ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಆಪ್ತ ಸ್ನೇಹಿತನ ಕೊಲೆ; ಆರೋಪಿಗಳ ಕಾಲಿಗೆ ಗುಂಡೇಟು

ಶುಕ್ರವಾರ ರಾತ್ರಿ ಶಿವರಾಜ ಕಮ್ಮಾರ ಮತ್ತು ಆತನ ಸ್ನೇಹಿತರು ಒಟ್ಟಿಗೆ ಹಬ್ಬ ಆಚರಿಸಿದ್ದಾರೆ. ಆದರೆ ರಾತ್ರಿ ಅದೇನು ಆಯ್ತು ಏನೋ ಗೊಪ್ಪನಕೊಪ್ಪದ ಬಳಿ ಸ್ನೇಹಿತರೇ ಶಿವರಾಜ ಕಮ್ಮಾರ್​ನನ್ನು ಕೊಲೆ ಮಾಡಿದ್ದರಾರೆ. ಅಶೋಕ ನಗರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಆಪ್ತ ಸ್ನೇಹಿತನ ಕೊಲೆ; ಆರೋಪಿಗಳ ಕಾಲಿಗೆ ಗುಂಡೇಟು
ಸುದೀಪ್​, ಕಿರಣ್​​
Follow us
| Updated By: ವಿವೇಕ ಬಿರಾದಾರ

Updated on: Oct 12, 2024 | 10:52 AM

ಹುಬ್ಬಳ್ಳಿ, ಅಕ್ಟೋಬರ್​ 12: ಕ್ಷುಲ್ಲಕ ಕಾರಣಕ್ಕೆ ಆಪ್ತ ಸ್ನೇಹಿತನನ್ನೇ (Friend) ಕೊಲೆ ಮಾಡಿದ್ದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಪೊಲೀಸರು (Police) ಬಂಧಿಸಿದ್ದಾರೆ. ಶಿವರಾಜ ಕಮ್ಮಾರ ​(23) ಕೊಲೆಯಾದ ಯುವಕ. ಸುದೀಪ ರಾಯಾಪುರ, ಕಿರಣ್​ ಕೊಲೆ ಮಾಡಿದ ಆರೋಪಿಗಳು.

ಶಿವರಾಜ ಕಮ್ಮಾರ ಮತ್ತು ಸುದೀಪ ರಾಯಾಪುರ ಇಬ್ಬರೂ ಸ್ನೇಹಿತರಾಗಿದ್ದು, ಶುಕ್ರವಾರ ಇಬ್ಬರು ಒಟ್ಟಿಗೆ ಮನೆಯಲ್ಲಿ ಹಬ್ಬ ಮಾಡಿದ್ದರು. ಹಬ್ಬ ಆಚರಿಸಿದ ಬಳಿಕ ಶಿವರಾಜ ಕಮ್ಮಾರ ಹೊರಗಡೆ ಹೋಗಿದ್ದಾನೆ. “ಬೇಗ ಬರುತ್ತೇನೆ ಅಂತ ಅಮ್ಮ” ಅಂತ ಹೇಳಿ ಹೋಗಿದ್ದಾನೆ. ಆದರೆ ಶಿವರಾಜ ಕಮ್ಮಾರ ಜೀವಂತವಾಗಿ ಮನೆಗೆ ಬರಲಿಲ್ಲ.

ಶಿವರಾಜ ಕಮ್ಮಾರ​​ನ ತಲೆಗೆ ರಾಡ್​ನಿಂದ ಹೊಡೆದು, ಬಳಿಕ 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಗೋಪನಕೊಪ್ಪದ ಬಳಿ ಕೊಲೆ ಮಾಡಲಾಗಿದೆ. ಹೋಗಿ ಬರುತ್ತೇನೆ ಅಂತ ಹೇಳಿ ಹೋದ ಮಗ ಮರಳಿ ಜೀವಂತವಾಗಿ ಬಾರದೆ, ಶವವಾಗಿ ಬಂದಿದ್ದನ್ನು ಕಂಡು ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

ಆರೋಪಿಗೆ ಪೊಲೀಸ್​ ಗುಂಡೇಟು

ಶಿವರಾಜ ಕಮ್ಮರ್​​ನನ್ನು​ ಹತ್ಯೆಗೈದ ಆರೋಪಿಗಳಾದ ಸುದೀಪ್, ಕಿರಣ್ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಇನ್ನುಳಿದ ಆರೋಪಿಗಳು ಬೀಡು ಬಿಟ್ಟಿದ್ದ ಸ್ಥಳಕ್ಕೆ ಅಶೋಕನಗರ ಠಾಣೆಯ ಪೊಲೀಸರು ಸುದೀಪ್​ ಮತ್ತು ಕಿರಣ್​ನನ್ನು ಕರೆದೊಯ್ದಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದರು.

ಆಗ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಹಳೇ ಹುಬ್ಬಳ್ಳಿ ಠಾಣಾ ವ್ಯಾಪ್ತಿಯ ಹೊರವಲಯದಲ್ಲಿ ಘಟನೆ ನಡೆದಿದೆ. ಆರೋಪಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಶೋಕ ನಗರ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಇದನ್ನೂ ಓದಿ: ಪ್ರೇಯಸಿ ಪ್ರೀತಿಸಿ ಕೈಕೊಟ್ಟಳು ಅಂತ ಆಕೆಯೊಂದಿಗಿನ ಖಾಸಗಿ ಫೋಟೋ ಹರಿಬಿಟ್ಟ ದರ್ಶನ್​!

