AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಯಸಿ ಪ್ರೀತಿಸಿ ಕೈಕೊಟ್ಟಳು ಅಂತ ಆಕೆಯೊಂದಿಗಿನ ಖಾಸಗಿ ಫೋಟೋ ಹರಿಬಿಟ್ಟ ದರ್ಶನ್​!

ಬಾಗಲಗುಂಟೆಯ ಫರ್ನಿಚರ್ ಅಂಗಡಿಯಲ್ಲಿ ಯುವತಿ ಸೇಲ್ಸ್ ಕೆಲಸ ಮಾಡುತ್ತಿದ್ದಳು. ನನ್ನ ಪ್ರೀತಿ ಮಾಡಿಲ್ಲ ಅಂದರೆ ನಿನ್ನ ಜೀವನ ಹಾಳು ಮಾಡುತ್ತೇನೆಂದು ಆರೋಪಿ ದರ್ಶನ್​ ಬೆದರಿಕೆ ಕೂಡ ಹಾಕಿದ್ದ. ವಾಟ್ಸಾಪ್ ಸ್ಟೇಟಸ್ ಹಾಗೂ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ಖಾಸಗಿ ಫೋಟೋ ಹಾಕಿ ಮಾನಹಾನಿ ಮತ್ತು ತೇಜೋವಧೆಗೆ ಮುಂದಾಗಿದ್ದ. 

ಪ್ರೇಯಸಿ ಪ್ರೀತಿಸಿ ಕೈಕೊಟ್ಟಳು ಅಂತ ಆಕೆಯೊಂದಿಗಿನ ಖಾಸಗಿ ಫೋಟೋ ಹರಿಬಿಟ್ಟ ದರ್ಶನ್​!
ಪ್ರೇಯಸಿ ಪ್ರೀತಿಸಿ ಕೈಕೊಟ್ಟಳು ಅಂತ ಆಕೆಯೊಂದಿಗಿನ ಖಾಸಗಿ ಫೋಟೋ ಹರಿಬಿಟ್ಟ ದರ್ಶನ್​!
ಬಿ ಮೂರ್ತಿ, ನೆಲಮಂಗಲ
| Edited By: |

Updated on: Oct 11, 2024 | 10:33 PM

Share

ನೆಲಮಂಗಲ, ಅಕ್ಟೋಬರ್​ 11: ಪ್ರೀತಿಸಿ ಕೈಕೊಟ್ಟ ಯುವತಿಯ ತೇಜೋವಧೆಗೆ ಯುವಕ (boy) ಮುಂದಾಗಿದ್ದ ಘಟನೆ  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮಂಜುನಾಥ ನಗರದಲ್ಲಿ ನಡೆದಿದೆ. ಯುವತಿ ಜೊತೆಗಿದ್ದ ಖಾಸಗಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ದರ್ಶನ್ ಎಂಬಾತ ವಿಕೃತಿ ಮೆರೆದಿದ್ದ. ಸದ್ಯ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರ್ಶನ್​ಗಾಗಿ ಪೊಲೀಸರ ಶೋಧ ನಡೆಸಿದ್ದಾರೆ.

ಬಾಗಲಗುಂಟೆಯ ಫರ್ನಿಚರ್ ಅಂಗಡಿಯಲ್ಲಿ ಯುವತಿ ಸೇಲ್ಸ್ ಕೆಲಸ ಮಾಡುತ್ತಿದ್ದಳು. ನನ್ನ ಪ್ರೀತಿ ಮಾಡಿಲ್ಲ ಅಂದರೆ ನಿನ್ನ ಜೀವನ ಹಾಳು ಮಾಡುತ್ತೇನೆಂದು ಆರೋಪಿ ದರ್ಶನ್​ ಬೆದರಿಕೆ ಕೂಡ ಹಾಕಿದ್ದ. ವಾಟ್ಸಾಪ್ ಸ್ಟೇಟಸ್ ಹಾಗೂ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ಖಾಸಗಿ ಫೋಟೋ ಹಾಕಿ ಮಾನಹಾನಿ ಮತ್ತು ತೇಜೋವಧೆಗೆ ಮುಂದಾಗಿದ್ದ.

ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಮೂರು ದಿನದ ಬಳಿಕ ಪತ್ತೆ

ಶಿವಮೊಗ್ಗ: ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಭಾರಿ ಮಳೆಯಿಂದಾಗಿ ರಭಸವಾಗಿ ಹರಿಯುತ್ತಿದ್ದ ಕೊಂಡಜ್ಜಿ ಹಳ್ಳದಲ್ಲಿ ಬುಧವಾರ ಬೈಕ್ ಸಮೇತ ಕೊಚ್ಚಿ ಹೋಗಿದ್ದ ಚಿನ್ನಿಕಟ್ಟೆ ಗ್ರಾಮದ ಇಕ್ಬಾಲ್(40) ಶವ ಪತ್ತೆ ಆಗಿದೆ.

ಇದನ್ನೂ ಓದಿ: ಕಬ್ಬನ್​ಪಾರ್ಕ್​ನಲ್ಲಿ ಫೋಟೋ ತೆಗೆಯುವಾಗ ಅಡ್ಡಬಂದನೆಂದು HAL ಉದ್ಯೋಗಿಗೆ ಹೀಗಾ ಹೊಡೆಯೋದು!

ಅಗ್ನಿಶಾಮಕ ಸಿಬ್ಬಂದಿಗಳಿಂದ ಮೃತದೇಹಕ್ಕಾಗಿ ಹಳ್ಳದಲ್ಲಿ ಶೋಧ ಕಾರ್ಯ ಮಾಡಿದ್ದು, ಪತ್ತೆ ಆಗಿರಲಿಲ್ಲ.  ಮೂರು ದಿನದ ಬಳಿಕ ಹಳ್ಳದಿಂದ ಒಂದು ಕಿ.ಮೀ. ದೂರದಲ್ಲಿ ಶವ ಪತ್ತೆ ಆಗಿದೆ.

ಹೆಜ್ಜೇನು ದಾಳಿಗೆ ಓರ್ವ ವ್ಯಕ್ತಿ ಸಾವು: 5 ಜನರಿಗೆ ಗಾಯ

ಕೋಲಾರ: ಹೆಜ್ಜೇನು ದಾಳಿಗೆ ಓರ್ವ ವ್ಯಕ್ತಿ ಸಾವುನ್ನಪ್ಪಿದ್ದು 5 ಜನರು ಗಾಯಗೊಂಡಿದ್ದ ಘಟನೆ ಕೋಲಾರ ತಾಲೂಕಿನ ಜಂಗಾಲಹಳ್ಳಿಯಲ್ಲಿ ಈ ಘಟನೆ ನಡೆದಿತ್ತು. ಪಿತೃಪಕ್ಷ ಹಿನ್ನಲೆ ಹಿರಿಯರಿಗೆ ಪೂಜೆ ಮಾಡಲು ಗ್ರಾಮದ ಸಶ್ಮಾನಕ್ಕೆ ಹೋದಾಗ ಈ ಘಟನೆ ನಡೆದಿತ್ತು. ದಾಳಿಯಿಂದ ವೆಂಕಟಸ್ವಾಮಿ (60) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಇದನ್ನೂ ಓದಿ: ನಿನ್ನ ಪತ್ನಿಗೆ ಒಳ್ಳೆ ಬಟ್ಟೆ ತೊಡಲು ಹೇಳು ಇಲ್ಲ ಆ್ಯಸಿಡ್​ ಹಾಕುವೆ: ಪತ್ರಕರ್ತನ ಹೆಂಡತಿಗೆ ಬೆದರಿಕೆ

ಇನ್ನು ಒಂದೇ ಕುಟುಂಬದ ಆರು ಜನರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ಶಾಮಣ್ಣ, ಸುಂದರ್ ರಾಜ್, ಕಾರ್ತಿಕ್, ಶ್ರೀನಿವಾಸ್, ವೆಂಕಟಗಿರಿಯಪ್ಪ ಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನು ಗಾಯಗೊಂಡವರು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
‘ಅಯೋಗ್ಯ 2’ ಸಿನಿಮಾದ ಹೊಸ ಹಾಡಿನಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ
‘ಅಯೋಗ್ಯ 2’ ಸಿನಿಮಾದ ಹೊಸ ಹಾಡಿನಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