ಮಹಿಳಾ ಸಿಬ್ಬಂದಿ ಗೋಲ್ಮಾಲ್: ಅಡಿಕೆ ಮಂಡಿ ಮಾಲೀಕನಿಗೆ ಕೋಟಿ ಕೋಟಿ ಟೋಪಿ.. ಕಿಲಾಡಿ ಲೇಡಿಗಳ ಕೋಟಿ ಲೂಟಿ ಕಥೆ
ಮಹಿಳಾ ಸಿಬ್ಬಂದಿಯ ಐಷಾರಾಮಿ ಬದುಕಿನಿಂದ ಅನುಮಾನಗೊಂಡು ಮಂಡಿಯ ಲೆಕ್ಕಪತ್ರ ಪರಿಶೀಲಿಸಿದಾಗ ವಂಚನೆ ಆಗಿರುವುದು ಗೊತ್ತಾಗಿದೆ. ಈ ಸಂಬಂಧ ದೂರು ನೀಡುವುದಾಗಿ ಮಹಿಳೆಯರಿಗೆ ತಿಳಿಸಿದಾಗ, ಕೊಲೆ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ 15 ನಿಮಿಷದ ನಿಮ್ಮ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಮಾಲೀಕ ಮಂಜುನಾಥ್ ದೂರಿನಲ್ಲಿ ಆಪಾದಿಸಿದ್ದಾರೆ.
ಶಿವಮೊಗ್ಗ ಎಪಿಎಂಸಿಯಲ್ಲಿ ಅಡಿಕೆ ಮಂಡಿ ಮಾಲೀಕನಿಗೆ ಬರೋಬರಿ 7 ಕೋಟಿ ರೂಪಾಯಿ ವಂಚನೆ ಆಗಿದೆ. ಇಷ್ಟೊಂದು ದೊಡ್ಡ ಮೊತ್ತದ ಮೋಸ ಮಾಡಿದ್ದು ಯಾರು ಎನ್ನುವುದು ಗೊತ್ತಾದ್ರೆ ನೀವು ಬೆಚ್ಚಿ ಬೀಳುವುದು ಗ್ಯಾರಂಟಿ… ವ್ಯಾಪಾರ ವ್ಯವಹಾರದಲ್ಲಿ ನಂಬಿಕೆ ವಿಶ್ವಾಸ ಅತೀ ಆದ್ರೆ ಏನಾಗುತ್ತದೆ ಎನ್ನುವುದಕ್ಕೆ ಈ 7 ಕೋಟಿ ರೂಪಾಯಿ ವಂಚನೆ ಕೇಸ್ ಸಾಕ್ಷಿಯಾಗಿದೆ.. ಅಡಿಕೆ ಮಂಡಿ ಮಾಲೀಕನಿಗೆ ಕೋಟಿ ಕೋಟಿ ದೋಖಾ ಕುರಿತು ಒಂದು ವರದಿ ಇಲ್ಲಿದೆ.
ಸಹನಾ ಮತ್ತು ಮೇಘನಾ ಎಂಬ ಮಹಿಳೆಯರಿಬ್ಬರು ನಕಲಿ ಬಿಲ್ ಸೃಷ್ಟಿಸಿ ಅಡಿಕೆ ಮಂಡಿ ಮಾಲೀಕರೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ. ಈ ವಂಚನೆಯ ಕುರಿತು ದೂರು ನೀಡುವುದಕ್ಕೆ ಅಡಿಕೆ ಅಂಗಡಿ ಮಾಲೀಕ ಮುಂದಾಗಿದ್ದರು. ಆದ್ರೆ ಇಬ್ಬರು ಕಿಲಾಡಿ ಲೇಡಿಗಳು ಮಾಲೀಕನಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಅಪ್ಪತಪ್ಪಿ ತಮ್ಮ ವಿರುದ್ಧ ಏನಾದ್ರೂ ದೂರು ನೀಡಿದ್ರೆ ಖಾಸಗಿ ವಿಡಿಯೋ ಬಹಿರಂಗ ಪಡಿಸುವುದಾಗಿ ಮಹಿಳೆಯರು ಬೆದರಿಕೆ ಒಡ್ಡಿದ್ದಾರೆ.