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಶೋಕ ನಗರ ಪೊಲೀಸ್​ ಠಾಣಾ ವ್ಯಾಪ್ತಿಯ ಗೋಪನಕೊಪ್ಪ ವೃತ್ತದಲ್ಲಿ ಶುಕ್ರವಾರ ರಾತ್ರಿ ಕೊಲೆಯಾಗಿದೆ.

ಆರೇಳು ಜನರಿಂದ ಶಿವರಾಜ್​ನನ್ನು ಹತ್ಯೆ ಮಾಡಲಾಗಿದೆ. ಹಳೇ ದ್ವೇಷ, ಹಣದ ವ್ಯವಹಾರ ಇತ್ತೆಂಬ ಮಾಹಿತಿ ಸಿಕ್ಕಿದೆ. ಮೂವರು ಆರೋಪಿಗಳನ್ನು ರಾತ್ರಿ ವಶಕ್ಕೆ ಪಡೆದಿದ್ದೇವೆ. ಇಬ್ಬರು ಆರೋಪಿಗಳು ಉಳಿದವರ ಬಗ್ಗೆ ಹೇಳುತ್ತೇವೆ ಅಂದಿದ್ದರು. ಹೀಗಾಗಿ, ಹಳೇ ಹುಬ್ಬಳ್ಳಿ ರೈಲ್ವೆ ಕ್ವಾಟ್ರಸ್ ಬಳಿ ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿ, ಪರಾರಿಯಾಗಲು ಮುಂದಾಗಿದ್ದರು.

ಈ ವೇಳೆ ನಮ್ಮ ಸಿಬ್ಬಂದಿ ಪಿಎಸ್ಐ ಸಾತಣ್ಣನವರ ಮತ್ತು ಮಂಜು ಆತ್ಮ ರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ಮಾಡುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮೈಸೂರು ದಸರಾ 2024: ಜಂಬೂಸವಾರಿಗೆ ಸಿದ್ದತೆಯನ್ನು ಲೈವ್ ಆಗಿ ನೋಡಿ​
ಮೈಸೂರು ದಸರಾ 2024: ಜಂಬೂಸವಾರಿಗೆ ಸಿದ್ದತೆಯನ್ನು ಲೈವ್ ಆಗಿ ನೋಡಿ​
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್
ವಿಜಯದಶಮಿಯ ದಿನವಾದ ಇಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ವಿಜಯದಶಮಿಯ ದಿನವಾದ ಇಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
Daily Devotional: ವಿಜಯದಶಮಿ ಆಚರಣೆ ವಿಧಾನ ಹಾಗೂ ಮಹತ್ವ ತಿಳಿಯಿರಿ
Daily Devotional: ವಿಜಯದಶಮಿ ಆಚರಣೆ ವಿಧಾನ ಹಾಗೂ ಮಹತ್ವ ತಿಳಿಯಿರಿ
ಮೈಸೂರು-ದರ್ಭಾಂಗ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ: ಅಪಘಾತದ ಭಯಾನಕ ದೃಶ್ಯಗಳು
ಮೈಸೂರು-ದರ್ಭಾಂಗ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ: ಅಪಘಾತದ ಭಯಾನಕ ದೃಶ್ಯಗಳು
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾಗೆ ಮಕ್ಕಳಿಂದ ಸಿಕ್ತು ಭರ್ಜರಿ ಸ್ವಾಗತ
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾಗೆ ಮಕ್ಕಳಿಂದ ಸಿಕ್ತು ಭರ್ಜರಿ ಸ್ವಾಗತ
ಗೃಹಲಕ್ಷ್ಮಿ ಹಣದಲ್ಲಿ ದೇವಿಗೆ ಕಿರೀಟ: ಸಿದ್ದರಾಮಯ್ಯ ಹಾಡಿಹೊಗಳಿದ ಮಹಿಳೆ
ಗೃಹಲಕ್ಷ್ಮಿ ಹಣದಲ್ಲಿ ದೇವಿಗೆ ಕಿರೀಟ: ಸಿದ್ದರಾಮಯ್ಯ ಹಾಡಿಹೊಗಳಿದ ಮಹಿಳೆ
ರವಿ ಕೇಸ್ ಗುರಾಣಿಯಾಗಿ ಬಳಸಲು ವಾಪಸ್ಸು ಪಡೆದಿರುವ ಗುಮಾನಿ ದಟ್ಟವಾಗುತ್ತಿದೆ
ರವಿ ಕೇಸ್ ಗುರಾಣಿಯಾಗಿ ಬಳಸಲು ವಾಪಸ್ಸು ಪಡೆದಿರುವ ಗುಮಾನಿ ದಟ್ಟವಾಗುತ್ತಿದೆ
ಜಾತಿಗಣತಿ ಬಗ್ಗೆ ಮೊದಲು ಬಿಜೆಪಿ ತನ್ನ ನಿಲುವು ಪ್ರಕಟಿಸಲಿ: ಡಿಕೆ ಶಿವಕುಮಾರ್
ಜಾತಿಗಣತಿ ಬಗ್ಗೆ ಮೊದಲು ಬಿಜೆಪಿ ತನ್ನ ನಿಲುವು ಪ್ರಕಟಿಸಲಿ: ಡಿಕೆ ಶಿವಕುಮಾರ್
ತಾಯಿ ಜಗನ್ಮಾತೆಯ ಕೃಪೆಯಿಂದ ಬಳ್ಳಾರಿ ವಾಪಸ್ಸಾಗೋದು ಸಾಧ್ಯವಾಗಿದೆ: ರೆಡ್ಡಿ
ತಾಯಿ ಜಗನ್ಮಾತೆಯ ಕೃಪೆಯಿಂದ ಬಳ್ಳಾರಿ ವಾಪಸ್ಸಾಗೋದು ಸಾಧ್ಯವಾಗಿದೆ: ರೆಡ್ಡಿ