PM Modi Death Threat: ಹೈದರಾಬಾದ್​ನಲ್ಲಿ ಕುಳಿತು ಮೋದಿ, ಯೋಗಿಗೆ ನಿಂದನೆ: ಅನ್ಯಕೋಮಿನ ವ್ಯಕ್ತಿ ವಿರುದ್ಧ ಯಾದಗಿರಿಯಲ್ಲಿ ಎಫ್​ಐಆರ್​

| Updated By: ವಿವೇಕ ಬಿರಾದಾರ

Updated on: Mar 05, 2024 | 10:39 AM

ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್​​ ವಿರುದ್ಧ ಅನ್ಯಕೋಮಿನ ವ್ಯಕ್ತಿ ಓರ್ವ ಕೈಯಲ್ಲಿ ತಲವಾರ ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿರುವಂತಹ ಘಟನೆ ನಗದರಲ್ಲಿ ನಡೆದಿದೆ. ಮೋದಿ ಮತ್ತು ಯೋಗಿಯನ್ನು ನಿಂದಿಸಿರುವ ಜಿಲ್ಲೆಯ ಸುರಪುರದ ರಂಗಂಪೇಟೆ ನಿವಾಸಿ ಮಹಮದ್ ರಸೂಲ್ ಕಡ್ದಾರೆ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. 

PM Modi Death Threat: ಹೈದರಾಬಾದ್​ನಲ್ಲಿ ಕುಳಿತು ಮೋದಿ, ಯೋಗಿಗೆ ನಿಂದನೆ: ಅನ್ಯಕೋಮಿನ ವ್ಯಕ್ತಿ ವಿರುದ್ಧ ಯಾದಗಿರಿಯಲ್ಲಿ ಎಫ್​ಐಆರ್​
ಮಹಮದ್ ರಸೂಲ್
Follow us on

ಯಾದಗಿರಿ, ಮಾರ್ಚ್​ 4: ಪ್ರಧಾನಿ ನರೇಂದ್ರ ಮೋದಿ (pm modi) ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್​​ ವಿರುದ್ಧ ಅನ್ಯಕೋಮಿನ ವ್ಯಕ್ತಿ ಓರ್ವ ಕೈಯಲ್ಲಿ ತಲವಾರ ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿರುವಂತಹ ಘಟನೆ ನಗದರಲ್ಲಿ ನಡೆದಿದೆ. ಮೋದಿ ಮತ್ತು ಯೋಗಿಯನ್ನು ನಿಂದಿಸಿರುವ ಜಿಲ್ಲೆಯ ಸುರಪುರದ ರಂಗಂಪೇಟೆ ನಿವಾಸಿ ಮಹಮದ್ ರಸೂಲ್ ಕಡ್ದಾರೆ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.  ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಶರಣು ನಾಯಕ ದೂರು ಆಧರಿಸಿ ಸುರಪುರ ಪೋಲಿಸ್ ಠಾಣೆಯಲ್ಲಿ ಮಹಮದ್ ರಸೂಲ್ ವಿರುದ್ಧ ಐಪಿಸಿ 505(1) (ಬಿ), 25(1)(ಬಿ) ಹಾಗೂ ಆರ್ಮ್ಸ್ ಕಾಯ್ದೆಯಡಿ ಕೇಸ್ ದಾಖಲು ಮಾಡಲಾಗಿದೆ.

ಹೈದರಾಬಾದ್​​ನಲ್ಲಿ ಕೂಲಿ ಕೆಲಸ ಮಾಡುವ ಮಹಮದ್ ರಸೂಲ್ ತನ್ನ ಫೇಸ್ ಬುಕ್​ಪೇಜ್​​ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಆರೋಪಿಗಾಗಿ ಸುರಪುರ ಪೊಲೀಸರು ಶೋಧ ಆರಂಭಿಸಿದ್ದಾರೆ.

ಮಹಮದ್ ರಸೂಲ್ ಹೇಳಿದ್ದೇನು?

‘ಕಾಂಗ್ರೆಸ್ ಆಡಳಿತದಲ್ಲಿ ಹೀಗೆಲ್ಲ ಅಧಿಕಾರ ಮಾಡಿಲ್ಲ. ಮೋದಿ ಪ್ರಧಾನಿ ಆಗದ್ದೇನೆ ಎಂದು ನಾಟಕ ಮಾಡುತ್ತಿದ್ದಿಯಾ? ಆಡಳಿತ ಸರಿಯಾಗಿ ಮಾಡುತ್ತಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ನಿಮ್ಮಂತಹ ಕೆಟ್ಟ ಆಡಳಿತ ಮಾಡಿಲ್ಲ. ನೀನು ಟೀ ಮಾರಾಟ ಮಾಡುತ್ತಿದ್ದೆ. ಪಾರ್ಟಿ ಬಿಟ್ಟು ನನ್ನ ಜೊತೆ ಜಗಳಕ್ಕೆ ಬಾ. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಪ್ರಧಾನಿ ಮೋದಿ ನಿನ್ನ ದೇಹದ ನರಗಳು ಕಟ್ ಮಾಡುತ್ತೇನೆ. ಕಾಂಗ್ರೆಸ್ ಜಿಂದಾಬಾದ್​’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಪ್ರಿನ್ಸಿಪಾಲ್​ ನಿಂದನೆ ಆರೋಪ: ವಿದ್ಯಾರ್ಥಿ ಆತ್ಮಹತ್ಯೆ

ಹಾವೇರಿ: ಪ್ರಿನ್ಸಿಪಾಲ್​ ನಿಂದನೆ ಆರೋಪ ಹಿನ್ನಲೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಎನ್​ಸಿಜೆಸಿ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ನಡೆದಿತ್ತು. ಆದಿತ್ಯಾ(16) ಮೃತ ವಿದ್ಯಾರ್ಥಿ. ಇವರು ಡೊಳ್ಳೆಶ್ವರ ಗ್ರಾಮದ ಅಜ್ಜಿ ಮನೆಯಲ್ಲಿದ್ದು ವ್ಯಾಸಂಗ ಮಾಡುತ್ತಿದ್ದರು.

ಇದನ್ನೂ ಓದಿ: ಪ್ರೀತಿಸಲು ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯ ಕತ್ತು ಸೀಳಿ ಹತ್ಯೆ: ಬಳಿಕ ರೈಲಿಗೆ ತಲೆ ಕೊಟ್ಟ ಯುವಕ

ನ.28 ರಾತ್ರಿ ಅಡಿಕೆ ತೋಟದಲ್ಲಿ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ತೀವ್ರ ಗಾಯಗೊಂಡಿದ್ದ. ಕೂಡಲೇ ಆತನನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದ. ಈ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:28 pm, Mon, 4 March 24