ಶಿವಮೊಗ್ಗ ಎಪಿಎಂಸಿ ಆವರಣದಲ್ಲಿರುವ ಅಡಿಕೆ ಮಂಡಿಯಲ್ಲಿ ಈ ಘಟನೆ ನಡೆದಿದೆ. ಮಂಡಿ ಮಾಲೀಕ ಮಂಜುನಾಥ್ ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ. ಏಳು ವರ್ಷದಿಂದ ಮೇಘನಾ ಮತ್ತು ಮೂರು ವರ್ಷದಿಂದ ಸಹನಾ ಕೆಲಸ ಮಾಡುತ್ತಿದ್ದರು. ಅಂಗಡಿಯ ಎಲ್ಲ ವ್ಯವಹಾರ ಮತ್ತು ಲೆಕ್ಕಪತ್ರಗಳನ್ನು ಈ ಇಬ್ಬರು ಮಹಿಳೆಯರು ನೋಡಿಕೊಳ್ಳುತ್ತಿದ್ದರು.
ಮಂಜುನಾಥ್ ಪತ್ನಿಗೆ ಕ್ಯಾನ್ಸರ್ ಇದೆ. ಅವಳ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ಮಂಜುನಾಥ್ ಅಡಿಕೆ ಮಂಡಿಯ ಎಲ್ಲ ವ್ಯಹಹಾರಗಳನ್ನು ಸಹನಾ ಮತ್ತು ಮೇಘನಾ ಇಬ್ಬರು ನೋಡಿಕೊಳ್ಳುತ್ತಿದ್ದರು. ಇಬ್ಬರು ಲೇಡಿಗಳಗೆ ಅಂಗಡಿ ಮಾಲೀಕ ಮಂಜುನಾಥ್ ಗೆ ನಂಬಿಸಿ ಮಂಡಿಯಲ್ಲಿ ಇರುವ 2100 ಅಡಿಕೆ ಮೂಟೆ ಅಂದಾಜು 7 ಕೋಟಿ ಕದ್ದು ಮುಚ್ಚಿ ಮಾರಾಟ ಮಾಡಿದ್ದಾರೆ.
ಹೀಗೆ ಕೆಲವೇ ತಿಂಗಳಲ್ಲಿ ಕೋಟಿ ಕೋಟಿ ಹಣವನ್ನು ಇಬ್ಬರು ಮಹಿಳಾ ಸಿಬ್ಬಂದಿ ವಂಚನೆ ಮಾಡಿದ್ದಾರೆಂದು ವಿನೋಬನಗರ ಠಾಣೆಗೆ ಅಂಗಡಿ ಮಾಲೀಕ ಮಂಜುನಾಥ್ ದೂರು ನೀಡಿದ್ದಾರೆ. ಇನ್ನೂ ಅಂಗಡಿ ವ್ಯವಹಾರಕ್ಕೆಂದು ನಾಲ್ಕೈದು ಕೋಟಿ ಖಾತೆಯಲ್ಲಿ ದುರುಪಯೋಗ ಮಾಡಿಕೊಂಡಿದ್ದಾರಂತೆ. ಜೊತೆಗೆ ಇದೇ ಅಂಗಡಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ದುರ್ಗಾಪ್ರಸಾದ್ ಕೂಡಾ ಇವರ ಜೊತೆ ಶಾಮೀಲು ಆಗಿದ್ದನಂತೆ.
