ಮಧ್ಯಪ್ರದೇಶ: ಮಹಿಳೆ ಮೇಲೆ 6 ಜನರಿಂದ ಸಾಮೂಹಿಕ ಅತ್ಯಾಚಾರ, 2 ದಿನಗಳಲ್ಲಿ ನಾಲ್ಕನೇ ಘಟನೆ

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರವೆಸಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಕಳೆದ ಎರಡು ದಿನಗಳಲ್ಲಿ ಇಂಥಾ ನಾಲ್ಕು ಪ್ರಕರಣಗಳು ವರದಿಯಾಗಿವೆ. ಮಹುವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಕ್ಟೋಬರ್ 9 ರಂದು ಈ ಘಟನೆ ನಡೆದಿದೆ ಎಂದು ಎಎಸ್ಪಿ ಗೋಪಾಲ್ ಸಿಂಗ್ ಧಕಡ್ ಹೇಳಿದ್ದಾರೆ.

ಮಧ್ಯಪ್ರದೇಶ: ಮಹಿಳೆ ಮೇಲೆ 6 ಜನರಿಂದ ಸಾಮೂಹಿಕ ಅತ್ಯಾಚಾರ, 2 ದಿನಗಳಲ್ಲಿ ನಾಲ್ಕನೇ ಘಟನೆ
ಕ್ರೈಂImage Credit source: Free Press Journal
Follow us
ನಯನಾ ರಾಜೀವ್
|

Updated on:Dec 02, 2024 | 12:41 PM

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರವೆಸಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಕಳೆದ ಎರಡು ದಿನಗಳಲ್ಲಿ ಇಂಥಾ ನಾಲ್ಕು ಪ್ರಕರಣಗಳು ವರದಿಯಾಗಿವೆ. ಮಹುವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಕ್ಟೋಬರ್ 9 ರಂದು ಈ ಘಟನೆ ನಡೆದಿದೆ ಎಂದು ಎಎಸ್ಪಿ ಗೋಪಾಲ್ ಸಿಂಗ್ ಧಕಡ್ ಹೇಳಿದ್ದಾರೆ.

ಮಹಿಳೆ ಮತ್ತು ಆಕೆಯ ಪರಿ ಇಬ್ಬರೂ ದಿನಸಿ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಮನೆಯ ಕೆಲಸ ಮಾಡಿಕೊಡಿ ಇನ್ನೂ ಹೆಚ್ಚಿನ ಹಣ ಗಳಿಸಬಹುದು ಎಂದು ಶಿವಂ ಹಾಗೂ ಕಾರು ಕಟಾರೆ ಎಂಬುವವರು ಮಹಿಳೆಗೆ ಆಫರ್ ನೀಡಿದ್ದರು. ಆಕೆಯನ್ನು ಪಿಪ್ರಾಯಿ ಎಂಬ ಗ್ರಾಮಕ್ಕೆ ಕರೆತಂದು ಬಿಟ್ಟು ಏನೂ ಹೇಳದೆ ಹೊರಟು ಹೋಗಿದ್ದರು. ಮಹಿಳೆ ಮನೆ ಒಳಗೆ ಬಂದಾಗ ಅಲ್ಲಿ ಆರು ಮಂದಿ ಪುರುಷರು ಕುಳಿತಿದ್ದರು. ಎಲ್ಲರೂ ಸೇರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಅವರಲ್ಲಿ ಒಬ್ಬರು ಅಪರಾಧದ ವೀಡಿಯೊವನ್ನು ಸಹ ರೆಕಾರ್ಡ್ ಮಾಡಿದ್ದಾರೆ. ಬಳಿಕ ಮಹಿಳೆಯನ್ನು ಬೇರೆಡೆ ಬಿಟ್ಟು ಪರಾರಿಯಾಗಿದ್ದಾರೆ. ಮನೆಗೆ ಮರಳಿದ ಮಹಿಳೆ ತನ್ನ ಪತಿಗೆ ಸಂಕಟವನ್ನು ವಿವರಿಸಿದಾಗ, ಅವರು ಆ ಇಬ್ಬರನ್ನು ಭೇಟಿಯಾಗಿ ಪ್ರಶ್ನೆ ಮಾಡಿದಾಗ ಪೊಲೀಸರಿಗೆ ಬಹಿರಂಗಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ದಂಪತಿಗೆ ಬೆದರಿಕೆ ಹಾಕಿದ್ದಾರೆ.

ಮತ್ತಷ್ಟು ಓದಿ: ಲವರ್​ನ ಕೊಂದು ಆತ್ಮಹತ್ಯೆಗೆ ಆನ್​ಲೈನ್​ನಲ್ಲಿ ಹಗ್ಗ ಆರ್ಡರ್​: ಪ್ರೀತಿ ಕೊಂದ ಕೊಲೆಗಾರನ ಸ್ಫೋಟಕ ಅಂಶ ಬೆಳಕಿಗೆ

ಆರೋಪಿಗಳು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿರುವುದು ಪೊಲೀಸರಿಗೆ ತಿಳಿದುಬಂದಿದ್ದು, ದಂಪತಿಗೆ ಗೊತ್ತಾಗಿ ಪೊಲೀಸರಿಗೆ ದೂರು ನೀಡಿ ದೂರು ದಾಖಲಿಸಿದ್ದಾರೆ. ವರದಿಯ ಮೇರೆಗೆ ಪೊಲೀಸರು ಇಬ್ಬರು ಸಹೋದರರನ್ನು ಬಂಧಿಸಿದ್ದು, ಪ್ರಕರಣದ ಇತರ ಆರೋಪಿಗಳನ್ನು ಬಂಧಿಸಲು ಶೋಧ ನಡೆಸಿದ್ದಾರೆ.

ಮತ್ತೊಂದು ಘಟನೆ ಗಂಡನ ಸ್ನೇಹಿತರಿಂದಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಶಿವಪುರಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನ ಮೂವರು ಸ್ನೇಹಿತರು ಆತನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೋರ್ಸಾ ಪೊಲೀಸ್ ವ್ಯಾಪ್ತಿಯ ನಂದಪುರ ಗ್ರಾಮದಲ್ಲಿ ನವೆಂಬರ್ 27 ರಂದು ಈ ಘಟನೆ ನಡೆದಿದೆ ಎಂದು ಎಎಸ್ಪಿ ಗೋಪಾಲ್ ಸಿಂಗ್ ಧಕಡ್ ತಿಳಿಸಿದ್ದಾರೆ.

ಘಟನೆಯ ವೇಳೆ ಅತ್ತೆಯಂದಿರು ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಕಾರಣ ಮಹಿಳೆ ಹಾಗೂ ಆಕೆಯ ಮಗು ಮನೆಯಲ್ಲಿದ್ದರು. ಮೂವರು ಆರೋಪಿಗಳು ಗೋಡೆ ಏರಿ ಮನೆಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:41 pm, Mon, 2 December 24