ಸಿಲ್ಕ್ ಸ್ಯಾರಿ ಖರೀದಿಸಿ ದೋಖಾ: ಕಿಡ್ನ್ಯಾಪ್​ ಕೇಸ್ ಕೊಟ್ಟು ತಗಲಾಕ್ಕೊಂಡ ವಂಚಕಿ!

ದೇವನಹಳ್ಳಿ: ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ನೀಡಿ ಕೊನೆಗೆ ವಂಚಕಿಯೇ ಪೊಲೀಸರ ಕೈಗೆ ತಗ್ಲಾಕ್ಕೊಂಡಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ರೇಷ್ಮೆ ಸೀರೆಗಳನ್ನ ಪಡೆದು ಹಣ ನೀಡದೆ ವಂಚಿಸುತ್ತಿದ್ದ ಕಿಲಾಡಿ ಮಹಿಳೆಯನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೊಡ್ಡ ದೊಡ್ಡ ಅಧಿಕಾರಿಗಳ ಹೆಸರು ಹೇಳಿ ಸೀರೆಗಳನ್ನ ಪಡೆಯುತ್ತಿದ್ದ ವಂಚಕಿ, ಅಕ್ಕ-ಪಕ್ಕದ ಮನೆಗಳಲ್ಲಿ ನೇಯ್ದ ಸೀರೆಗಳನ್ನ ತಂದುಕೊಟ್ಟ ನೇಕಾರರಿಗೆ ಮಕ್ಮಲ್ ಟೋಪಿ ಹಾಕ್ತಿದ್ಲು. ಆರೋಪಿ ಶಶಿಕಲಾ ನಂಬಿ ಸೀರೆಗಳನ್ನ ನೀಡಿ ಹಲವು ಕುಟುಂಬಗಳು ಬೀದಿಗೆ ಬಂದಿವೆ. […]

ಸಿಲ್ಕ್ ಸ್ಯಾರಿ ಖರೀದಿಸಿ ದೋಖಾ: ಕಿಡ್ನ್ಯಾಪ್​ ಕೇಸ್ ಕೊಟ್ಟು ತಗಲಾಕ್ಕೊಂಡ ವಂಚಕಿ!
ಸಾಧು ಶ್ರೀನಾಥ್​

Updated on: Feb 29, 2020 | 8:29 AM

ದೇವನಹಳ್ಳಿ: ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ನೀಡಿ ಕೊನೆಗೆ ವಂಚಕಿಯೇ ಪೊಲೀಸರ ಕೈಗೆ ತಗ್ಲಾಕ್ಕೊಂಡಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ರೇಷ್ಮೆ ಸೀರೆಗಳನ್ನ ಪಡೆದು ಹಣ ನೀಡದೆ ವಂಚಿಸುತ್ತಿದ್ದ ಕಿಲಾಡಿ ಮಹಿಳೆಯನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೊಡ್ಡ ದೊಡ್ಡ ಅಧಿಕಾರಿಗಳ ಹೆಸರು ಹೇಳಿ ಸೀರೆಗಳನ್ನ ಪಡೆಯುತ್ತಿದ್ದ ವಂಚಕಿ, ಅಕ್ಕ-ಪಕ್ಕದ ಮನೆಗಳಲ್ಲಿ ನೇಯ್ದ ಸೀರೆಗಳನ್ನ ತಂದುಕೊಟ್ಟ ನೇಕಾರರಿಗೆ ಮಕ್ಮಲ್ ಟೋಪಿ ಹಾಕ್ತಿದ್ಲು. ಆರೋಪಿ ಶಶಿಕಲಾ ನಂಬಿ ಸೀರೆಗಳನ್ನ ನೀಡಿ ಹಲವು ಕುಟುಂಬಗಳು ಬೀದಿಗೆ ಬಂದಿವೆ.

ಕಿಡ್ನ್ಯಾಪ್ ಕೇಸ್ ನೀಡಿ ಸಿಕ್ಕಿಬಿದ್ದ ವಂಚಕಿ:
ಧರ್ಮವರಂ, ಹಿಂದೂಪುರ ಮತ್ತು ಬೆಂಗಳೂರಿನ ಹಲವು ಕಡೆ ಸಾಕಷ್ಟು ಜನ ನೇಕಾರರಿಗೆ ಮಹಿಳೆ ವಂಚಿಸಿದ್ದಾಳೆ. ಮೊದಲಿಗೆ ಒಂದೆರೆಡು ಲಕ್ಷ ಹಣ ಕೊಟ್ಟು ನೂರಾರು ರೇಷ್ಮೆ ಸೀರೆಗಳನ್ನ ಮಹಿಳೆ ಪಡೆಯುತ್ತಿದ್ದಳು. ನಂತರ ಬೌನ್ಸ್ ಚೆಕ್​ಗಳನ್ನ ನೀಡಿ ಸೀರೆ ಕೊಟ್ಟವರಿಗೆ ಧಮ್ಕಿ ಹಾಕುತ್ತಿದ್ದಳು. ವಂಚನೆಗೊಳಗಾದವರು ಪೊಲೀಸರಿಗೆ ದೂರು ಕೊಡಲು ಬಂದ್ರೆ ಹಣ ಕೊಡುವುದಾಗಿ ಮನೆಗೆ ಕರೆಸಿಕೊಳ್ಳುತ್ತಿದ್ದಳು. ನಂತರ ಮನೆಯಲ್ಲಿ ಅತ್ಯಾಚಾರ ಮತ್ತು ಕಿಡ್ನ್ಯಾಪ್ ಮಾಡಲು ಬಂದಿದ್ರು ಅಂತ ಅವರ ವಿರುದ್ಧವೇ ವಂಚಕಿ ಕೇಸ್ ಹಾಕ್ತಿದ್ಲು.

ಅದೇ ರೀತಿ ಹಣ ಕೇಳಲು ಬಂದ ಆಂಧ್ರ ಮೂಲದವರ ವಿರುದ್ಧವೂ ವಂಚಕಿ ಶಶಿಕಲಾ ಅಪಹರಣ ಕೇಸ್ ದಾಖಲಿಸಿದ್ದಳು. ಫೆಬ್ರವರಿ 27ರಂದು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪೊಲೀಸರ ತನಿಖೆಯ ವೇಳೆ ಶಶಿಕಲಾ ವಂಚನೆ ಬೆಳಕಿಗೆ ಬಂದಿದ್ದು, ದೇವನಹಳ್ಳಿ, ಯಲಹಂಕ, ಬೈಯ್ಯಪ್ಪನಹಳ್ಳಿ, ಬಾಣಸವಾಡಿ ಸೇರಿದಂತೆ ಆಂಧ್ರದಲ್ಲಿ ಹಲವರಿಗೆ ವಂಚನೆ ಮಾಡಿರುವುದು ಬಯಲಾಗಿದೆ.

ಈ ಬಗ್ಗೆ ತನಿಖೆ ನಡೆಸಿದ ದೇವನಹಳ್ಳಿ ಪಿಎಸ್ಐ ನಾಗರಾಜ್ ವಂಚಕಿ ಶಶಿಕಲಾರನ್ನು ಬಂಧಿಸಿದ್ದಾರೆ. ಆಂಧ್ರದಲ್ಲಿ ಓರ್ವ ಮಾಜಿ ಶಾಸಕನಿಗೂ ವಂಚಿಸಿ ಅವನ ವಿರುದ್ಧವೇ ದೂರು ನೀಡಿದ್ದಾಳೆ ಎಂದು ತಿಳಿದುಬಂದಿದೆ.


Published On - 8:28 am, Sat, 29 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us