ಅಕ್ಕನ ಮಗಳನ್ನು ಪ್ರೀತಿಸಿದ ಜಿದ್ದಿಗೆ ಯುವಕನ ಕೊಲೆ; ಪ್ರಕರಣ ಭೇದಿಸಿದ ಬಾಗೇಪಲ್ಲಿ ಪೊಲೀಸರು
ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮದ ನಡುರಸ್ತೆಯಲ್ಲಿ ನಿನ್ನೆ(ಡಿ.07) ಗಜೇಂದ್ರ ಎಂಬ ಯುವಕನ ಕೊಲೆ ನಡೆದಿತ್ತು. ಇದೀಗ ಈ ಪ್ರಕರಣ ಭೇದಿಸಿರುವ ಬಾಗೇಪಲ್ಲಿ ಪೊಲೀಸರು, 3 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆಯಲ್ಲಿ ಅಕ್ಕನ ಮಗಳನ್ನು ಪ್ರೀತಿಸಿದ ದ್ವೇಷಕ್ಕೆ ಯುವಕನನ್ನು ಬರ್ಬರವಾಗಿ ಕೊಂದು ಬಿಸಾಡಿರುವುದು ಬಯಲಾಗಿದೆ.
ಚಿಕ್ಕಬಳ್ಳಾಪುರ, ಡಿ.08: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ(Bagepalli) ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮದ 28 ವರ್ಷದ ಗಜೇಂದ್ರ ಎಂಬ ಯುವಕನನ್ನು ನಿನ್ನೆ(ಡಿ.07) ತಡರಾತ್ರಿ ಜನನಿಬಿಡ ಪ್ರದೇಶದಲ್ಲಿ ನಡುರಸ್ತೆಯಲ್ಲಿ ಬರ್ಬರವಾಗಿ ಕೊಲೆ(Murder) ಮಾಡಲಾಗಿತ್ತು. ಆದರೆ, ಯಾರು ಕೊಲೆ ಮಾಡಿದರು? ಏಕೆ ಕೊಲೆ ಮಾಡಿದರು? ಹೇಗೆ ಕೊಲೆ ಮಾಡಿದರು ಎನ್ನುವುದು ನಿಗೂಢವಾಗಿತ್ತು. ಕೊಲೆ ನಡೆದ 24 ಗಂಟೆಯೊಳಗೆ ಬಾಗೇಪಲ್ಲಿ ಪೊಲೀಸರು ಕೊಲೆಯ ರಹಸ್ಯ ಬಯಲು ಮಾಡಿ, ಕೊಲೆಯ ಆರೋಪಿಗಳಾದ ಸುರೇಂದ್ರಬಾಬು, ಶ್ರೀನಾಥ್ ಹಾಗೂ ವೆಂಕಟೇಶ ಎನ್ನುವವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಅಕ್ಕನ ಮಗಳನ್ನು ಪ್ರೀತಿಸಿದ್ದಕ್ಕೆ ನಡೆಯಿತಾ ಹತ್ಯೆ?
ಇನ್ನು ಕೊಲೆಯಾದ ಗಜೇಂದ್ರ ಹಾಗೂ ಆರೋಪಿಗಳಾದ ಸುರೇಂದ್ರಬಾಬು, ಶ್ರೀನಾಥ್ ಹಾಗೂ ವೆಂಕಟೇಶ್ ಎಲ್ಲರೂ ಸಂಬಂಧಿಕರು, ಮೃತ ಗಜೇಂದ್ರ ಆರೋಪಿ ಸುರೇಂದ್ರ ಬಾಬುನ ಅಕ್ಕನ ಮಗಳೊಬ್ಬಳನ್ನು ಪ್ರೀತಿಸಿ ಮನೆಬಿಟ್ಟು ಕರೆದುಕೊಂಡು ಹೋಗಿದ್ದ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಗೇಪಲ್ಲಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸುರೇಂದ್ರಬಾಬು ಹಾಗೂ ಗಜೇಂದ್ರ ಮಧ್ಯೆ ವಾದ-ವಿವಾದ ನಡೆದು, ವೈಯಕ್ತಿಕ ದ್ವೇಷ ಇತ್ತಂತೆ.
ಇದನ್ನೂ ಓದಿ:ಹಾಡಹಗಲೇ ಗ್ರಾಮ ಪಂಚಾಯ್ತಿ ಸದಸ್ಯನ ಬರ್ಬರ ಕೊಲೆ! ಅನುಮಾನಾಸ್ಪದ ಓರ್ವ ವ್ಯಕ್ತಿ ಅರೆಸ್ಟ್
ಇದರಿಂದ ಗಜೇಂದ್ರನ ಸ್ನೇಹಿತರಾದ ವೆಂಕಟೇಶ ಹಾಗೂ ಸಂಬಂಧಿ ಶ್ರೀನಾಥ್ ಜೊತೆ ಸೇರಿ ಗಜೇಂದ್ರನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಹಾಗೂ ಕೊಲೆಯಾದ ವ್ಯಕ್ತಿ ಒಬ್ಬರಿಗೊಬ್ಬರು ರಕ್ತಸಂಬಂಧಿಗಳೇ, ಎಲ್ಲರೂ ಕ್ಯಾಂಟರ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅಕ್ಕನ ಮಗಳನ್ನು ಪ್ರೀತಿಸಿ ಪರಾರಿಯಾಗಿದ್ದು ಒಂದಡೆಯಾದರೆ, ಮತ್ತೊಂದಡೆ ಪ್ರಿಯಕರನನ್ನು ತೊರೆದು ತವರುಮನೆಯಲ್ಲಿರುವ ಆಕೆ ಬೇರೆಯವರನ್ನು ಮದುವೆಯಾಗಲು ಒಪ್ಪದ ಕಾರಣ ಆಕೆಯ ಪ್ರಿಯತಮನನ್ನು ಕೊಂದಿದ್ದು ವಿಪರ್ಯಾಸ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