ದನಿಗೆ ಕೆಲಸದ ಒತ್ತಡದ ನಡುವೆ ಹೆಂಡತಿ ಜೊತೆಗೆ ಕಾಲ ಕಳೆಯಲು ಟೈಮ್ ಸಿಗುತ್ತಿರಲಿಲ್ಲ. ಜೊತೆಗೆ ಹೆಂಡತಿಗೆ ದೈಹಿಕ ಸುಃಖ ಕೊಡಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಗಂಡ-ಹೆಂಡತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಜೊತೆಗೆ ಒಬ್ಬಂಟಿ ಜೀವನ ಭಾಗ್ಯಶ್ರೀಗೆ ನರಕದಂತೆ ಅನುಸುತ್ತಿತ್ತು.
ಇದರಿಂದ ಬೇಸತ್ತ ಭಾಗ್ಯಶ್ರೀ ಹುಮ್ನಾಬಾದ್ನ ಒಂದು ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಭಾಗ್ಯಶ್ರೀ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ವೀರೇಶ್ ಎಂಬುವರು ಕೆಲಸ ಮಾಡುತ್ತಿದ್ದರು. ಭಾಗ್ಯಶ್ರೀ ಮತ್ತು ವಿರೇಶ್ ನಡುವೆ ಗೆಳೆತನವಾಗಿದೆ. ಗಂಡ ನನಗೆ ದೈಹಿಕ ಸುಃಖ ಕೊಡುತ್ತಿಲ್ಲ ಎಂದು ಭಾಗಶ್ರೀ ವೀರೇಶ್ಗೆ ಹೇಳುತ್ತಿದ್ದಳು. ತನ್ನ ಗಂಡನ ಎಲ್ಲಾ ಸಮಸ್ಯೆಯನ್ನ ವೀರೇಶ್ ಮುಂದೆ ಹೇಳುತ್ತಿದ್ದಳು. ವೀರೇಶ್ ಕೂಡಾ ಭಾಗ್ಯಶ್ರೀ ಜೊತೆಗೆ ಸಲುಗೆಯಿಂದ ಇರಲು ಶುರುಮಾಡಿದ.
ಇದೇ ಸಲುಗೆಯಿಂದ ಇಬ್ಬರ ನಡುವೆ ಪ್ರೇಮಾಂಕುರವಾಯಿತು. ಲೈಂಗಿಂಕ ಸಂಬಂಧ ಕೂಡ ಬೆಳೆಯಿತು. ಗಂಡ ಕೆಲಸಕ್ಕೆ ಹೋದ ಕೂಡಲೇ ಭಾಗ್ಯಶ್ರೀ ಪ್ರಿಯಕರ ವಿರೇಶ್ನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಭಾಗ್ಯಶ್ರೀ ಇಬ್ಬರು ಏಕಾಂತದಲ್ಲಿ ಕಾಲಕಳೆಯುತ್ತಿದ್ದರು. ಕಾಲ ಕಳೆದಂತೆ ರೇವಣಸಿದ್ದ ಭಾಗ್ಯಶ್ರೀಯ ನಡೆ-ನುಡಿ, ಹಾವ ಭಾವದಲ್ಲಿ ಬದಲಾವಣೆಯನ್ನು ಕಂಡನು. ಹೆಂಡತಿ ಬೇರೆ ಯುವಕನ ಜೊತೆಗೆ ಅನೈತಿಕ ಸಂಬಂಧ ಬೇಳೆಸಿದ್ದಾಳೆ ಎಂದು ಗೊತ್ತಾದಾಗ ಪ್ರತಿದಿನವೂ ಕೂಡಾ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು.
ಇದನ್ನೂ ಓದಿ: ಅಕ್ಕನ ಮಗಳನ್ನು ಪ್ರೀತಿಸಿದ ಜಿದ್ದಿಗೆ ಯುವಕನ ಕೊಲೆ; ಪ್ರಕರಣ ಭೇದಿಸಿದ ಬಾಗೇಪಲ್ಲಿ ಪೊಲೀಸರು
ಅಕ್ರಮ ಸಂಬಂಧಕ್ಕೆ ಬ್ರೇಕ್ ಹಾಕು ಎಂದು ರೇವಣಸಿದ್ದಪ್ಪ ಹಲವು ಬಾರಿ ಭಾಗ್ಯಶ್ರೀಗೆ ಹೇಳಿದ್ದಾನೆ. ಆದರೆ, ಭಾಗ್ಯಶ್ರೀ ನೀನು (ರೇವಣಸಿದ್ದ) ನನಗೆ ದೈಹಿಕ ಸುಃಖ ಕೊಡುತ್ತಿಲ್ಲ ಹೀಗಾಗಿ ನಾನು ಬೇರೆಯವನಿಂದ ಆ ಸುಃಖ ಪಡೆಯುತ್ತಿದ್ದನೆಂದು ವಾದ ಮಾಡಲು ಶುರುಮಾಡಿದ್ದಾಳೆ. ನನ್ನ ಅನೈತಿಕ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಿದ್ದಾನೆಂದು ತಿಳಿದ ಭಾಗಶ್ರೀ ಗಂಡನನ್ನೇ ಮುಗಿಸಬೇಕು ಎಂದು ನಿರ್ಧರಿಸಿದ್ದಾಳೆ. ರೇವಣಸಿದ್ದನನ್ನು ಕೊಲೆ ಮಾಡಿದರೇ ನಾನು (ಭಾಗ್ಯಶ್ರೀ) ವಿರೇಶ್ನನ್ನ ಮದುವೆಯಾಗಿ ಸುಃಖವಾಗಿರಬಹುದೆಂದು ನಿರ್ಧರಿಸಿದ್ದಾಳೆ.
