Ghaziabad Crime: ಆಭರಣ ಕದ್ದಿದ್ದಾಳೆ ಎಂದು ಆರೋಪಿಸಿ ಯುವತಿ ಮೇಲೆ ಬ್ಲೇಡ್​, ರಾಡ್​ನಿಂದ ಹಲ್ಲೆ ನಡೆಸಿ ಹತ್ಯೆಗೈದ ಸಂಬಂಧಿಕರು

ಯುವತಿಯೊಬ್ಬಳು ತಮ್ಮ ಮನೆಯಲ್ಲಿ ಆಭರಣ ಕದ್ದಿದ್ದಾಳೆ ಎಂದು ಆರೋಪಿಸಿ ಸಂಬಂಧಿಕರು ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ಗಾಜಿಯಾಬಾದ್​ನಲ್ಲಿ ನಡೆದಿದೆ

Ghaziabad Crime: ಆಭರಣ ಕದ್ದಿದ್ದಾಳೆ ಎಂದು ಆರೋಪಿಸಿ ಯುವತಿ ಮೇಲೆ ಬ್ಲೇಡ್​, ರಾಡ್​ನಿಂದ ಹಲ್ಲೆ ನಡೆಸಿ ಹತ್ಯೆಗೈದ ಸಂಬಂಧಿಕರು
ಸಾವು
Image Credit source: Indian Express

Updated on: Jun 22, 2023 | 7:49 AM

ಯುವತಿಯೊಬ್ಬಳು ತಮ್ಮ ಮನೆಯಲ್ಲಿ ಆಭರಣ ಕದ್ದಿದ್ದಾಳೆ ಎಂದು ಆರೋಪಿಸಿ ಸಂಬಂಧಿಕರು ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ಗಾಜಿಯಾಬಾದ್​ನಲ್ಲಿ ನಡೆದಿದೆ.ಯುವತಿಯನ್ನು ತಪ್ಪೊಪ್ಪಿಕೊಳ್ಳುವಂತೆ ಬಲವಂತ ಮಾಡಿ ಬ್ಲೇಡ್​ನಿಂದ ಮೈ-ಕೈ ಮೇಲೆ ಹಲ್ಲೆ ನಡೆಸಿದ್ದರು. ಆಕೆಯ ಕೂಗು ಕೇಳಬಾರದು ಎಂದು ಜೋರಾಗಿ ಸಂಗೀತವನ್ನು ಹಾಕಿದ್ದರು. ಯುವತಿ ಮೃತಪಟ್ಟ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ, ಎರಡು ದಿನಗಳ ಕಾಲ ಜೋರಾಗಿ ಸಂಗೀತ ಕೇಳಿಸುತ್ತಿದ್ದ ಕಾರಣ ಅಕ್ಕ ಪಕ್ಕದ ಮನೆಯವರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸಮೀನಾ ಅವರು ಬರ್ತ್​ ಡೇ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಗಾಜಿಯಾಬಾದ್​ನಲ್ಲಿರುವ ಸಂಬಂಧಿಕರಾದ ಹೀನಾ ಹಾಗೂ ರಮೇಶ್ ಮನೆಗೆ ಹೋಗಿದ್ದರು. ಮನೆಯಲ್ಲಿ 5 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳುವಾಗಿದೆ ಅದನ್ನು ಸಮೀನಾ ಕದ್ದಿದ್ದಾರೆ ಎಂದು ದಂಪತಿ ಶಂಕಿಸಿದ್ದಾರೆ.

ಯುವತಿಯ ಮೇಲೆ ಅವರು ರಾಡ್ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಆಕೆಯ ದೇಹವನ್ನು ಬ್ಲೇಡ್​ನಿಂದ ಕತ್ತರಿಸಿದ್ದರು, ಆಕೆಯ ಕೂಗು ಯಾರಿಗೂ ಕೇಳಬಾರದೆಂದು ಮ್ಯೂಸಿಕ್ ಹಾಕಿದ್ದರು.

ಮತ್ತಷ್ಟು ಓದಿ:ಚೀಲದಲ್ಲಿ ಸಿಕ್ಕ ಮೃತದೇಹ: 13 ದಿನಗಳೆದರೂ ಸಿಗದ ಸುಳಿವು, ಟ್ಯಾಟು ಬೆನ್ನತ್ತಿ ತಮಿಳುನಾಡಿಗೆ ಹೊರಟ ಮಾರತ್ತಹಳ್ಳಿ ಪೊಲೀಸರು

ಸಮೀನಾ ಸಾವನ್ನಪ್ಪಿದ್ದಾಳೆ ಎಂದು ತಿಳಿದಾಗ ಅಲ್ಲಿಂದ ಆರೋಪಿಗಳು ಪರಾರಿಯಾಗಿದ್ದಾರೆ, ಸಂಗೀತ ಹಾಗೆಯೇ ಕೇಳುತ್ತಿತ್ತು. ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us