ಯಾದಗಿರಿ: ವಿದ್ಯುತ್ ಟ್ರಾರ್ನ್ಸಪಾರ್ಮರ್ ಸ್ಪರ್ಶಿಸಿ ಎಂಟು ವರ್ಷದ ಬಾಲಕಿ ಸಾವು

ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನ ಬೀದರ್ ಪೊಲೀಸ್ ಹೆಡೆಮುರಿ ಕಟ್ಟಿದ್ದಾರೆ. ಒಂದು ತಿಂಗಳ‌ ಅವಧಿಯಲ್ಲಿ 5 ಲಕ್ಷ 80 ಸಾವಿರ ಮೌಲ್ಯದ 127 ಗ್ರಾಮದ 7 ಸರಕದ್ದಿದ್ದ ಕಳ್ಳರು, ನೂತನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆದಿದೆ.

ಯಾದಗಿರಿ: ವಿದ್ಯುತ್ ಟ್ರಾರ್ನ್ಸಪಾರ್ಮರ್ ಸ್ಪರ್ಶಿಸಿ ಎಂಟು ವರ್ಷದ ಬಾಲಕಿ ಸಾವು
ಅಗತೀರ್ಥ ಗ್ರಾಮದ ಅಂಜಲಿ (8) ಮೃತ ಬಾಲಕಿ.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 01, 2022 | 7:34 PM

ಯಾದಗಿರಿ: ವಿದ್ಯುತ್ ಟ್ರಾರ್ನ್ಸಪಾರ್ಮರ್ (Transformer) ಸ್ಪರ್ಶಿಸಿ ಎಂಟು ವರ್ಷದ ಬಾಲಕಿ ಮೃತಪಟ್ಟಿರುವಂತಹ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದಲ್ಲಿ ನಡೆದಿದೆ. ಅಗತೀರ್ಥ ಗ್ರಾಮದ ಅಂಜಲಿ (8) ಮೃತ ಬಾಲಕಿ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ. ಟ್ರಾರ್ನ್ಸಪಾರ್ಮರ್​ಗೆ ಬೆಲಿ ಹಾಕದಿರುವುದು, ಬಾಲಕಿ ಆಟವಾಡುತ್ತಾ ಟ್ರಾರ್ನ್ಸಪಾರ್ಮರ್ ಬಳಿ ಹೋದಾಗ ಘಟನೆ ನಡೆದಿದೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಸರಗಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ:

ಬೀದರ್: ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನ ಬೀದರ್ ಪೊಲೀಸ್ ಹೆಡೆಮುರಿ ಕಟ್ಟಿದ್ದಾರೆ. ಒಂದು ತಿಂಗಳ‌ ಅವಧಿಯಲ್ಲಿ 5 ಲಕ್ಷ 80 ಸಾವಿರ ಮೌಲ್ಯದ 127 ಗ್ರಾಮದ 7 ಸರಕದ್ದಿದ್ದ ಕಳ್ಳರು, ನೂತನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆದಿದೆ. ಪೊಲೀಸ್ ಚಾಣಾಕ್ಷತನದಿಂದ ಇಬ್ಬರು ಕಳ್ಳರನ್ನ ಹಿಡಿದು ಜೈಲಿಗೆ ಕಳುಹಿಸಿದ್ದಾರೆ.

ಸಿಡಿಲು ಬಡಿದು ಕುರಿ, ಮೇಕೆಗಳು ಸ್ಥಳದಲ್ಲೇ ಸಾವು

ರಾಮನಗರ: ಸಿಡಿಲು ಬಡಿದು ಕುರಿ, ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ತಾಲೂಕಿನ ಬೆತ್ತನಗೆರೆ ಗ್ರಾಮದಲ್ಲಿ ನಡೆದಿದೆ. ಕುರಿ, ಮೇಕೆ ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದು ಹತ್ತು ಕುರಿ, ಆರು ಮೇಕೆ ಸಾವನ್ನಪ್ಪಿವೆ. ವೆಂಕಟರಮಣ ಬೋವಿ, ನಾರಾಯಣಪ್ಪ, ಕುಮಾರ್ ಎಂಬುವರಿಗೆ  ಕುರಿ, ಮೇಕೆಗಳು ಸೇರಿವೆ.