ಅವತ್ತು ನವೆಂಬರ್ 13 ಸಂಜೆ 5 ಗಂಟೆ ಸಮಯವಾಗಿತ್ತು. ಭಾಗ್ಯಶ್ರೀ ಗಂಡ ರೇವಣಸಿದ್ದ ಕೆಲಸ ಮುಗಿಸಿಕೊಂಡು ಬೇಗ ಮನೆಗೆ ಬಂದಿದ್ದನು. ಮನೆಗೆ ಬರುವಷ್ಟರಲ್ಲಿ ಭಾಗ್ಯಶ್ರೀ ಮತ್ತು ರೇವಣಸಿದ್ದ ನಡುವೆ ಜಗಳವಾಗಿದೆ. ಜಗಳವಾದ ಕಾರಣ ರೇವಣಸಿದ್ದ ಊಟ ಮಾಡದೆ ನಿದ್ರೆಗೆ ಜಾರಿದ್ದಾನೆ. ರಾತ್ರಿ 9 ಗಂಟೆ ಸುಮಾರಿಗೆ ಭಾಗಶ್ರೀ ತನ್ನ ಪ್ರೀಯಕರ ವೀರೇಶ್ನಿಗೆ ವಾಟ್ಸಪ್ ಕಾಲ ಮಾಡಿದ್ದಾಳೆ.
ಕಾಲ್ನಲ್ಲಿ ನನ್ನ ಗಂಡನನ್ನು ಕೊಲೆ ಮಾಡಿ ಮುಗಿಸೋಣ ಅಂತ ಹೇಳಿದ್ದಾಳೆ. ಅದಕ್ಕೆ ತಕ್ಷಣ ಒಪ್ಪಿಕೊಂಡ ಪ್ರೀಯಕರ ವೀರೇಶ್ ನಾನು ಬೀದರ್ನಲ್ಲಿ ಇದ್ದೇನೆ ಬರುತ್ತೆನೆ ಎಂದು ಹೇಳಿದ್ದಾನೆ. ಪ್ರೇಯಸಿ ಭಾಗ್ಯಶ್ರೀ ಅನತಿಯಂತೆ 14 ನವೆಂಬರ್ ರಂದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ವೀರೇಶ್ ಮನೆಗೆ ಬಂದಿದ್ದಾನೆ. ಭಾಗ್ಯಶ್ರೀ ಹಾಗೂ ವೀರೇಶ್ ಇಬ್ಬರು ಸೇರಿಕೊಂಡು ಮನೆಯ ಹಾಲ್ನಲ್ಲಿ ಕುಳಿತು ಹೇಗೆ ಕೊಲೆ ಮಾಡಬೇಕು? ಹೇಗೆ ಕೊಲೆ ಮಾಡಿದರೆ ನಾವು ಕೊಲೆ ಕೇಸ್ನಿಂದ ತಪ್ಪಿಸಿಕೊಳ್ಳಬಹುದೆಂದು ಪ್ಲ್ಯಾನ್ ಮಾಡಿದ್ದಾರೆ. ಅವರಿಗೆ ತಕ್ಷಣ ಹೊಳೆದದ್ದು ಕುತ್ತಿಗೆ ಇಸುಕಿ ಕೊಲೆ ಮಾಡಿ, ಆಮೇಲೆ ಪ್ಯಾನ್ಗೆ ನೇಣು ಹಾಕೋಣ ಎಂದು ಪ್ಲ್ಯಾನ್ ಮಾಡಿದ್ದಾರೆ.