ಸಹನಾ ಮತ್ತು ಮೇಘನಾ ಹಾಗೂ ಹಮಾಲಿ ದುರ್ಗಾಪ್ರಸಾದ್ ಮೂವರು ಸೇರಿ ಕೋಟಿ ಕೋಟಿ ಹಣ ದುರುಪಯೋಗ ಮಾಡಿದ್ಧಾರೆ. ದುರ್ಗಾಪ್ರಸಾದ್ ಅನುಮಾನಸ್ಪದವಾಗಿ ಮೃತಪಟ್ಟಿದ್ದಾನೆಂದು ಅಂಗಡಿ ಮಾಲೀಕ ಆರೋಪಿಸಿದ್ದಾರೆ. ಈ ಮೂವರು ಕೆಲಸ ಮಾಡಿಕೊಂಡು ಉಪಜೀವನ ಮಾಡಿಕೊಂಡಿದ್ದರು. ಆದ್ರೆ ಕಡಿಮೆ ಅವಧಿಯಲ್ಲಿ ಮೂವರು ನಗರದಲ್ಲಿ ದೊಡ್ಡ ಮನೆ ಕಟ್ಟಿಕೊಂಡಿದ್ದಾರಂತೆ. ಸದ್ಯ ವಿನೋಬ ನಗರ ಪೊಲೀಸರು ಈ ಪ್ರಕರಣದ ಕುರಿತು ತನಿಖೆಗೆ ಮುಂದಾಗಿದ್ದಾರೆ.
ಮೇಘನಾ ಮತ್ತು ಸಹನಾ ಅಂಗಡಿಯಲ್ಲಿರುವ ನಗದು ಮತ್ತು ಚೆಕ್ ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಖಾಲಿ ಚೆಕ್ ದುರ್ಬಳಕೆ, ಕೋಟ್ಯಂತರ ಅಡಿಕೆ ಮಾಯವಾಗಿದೆ. ಪತ್ನಿ ಕ್ಯಾನ್ಸರ್‌ಗೆ ತುತ್ತಾಗಿದ್ದು ಆರೈಕೆ ಹಿನ್ನೆಲೆ ಮಂಡಿ ಮಾಲೀಕ ಮಂಜುನಾಥ್ ತಮ್ಮೂರಿನ ಮನೆಯಲ್ಲಿ ಹೆಚ್ಚಾಗಿ ಇರುತ್ತಿದ್ದರು.
ಇದನ್ನೂ ಓದಿ: ಸಿಪಿ ಯೋಗೇಶ್ವರ ಭಾವ ನಾಪತ್ತೆ: ಮಹದೇವಯ್ಯ ಕಾರು ಚಾಮರಾನಗರದಲ್ಲಿ ಪತ್ತೆ
ಕಳೆದ ಮೂರು ವರ್ಷದಿಂದ ಮಂಡಿ ನಿರ್ವಹಣೆಯ ಜವಾಬ್ದಾರಿಯನ್ನು ಕೆಲಸಕ್ಕಿದ್ದ ಇಬ್ಬರು ಮಹಿಳೆಯರಿಗೆ ವಹಿಸಿದ್ದರು. ಖಾಲಿ ಚೆಕ್‌ಗಳಿಗೆ ಸಹಿ ಮಾಡಿ ರೈತರಿಗೆ ನೀಡುವಂತೆ ತಿಳಿಸಿದ್ದರು. ಆದರೆ ಈ ಚೆಕ್‌ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇನ್ನು, ಮಂಡಿಯಲ್ಲಿ 2071 ಚೀಲ ಅಡಿಕೆ ಸ್ಟಾಕ್ ಇರಬೇಕು. ಆದರೆ 33 ಚೀಲಗಳು ಮಾತ್ರವೆ ಇದೆ. ಅಡಿಕೆ ಮಾರಾಟದ ಹಣ ಕೇಳಿದರೆ ರೈತರಿಗೆ ಮುಂಗಡವಾಗಿ ನೀಡಿರುವಾಗಿ ತಿಳಿಸಿದ್ದರು. ಆಡಿಟರ್ ಪರಿಶೀಲಿಸಿದಾಗ ಲೆಕ್ಕಪತ್ರದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಹಿಳೆಯರ ಐಷಾರಾಮಿ ಬದುಕಿನಿಂದ ಅನುಮಾನಗೊಂಡು ಮಂಡಿಯ ಲೆಕ್ಕಪತ್ರ ಪರಿಶೀಲಿಸಿದಾಗ ವಂಚನೆ ಆಗಿರುವುದು ಗೊತ್ತಾಗಿದೆ. ಸುಮಾರು 7 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ದೂರು ನೀಡುವುದಾಗಿ ಮಹಿಳೆಯರಿಗೆ ತಿಳಿಸಿದಾಗ, ಕೊಲೆ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ 15 ನಿಮಿಷದ ನಿಮ್ಮ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಮಂಜುನಾಥ್ ದೂರಿನಲ್ಲಿ ಆಪಾದಿಸಿದ್ದಾರೆ.
ವಿನೋಬನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಹನಾ ಮತ್ತು ಮೇಘನಾ ಮತ್ತು ಮೇಘಾನ ಪತಿ ರವಿ ವಿರುದ್ಧ ಎಫ್ ಐಆರ್ ದಾಖಲು ಆಗಿದೆ. ಎಫ್ಐಆರ್ ದಾಖಲು ಆಗುತ್ತಿದ್ದಂತೆ ಸಹನಾ ಮತ್ತು ಮೇಘನಾ ಇಬ್ಬರೂ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಇನ್ನು ಮೇಘನಾ ಪತಿ ರವಿಯನ್ನು ಪೊಲೀಸರು ವಂಚನೆ ಕೇಸ್ ನಲ್ಲಿ ಬಂಧಿಸಿದ್ದರು. ರವಿ ಕೂಡಾ ಜಾಮೀನು ಪಡೆದುಕೊಂಡು ಸದ್ಯ ಬೇಲ್ ಮೇಲೆ ಹೊರಗೆ ಬಂದಿದ್ದಾನೆ. ಇತ್ತ ವಯಸ್ಸಾದ ಅಡಿಕೆ ಮಂಡಿಯ ಮಾಲೀಕ ಮಂಜುನಾಥ್ ಮಹಿಳಾ ಸಿಬ್ಬಂದಿಯನ್ನು ನಂಬಿ ಮೋಸ ಹೋಗಿದ್ದಾನೆ.
ನಿತ್ಯ ಲಕ್ಷಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುವ ಅಡಿಕೆ ಮಂಡಿಯನ್ನು ಇಬ್ಬರು ಮಹಿಳಾ ಸಿಬ್ಬಂದಿ ಕೈಗೆ ಕೊಟ್ಟು ಅಂಗಡಿ ಮಾಲೀಕನು ವಂಚನೆಗೊಳಗಾಗಿದ್ದಾನೆ. ಸಿಬ್ಬಂದಿಯನ್ನು ನಂಬಿ ಮಾಲೀಕನು ಕೋಟಿ ಕೋಟಿ ಮೌಲ್ಯದ ಅಡಿಕೆ ಮತ್ತು ಹಣವನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾನೆ.
Also Read: ಇಂದಿನ ಅಡಿಕೆ ಮತ್ತು ಕೋಕೋ ಧಾರಣೆ ಹೀಗಿದೆ
ತುಂಬಾ ಚಾಣಾಕ್ಷತನದಿಂದ ಇಬ್ಬರು ಕಿಲಾಡಿ ಮಹಿಳೆಯರು ಅಂಗಡಿ ಮಾಲೀಕನು ಲೂಟಿ ಮಾಡಿ ಈಗ ನಿರೀಕ್ಷಣಾ ಜಾಮೀನು ಪಡೆದು ಆರಾಮವಾಗಿದ್ದಾರೆ. ಕೋಟಿ ಕೋಟಿ ಹಣ ಕಳೆದುಕೊಂಡ ಅಂಗಡಿ ಮಾಲೀಕನಿಗೆ ಸದ್ಯ ಕಣ್ಣೀಣೇ ಗತಿಯಾಗಿದೆ.. ವಿನೋಬ ನಗರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆಯ ಮಾಡಿದ್ರೆ ಮಾತ್ರ ಕೋಟಿ ಕೋಟಿ ವಂಚನೆ ಅಸಲಿ ಬಣ್ಣ ಬಯಲು ಆಗಲು ಸಾಧ್ಯ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