ಈಜಾಡಲು ಹೋಗಿ ಕೃಷಿ ಹೊಂಡದಲ್ಲಿ ಮುಳುಗಿ ಮೂವರ ಸಾವು

ಚಿಕ್ಕಬಳ್ಳಾಫುರ: ಈಜಾಡಲು ಹೋಗಿ ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಅಪ್ರಾಪ್ತರು ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆ ಗೌರಿಬಿದನೂರು ತಾಲೂಕಿನ ಗ್ರಾಮದಲ್ಲಿ ಸುರೇಶ ಎನ್ನುವವರ ಕೃಷಿ ಹೊಂಡದಲ್ಲಿ ನಡೆದಿದೆ. ಚಿಕ್ಕಬಳ್ಳಾಫುರ ಗ್ರಾಮದ ರಾಜೇಶ ನಿಕೀತ್, ಮನೋಜ್ ಮೃತ ದುರ್ಧೈವಿಗಳು. ಎಲ್ಲರೂ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದರು. ಗೌರಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ‌ಯಲ್ಲಿ ಪ್ರಕರಣ ದಾಖಲಾಗಿದೆ.

ಮೊದಲ ದಿನ ಕೆಲಸಕ್ಕೆ ಹೋದ ನರ್ಸ್​ ಮರುದಿನ ಹಾಸ್ಪಿಟಲ್​​ನಲ್ಲಿ ಶವವಾಗಿ ಪತ್ತೆ;

ನರ್ಸಿಂಗ್​ ಹೋಂವೊಂದರಲ್ಲಿ ಕೆಲಸ ಸಿಕ್ಕು, ಮೊದಲ ದಿನ ಕೆಲಸಕ್ಕೆಂದು ಹೋದ ನರ್ಸ್​ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.    ಶುಕ್ರವಾದ ಈಕೆಯದ್ದು ಕೆಲಸದ ಮೊದಲ ದಿನ ಆಗಿತ್ತು. ಅಂದು ಆಸ್ಪತ್ರೆಗೆ ಹೋದವಳು ಶನಿವಾರ ಇವರ ದೇಹ ನರ್ಸಿಂಗ್​ಹೋಂನ ಗೋಡೆಗೆ ನೇಣುಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿತ್ತು. ಅಂದರೆ ಅದೇ ಗೋಡೆಯ ಮೇಲಿದ್ದ ಕಿಟಕಿಗೆ ಹಗ್ಗಕಟ್ಟಲಾಗಿದ್ದು, ನರ್ಸ್​ ಶವ ಗೋಡೆಗೆ ಇಳಿಬಿಟ್ಟಂತೆ ನೇತಾಡುತ್ತಿದೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬುದು ಮೃತ ನರ್ಸ್​ ಕುಟುಂಬದವರ ಆರೋಪ. ನಮ್ಮ ಮನೆ ಮಗಳನ್ನು ಅತ್ಯಾಚಾರ ಮಾಡಿ, ಬಳಿಕ ಹತ್ಯೆ ಮಾಡಲಾಗಿದೆ ಎಂದು ಹೇಳುತ್ತಿರುವ ಪಾಲಕರು, ನರ್ಸಿಂಗ್​ ಹೋಂನ ಆಡಳಿತಾಧಿಕಾರಿ ಸೇರಿ ಮೂವರ ಹೆಸರನ್ನು ಉಲ್ಲೇಖಿಸಿದ್ದಾರೆ. ಸದ್ಯ ಎಫ್​ಐಆರ್ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್