ತನ್ನ ಗಂಡ ನಿದ್ರೆಗೆ ಜಾರಿರುವುದನ್ನ ಖಚಿತಪಡಿಸಿಕೊಂಡ ಭಾಗ್ಯಶ್ರೀ ತನ್ನ ಪ್ರೀಯಕರ ವೀರೇಶ್ನನ್ನು ಬೇಡ್ ರೂಮ್ಗೆ ಕರೆದಿದ್ದಾಳೆ. ಭಾಗ್ಯಶ್ರೀ ತನ್ನ ಗಂಡ ರೇವಣಸಿದ್ದನ ಕಾಲು ಹಿಡಿದಿದ್ದಾಳೆ, ಪ್ರೀಯಕರ ವಿರೇಶ್ ಕುತ್ತಿಗೆ ಹಿಸುಕಿದ್ದಾನೆ. ಅಷ್ಟರಲ್ಲಿಯೇ ರೇವಣಸಿದ್ದ ಎಚ್ಚರಗೊಂಡಿದ್ದರು. ಸಾವಿನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಹೆಂಡತಿ ಹಾಗೂ ಆಕೆಯ ಪ್ರೀಯಕರನಿಂದ ತಪ್ಪಿಸಿಕೊಂಡು ಬೆಡ್ ರೂಮಿನ ಬಾಗಿಲಿನ ಹತ್ತಿರ ಹೋಗಿದ್ದಾರೆ. ನಂತರ ವೀರೇಶ್ ಹಾಗೂ ಭಾಗ್ಯಶ್ರೀ ರೇವಣಸಿದ್ದ ಅವರ ಕಾಲು ಹಿಡಿದು ಎಳೆದಿದ್ದಾರೆ. ಇಬ್ಬರು ಕಾಲು ಹಿಡಿದು ಎಳೆದ ರಭಸಕ್ಕೆ ರೇವಣಸಿದ್ದ ನೇಲದ ಮೇಲೆ ಬಿದಿದ್ದಿದ್ದಾರೆ. ತಲೆಯ ಹಿಂಭಾಗಕ್ಕೆ ಪೆಟ್ಟು ಬಿದ್ದಿದೆ ರಕ್ತಕೂಡಾ ಬಂದಿದೆ. ನಂತರ ಬಚ್ಚಲು ಮನೆ ಹತ್ತಿರ ಬಿದ್ದಿದ್ದ ಹಗ್ಗ ತೆಗೆದುಕೊಂಡು ಬಂದು ಭಾಗ್ಯಶ್ರೀ ಮತ್ತು ವಿರೇಶ ಇಬ್ಬರೂ ರೇವಣಸಿದ್ದ ಅವರ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ.
ಹೆಂಡತಿ ಭಾಗ್ಯಶ್ರೀ ಹಾಗೂ ಪ್ರೀಯಕರ ವೀರೇಶ್ ಸೇರಿಕೊಂಡು ಭಾಗಶ್ರೀಯ ಗಂಡ ರೇವಣಸಿದ್ದ ಅವರನ್ನು ಕೊಲೆ ಮಾಡುತ್ತಿದ್ದಾಗ, ಸಾಕಷ್ಟು ಶಬ್ದವಾಗಿದೆ. ಪಲ್ಲಂಗ ಕೂಡ ಮುರಿದಿದೆ. ಮೇಲಿನ ಬಾಡಿಗೆ ಮನೆಯಲ್ಲಿ ಬರುತ್ತಿರುವ ಶಬ್ದವನ್ನು ಕೇಳಿದ ಮನೆಯ ಓನರ್ಗೆ ಎಚ್ಚರವಾಗಿದೆ. ಏನೋ ಆಗುತ್ತಿದೆ ಎಂದು ತಿಳಿದು ಒಬ್ಬಳೆ ಹೋಗುವುದು ಬೇಡ ಅಂತ ಪಕ್ಕದ ಮನೆಯವರಿಗೆ ಪೋನ್ ಮಾಡಿ ಕರೆದಿದ್ದಾರೆ. ಮನೆಯ ಓನರ್ ಪಲ್ಲವಿ ಹಾಗೂ ಯುವಕ ಜಗನ್ನಾಥ್ ರೆಡ್ಡಿ ಎಂಬುವರು ಮೇಲೆ ಹೋಗಿ ಬಾಗಿಲು ಬಡಿದಿದ್ದಾರೆ.
