ಮೈಸೂರು: ಮನೆಯಲ್ಲಿ ಮಹಿಳೆ ಅನುಮಾನಾಸ್ಪದ ಸಾವು ಸಂಭವಿಸಿದೆ. ಹೆಚ್.ಡಿ.ಕೋಟೆ ಪಟ್ಟಣದ ವಿಶ್ವನಾಥಯ್ಯ ಕಾಲೋನಿ ಮನೆಯಲ್ಲಿ ಸಣ್ಣದೇವಮ್ಮ ಎಂಬ ಮಹಿಳೆ ಮೃತಪಟ್ಟಿದ್ದು, ಇದು ಕೊಲೆಯಾ ಎಂಬ ಶಂಕೆ ವ್ಯಕ್ತವಾಗಿದೆ. ಪತಿ ಸಾವನೊಪ್ಪಿದ ಬಳಿಕ ಸಣ್ಣದೇವಮ್ಮ ಬಂಟಿಯಾಗಿ ಒಬ್ಬರೆ ವಾಸವಾಗಿದ್ದರು. ಆದರೆ ಮೃತ ಮಹಿಳೆ ಜೊತೆ ಸಿದ್ದಪ್ಪಾಜಿ ಎಂಬ ವ್ಯಕ್ತಿ ಸಹ ಇದ್ದರು.
ಸಿದ್ದಪ್ಪಾಜಿಯೇ ಸಣ್ಣದೇವಮ್ಮ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ವಿಶ್ವನಾಥಯ್ಯ ಕಾಲೋನಿಯ ಜಾರ್ಜ್ ವಠಾರದಲ್ಲಿ ಸಣ್ಣದೇವಮ್ಮ ಮೃತ ದೇಹ ಪತ್ತೆಯಾಗಿದೆ. ಘಟನಾಸ್ಥಳಕ್ಕೆ ಹೆಚ್.ಡಿ ಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಸಣ್ಣದೇವಮ್ಮನ ಸಾವಿಗೆ ನಿಖರ ಮಾಹಿತಿ ಸಿಕ್ಕಿಲ್ಲ. ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 11:37 am, Sat, 1 February 20