AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಬ್ಬನ್​ಪಾರ್ಕ್​ನಲ್ಲಿ ಫೋಟೋ ತೆಗೆಯುವಾಗ ಅಡ್ಡಬಂದನೆಂದು HAL ಉದ್ಯೋಗಿಗೆ ಹೀಗಾ ಹೊಡೆಯೋದು!

ಫೋಟೋ ತೆಗೆಯುವಾಗ ಅಡ್ಡಬಂದರೆಂಬ ಕಾರಣಕ್ಕೆ ವ್ಯಕ್ತಿಯೋರ್ವನಿಗೆ ರಕ್ತ ಬರುವಂತೆ ಹಲ್ಲೆ ಮಾಡಿರುವಂತಹ ಘಟನೆ ಸೆ.29ರಂದು ಕಬ್ಬನ್​ಪಾರ್ಕ್​ನಲ್ಲಿ ನಡೆದಿದ್ದು, ಕೇಸ್ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್​ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕಬ್ಬನ್​ಪಾರ್ಕ್​ನಲ್ಲಿ ಫೋಟೋ ತೆಗೆಯುವಾಗ ಅಡ್ಡಬಂದನೆಂದು HAL ಉದ್ಯೋಗಿಗೆ ಹೀಗಾ ಹೊಡೆಯೋದು!
ಕಬ್ಬನ್​ಪಾರ್ಕ್​ನಲ್ಲಿ ಫೋಟೋ ತೆಗೆಯುವಾಗ ಅಡ್ಡಬಂದನೆಂದು HAL ಉದ್ಯೋಗಿಗೆ ಹೀಗಾ ಹೊಡೆಯೋದು!
Jagadisha B
| Edited By: |

Updated on: Oct 11, 2024 | 4:06 PM

Share

ಬೆಂಗಳೂರು, ಅಕ್ಟೋಬರ್​ 11: ಫೋಟೋ ತೆಗೆಯುವಾಗ ಅಡ್ಡಬಂದರೆಂದು ಹೆಚ್ಎಎಲ್ ಉದ್ಯೋಗಿಗೆ (HAL employee) ರಕ್ತ ಬರುವಂತೆ ವ್ಯಕ್ತಿಯೋರ್ವ ಹಲ್ಲೆ ಮಾಡಿರುವಂತಹ ಘಟನೆ ಸೆ.29ರಂದು ಕಬ್ಬನ್​ಪಾರ್ಕ್​ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಭಾರತದ ವ್ಯಕ್ತಿಯಿಂದ ಹೆಚ್ಎಎಲ್ ಡಿಫೆನ್ಸ್ ವಿಭಾಗದ ಟೆಕ್ನಿಷಿಯನ್ ಆಗಿರುವ ಉದ್ಯೋಗಿ ರವಿಕಿರಣ್​ಗೆ ನಿಂದಿಸಿ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಕಬ್ಬನ್​ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸೆ.29ರಂದು ಮಧ್ಯಾಹ್ನ 3.30ಕ್ಕೆ ಕಬ್ಬನ್​ಪಾರ್ಕ್​ಗೆ ಬಂದಿದ್ದ ರವಿಕಿರಣ್, ಉತ್ತರ ಭಾರತದ ವ್ಯಕ್ತಿ ಫೋಟೋ ತೆಗೆಯುವಾಗ ಅಡ್ಡಹೋಗಿದ್ದರು. ನಾನು ಫೋಟೋ ತೆಗೆಯುವಾಗ ನೀನ್ಯಾಕೆ ಅಡ್ಡ ಬಂದೆ ಎಂದು ನಿಂದಿಸಿ, ಪಾರ್ಕ್​ ನಿಮ್ಮಪ್ಪಂದ ಎಂದು ಬೈಯ್ದು ಕೈಯಿಂದ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ. ಬಳಿಕ ಚಿಕಿತ್ಸೆ ಪಡೆದು ಕಬ್ಬನ್​ಪಾರ್ಕ್ ಠಾಣೆಗೆ ರವಿಕಿರಣ್ ದೂರು ನೀಡಿದ್ದರು.

ಸೂರ್ಯ ಮಲ್ಲೇಶ್ವರ ಬೆಟ್ಟದ ತಪ್ಪಲಿನಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ

ಕೋಲಾರ: ಕೋಲಾರ ತಾಲೂಕಿನ ವೇಮಗಲ್​ ಬಳಿ ಸೂರ್ಯ ಮಲ್ಲೇಶ್ವರ ಬೆಟ್ಟದ ತಪ್ಪಲಿನಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಸುಮಾರು 50ರಿಂದ 60 ವರ್ಷದ ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ವೇಮಗಲ್ ಇನ್ಸ್​ಪೆಕ್ಟರ್ ಲೋಕೇಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಬಹಿರ್ದೆಸೆಗೆ ಹೋಗಿದ್ದ ಬಾಲಕ ಮೇಲೆ ವಿದ್ಯುತ್ ತಂತಿ ಬಿದ್ದು ಸಾವು

ಕೊಪ್ಪಳ: ಬಹಿರ್ದೆಸೆಗೆ ಹೋಗಿದ್ದ ಬಾಲಕ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ  ಬಾಲಕ ಸ್ಥಳದಲ್ಲೇ ಮೃತಪಟ್ಟಿರುವಂತಹ ಘಟನೆ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದಿದೆ. ಕನಕಗಿರಿ ಪಟ್ಟಣದ ಹನ್ನೊಂದು ವರ್ಷದ ವಿನಯ್ ಮೃತ ಬಾಲಕ.

ಇದನ್ನೂ ಓದಿ: ರಾಮನಗರ: ಐದು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ದನದ ಕೊಟ್ಟಿಗೆಯಲ್ಲಿ ನೇಣಿಗೆ ಶರಣು

ಪಟ್ಟಣದ ಹೊರವಲಯದಲ್ಲಿರುವ ಕೆರೆ ಸಮೀಪ ವಿನಯ್ ಬಹಿರ್ದೆಸೆಗೆ ಹೋಗಿದ್ದ. ಈ ಸಮಯದಲ್ಲಿ ವಿದ್ಯುತ್ ತಂತಿ ಆತನ ಮೈಮೇಲೆ ಬಿದ್ದಿದೆ. ಇನ್ನು ದುರ್ಘಟನೆಗೆ ಜೆಸ್ಕಾಂ ನಿರ್ಲಕ್ಷ್ಯವೇ ಕಾರಣ ಅಂತ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್