ಆದರೂ ಬಾಗಿಲು ತೆರೆದಿಲ್ಲ. ನಂತರ ಪಲ್ಲವಿ ಭಾಗ್ಯಶ್ರಿಗೆ ಕರೆ ಮಾಡಿದ್ದಾರೆ. ಪೋನ್ ಕಾಲ ಕೂಡಾ ಭಾಗ್ಯಶ್ರೀ ರೀಸಿವ್ ಮಾಡಿಲ್ಲ. ನಂತರ ಪದೆ ಪದೇ ಕಾಲ್ ಮಾಡಿದ ಬಳಿಕ ಭಾಗ್ಯಶ್ರೀ ಪೋನ್ ಕಾಲ್ ರೀಸಿವ್ ಮಾಡಿದ್ದಾಳೆ. ಭಾಗ್ಯಶ್ರೀ ಒಬ್ಬಳೆ ಇದ್ದಿಯಾ ಅಥವಾ ಬೇರೆ ಯಾರಾದರೂ ಇದ್ದಾರಾ ಎಂದು ಭಾಗ್ಯಶ್ರೀಗೆ ಪಲ್ಲವಿ ಕೇಳಿದ್ದಾರೆ. ನಾನು ಒಬ್ಬಳೆ ಇದ್ದೀನಿ ಎಂದು ಹೇಳಿ ಬಾಗಿಲು ತೆರೆದಿದ್ದಾಳೆ. ಮನೆಯ ಒಳಗೆ ಹೋದ ಮನೆಯ ಓನರ್ ಪಲ್ಲವಿ ಹಾಗೂ ಪಕ್ಕದ ಮನೆಯ ಹುಡುಗ ಜಗನ್ನಾಥ್ ರೆಡ್ಡಿ ಒಂದು ಕ್ಷಣ ಶಾಕ್ ಆಗಿದ್ದಾರೆ.
ಭಾಗ್ಯಶ್ರೀ ಹಾಗೂ ಪ್ರೀಯಕರ ವಿರೇಶ್ ಇಬ್ಬರು ರೇವಣಸಿದ್ದನ ಕುತ್ತಿಗೆಗೆ ಹಗ್ಗ ಹಾಕಿ ಎಳೆಯುತ್ತಿದ್ದುದ್ದನ್ನು ಕಣ್ಣಾರೆ ನೋಡಿ ಗಾಬರಿಯಾಗಿದ್ದಾರೆ. ಆದರೂ ಧೈರ್ಯ ಮಾಡಿ ಬಿಡಿಸಿದ್ದಾರೆ. ಅಷ್ಟರಲ್ಲಾಗಲೇ ರೇವಣಸಿದ್ದ ಪ್ರಜ್ಞೆ ತಪ್ಪಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು. ಆಗ ವಿರೇಶ್ ಮತ್ತು ಭಾಗ್ಯಶ್ರೀ ನಾವೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೆವೆಂದು ಇಬ್ಬರು ಸೇರಿಕೊಂಡು ರೇವಣಸಿದ್ದ ಅವರನ್ನು ಬೈಕ್ ಮೇಲೆ ಕುಳಿಸಿಕೊಂಡು ಹೋಗಿದ್ದಾರೆ. ನಂತರ ಮನೆಯ ಓನರ್ ಪೊಲೀಸರಿಗೆ 112ಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ.
ದಾರಿ ಮಧ್ಯೆ ರೇವಣಸಿದ್ದ ಅವರ ಜೀವ ಹೋಗಿತ್ತು. ನಂತರ ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿನ ಹಣಕುಣಿ ಗ್ರಾಮಕ್ಕೆ ಹೋಗುವ ರಸ್ತೆಯ ಮೇಲೆ ರೇವಣಸಿದ್ದ ಅವರ ಶವ ಬಿಸಾಕಿ ಅಲ್ಲಿಂದ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಹಮ್ನಾಬಾದ್ ಪಟ್ಟಣ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏನೋ ಮಾಡಲು ಹೋಗಿ, ಈಗ ಅವರಿಬ್ಬರು ಜೈಲು ಸೇರಿದ್ದಾರೆ. ಗಂಡ ದೈಹಿಕ ಸುಃಖ ಕೊಡುತ್ತಿಲ್ಲ ಎಂದು ಅಕ್ರಮ ಸಂಬಂಧ ಬೆಳೆಸಿ ಭಾಗ್ಯಶ್ರೀ ಗಂಡನನ್ನೇ ಕೊಂದುಬಿಟ್ಟಿದ್ದಾಳೆ. ಕೊಲೆ ಮಾಡುವ ಬದಲು ವಿಚ್ಚೆದನ ಪಡೆದು ಇಬ್ಬರು ಮದುವೆಯಾಗಿದ್ದರೆ ಮುಗಿಯುತ್ತಿತ್ತು. ಒಂದು ಬಡಪಾಯಿ ಜೀವವಾದರೂ ಉಳಿಯುತ್ತಿತ್ತು. ಆದರೆ ಕೊಲೆ ಮಾಡಿ ಈಗ ಇಬ್ಬರು ಜೈಲು ಪಾಲಾಗಿದ್ದು ಯಾವ ಸುಃಖ ಕೂಡ ಸಿಗದಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:04 am, Sun, 10 December 23