AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡ ಹೊಸ ಸೀರೆ ತಂದುಕೊಟ್ಟಿಲ್ಲ ಎಂದು ಮಹಿಳೆ ಆತ್ಮಹತ್ಯೆ

ಗಂಡ ಹೊಸ ಸೀರೆ ತಂದುಕೊಟ್ಟಿಲ್ಲ ಎಂದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ದುಮ್ಕಾ ಜಿಲ್ಲೆಯ ಬಾಗ್‌ಜೋಪಾ ಗ್ರಾಮದಲ್ಲಿ 26 ವರ್ಷದ ಮಹಿಳೆಯೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಡ ಹೊಸ ಸೀರೆ ತಂದುಕೊಟ್ಟಿಲ್ಲ ಎಂದು ಮಹಿಳೆ ಆತ್ಮಹತ್ಯೆ
ಸೀರೆImage Credit source: Freepik
Follow us
ನಯನಾ ರಾಜೀವ್
|

Updated on: Oct 13, 2024 | 8:52 AM

ಗಂಡ ಹೊಸ ಸೀರೆ ತಂದುಕೊಟ್ಟಿಲ್ಲ ಎಂದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ದುಮ್ಕಾ ಜಿಲ್ಲೆಯ ಬಾಗ್‌ಜೋಪಾ ಗ್ರಾಮದಲ್ಲಿ 26 ವರ್ಷದ ಮಹಿಳೆಯೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಳನ್ನು ಸೆಂಡೋ ದೇವಿ ಎಂದು ಗುರುತಿಸಲಾಗಿದ್ದು, ಪತಿ ತನಗೆ ದಸರಾ ಸಂದರ್ಭದಲ್ಲಿ ಸೀರೆ ತಂದುಕೊಟ್ಟಿಲ್ಲ ಎಂದು ಅಸಮಾಧಾನ ಹೊಂದಿದ್ದಳು.

ಮಹಿಳೆ ದಸರಾಕ್ಕೆ ಹೊಸ ಸೀರೆಯನ್ನು ಕೇಳಿದ್ದಳು ಆದರೆ ಟ್ರಾಕ್ಟರ್ ಡ್ರೈವರ್ ಆಗಿರುವ ಅವರ ಪತಿಗೆ ತಂದುಕೊಡಲು ಸಾಧ್ಯವಾಗಿರಲಿಲ್ಲ, ಹೀಗಾಗಿ ಆಕೆ ತಪ್ಪು ಹೆಜ್ಜೆಯಿಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ತನ್ನ ಕಾಯಿಲೆ ಗುಣಪಡಿಸಿಕೊಳ್ಳಲು ಗಂಡನ ಜತೆ ಸೇರಿ ನವಜಾತ ಶಿಶುವನ್ನು ಬಲಿಕೊಟ್ಟ ಮಹಿಳೆ

ಮತ್ತೊಂದು ಸುದ್ದಿ 

ಐದು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ದನದ ಕೊಟ್ಟಿಗೆಯಲ್ಲಿ ನೇಣಿಗೆ ಶರಣು

ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ದಂಪತಿ (couple) ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ರಾಜು(34) ಮತ್ತು ಲಕ್ಷ್ಮೀ(30) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ರಾಜು ಹಾಗೂ ಲಕ್ಷ್ಮೀ ಕಳೆದ ಐದು ವರ್ಷದ ಹಿಂದೆ ಮದುವೆಯಾಗಿದ್ದರು. ಸದ್ಯ ದಂಪತಿ ಆತ್ಮಹತ್ಯೆಯಿಂದ ಮೂರು ವರ್ಷದ ಹೆಣ್ಣುಮಗು ಅನಾಥವಾಗಿದೆ. ಆತ್ಮಹತ್ಯೆ ರಾಜು ದಂಪತಿಯ ತಂದೆ, ತಾಯಿ ಧರ್ಮಸ್ಥಳಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಕ್ಕೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