ಯಾದಗಿರಿ: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಕಳ್ಳತನದ ಆರೋಪಿ ಕಾಲಿಗೆ ಯಾದಗಿರಿ ಪೊಲೀಸರು (Yadgiri Police) ಫೈರಿಂಗ್ (Firing) ಮಾಡಿರುವ ಘಟನೆ ನಗರದ ವರ್ಕನಳ್ಳಿ ರಸ್ತೆ ಬಳಿ ನಡೆದಿದೆ. ಮಹಮ್ಮದ್ ರಫಿ ಗುಂಡೇಟು ತಿಂದ ಅರೋಪಿ. ಸದ್ಯ ಆರೋಪಿ ಮಹಮ್ಮದ್ ರಫಿಯನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಹಾಗೆ ಗಾಯಗೊಂಡ ಸಿಪಿಐ ಹಾಗೂ ಸಿಬ್ಬಂದಿಗಳನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್ಪಿ ಸಿ.ಬಿ ವೇದಮೂರ್ತಿ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯಾಧಿಕಾರಿಗಳಿಂದ ಸಿಪಿಐ ಹಾಗೂ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದ್ದಾರೆ.
ಡಕಾಯಿತಿ ಗುಂಪು ಫೆಬ್ರವರಿ 24ರಂದು ಯಾದಗಿರಿಯ ನಂದಕಿಶೋರ್ ಎಂಬುವರ ಮೆನೆಯನ್ನು ಟಾರ್ಗೆಟ್ ಮಾಡಿತ್ತು. ಅಂದು ಗ್ಯಾಂಗ್ ಮನೆಗೆ ನುಗ್ಗಿ ಮನೆ ಮಂದಿ ಕಣ್ಣಿಗೆ ಕಾರದ ಪುಡಿ ಎರಚಿ ಲಕ್ಷಾಂತರ ರೂ ದೋಚಿ ಪರಾರಿಯಾಗಿದ್ದತ್ತು. ಈ ಗುಂಪಿನ ನಾಯಕ ಮಹಮ್ಮದ್ ರಫಿಯಾಗಿದ್ದಾನೆ. ಈ ಸಂಬಂಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಕ್ರೀಡಾಕೂಟದ ವೇಳೆ 8ನೇ ತರಗತಿ ವಿದ್ಯಾರ್ಥಿನಿಯ ಅಪಹರಣ, ಸಾಮೂಹಿಕ ಅತ್ಯಾಚಾರ
ಆರೋಪಿಗಳನ್ನು ಸೆರೆ ಹಿಡಿಯಲು ಎಸ್ಪಿ ಸಿಬಿ ವೇದಮೂರ್ತಿ, ಸಿಪಿಐ ಸುನೀಲ್ ಮೂಲಿಮನಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಪೊಲೀಸರ ತಂಡ ನಿನ್ನೆ (ಮಾ.12) 4 ಜನ ಆರೋಪಿಗಳನ್ನು ಬಂಧಿಸಿತ್ತು. ಪ್ರಕರಣದ ಎ1 ಆರೋಪಿ ಮಹಮ್ಮದ್ ರಫಿ ಪೊಲೀಸರಿಂದ ತಲೆಮರಿಸಿಕೊಂಡು ತಿರುಗಾಡುತ್ತಿದ್ದನು. ಆರೋಪಿ ಮಹಮ್ಮದ್ ರಫಿ ಅಡಗಿದ್ದ ಸ್ಥಳದ ಕುರಿತು ಖಚಿತ ಮಾಹಿತಿ ಪೊಲೀಸರಿಗೆ ದೊರೆತಿತ್ತು. ಈ ಹಿನ್ನೆಲೆ ಇಂದು (ಮಾ.13) ಬೆಳಗ್ಗೆ ಪೊಲೀಸರ ಬಂಧಿಸಲು ಹೋದಾಗ, ಪಿಸ್ತೂಲ್ ಹಾಗೂ ಚಾಕೂ ಹೊಂದಿದ್ದ ಮಹಮ್ಮದ್ ರಫಿ ಯಾದಗಿರಿ ಸಿಪಿಐ ಸುನೀಲ್ ವಿ ಮೂಲಿಮನಿ, ಪಿಸಿ ಅಬ್ದುಲ್ ಭಾಷ್ ಹಾಗೂ ಹರಿನಾಥರೆಡ್ಡಿ ಮೇಲೆ ಮನಸೋ ಇಚ್ಚೆ ಚಾಕುವಿನಿಂದ ದಾಳಿ ಮಾಡಿ ತಳ್ಳಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸಿಪಿಐ ಸುನೀಲ್ ಮೂಲಿಮನಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಬೆಂಗಳೂರುಳ: ಖದೀಮರು ಪೊಲೀಸರೆಂದು ಹೇಳಿ 1 ಕೋಟಿ 12 ಲಕ್ಷ ಮೌಲ್ಯದ ಚಿನ್ನದ ಗಟ್ಟಿ ದೋಚಿದ ಘಟನೆ ನಗರದ ಆನಂದ್ ರಾವ್ ಸರ್ಕಲ್ ಬಳಿ ನಡೆದಿದೆ. 2 ಕೆಜಿ 200 ಗ್ರಾಂ ಚಿನ್ನದ ಗಟ್ಟಿ ಕಳ್ಳತನವಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಂಠಪೂರ್ತಿ ಕುಡಿದು ರಾತ್ರಿ ಮನೆಗೆ ಹೊರಟವನು ಬೀದಿಯಲ್ಲಿ ಶವವಾಗಿ ಬಿದ್ದಿದ್ದ, ಕೊಲೆ ಎಂದು ಆರೋಪಿಸಿದ ತಾಯಿ
ಅಬ್ದುಲ್ ರಜಾಕ್, ಮಲ್ಲಯ್ಯ ಹಾಗೂ ಸುನೀಲ್ ಎಂಬುವರು ರಾಯಚೂರಿನ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಲೀಕರ ಸೂಚನೆಯಂತೆ ಚಿನ್ನದ ಗಟ್ಟಿ ಖರೀದಿಗೆ ಬೆಂಗಳೂರಿಗೆ ಬಂದಿದ್ದರು. ಅದರಂತೆ ಚಿನ್ನದ ಖರೀದಿಗೆ ಬಂದು ಬೆಂಗಳೂರಿನಲ್ಲಿ ಚಿನ್ನ ಖರೀದಿ ಮಾಡಿದ್ದರು. ಮಾರ್ಚ್ 11 ರ ರಾತ್ರಿ ವಾಪಸ್ಸು ರಾಯಚೂರಿಗೆ ಹೋಗಲೆಂದು ಬಸ್ನಲ್ಲಿ ಕುಳಿತಿದ್ದರು. ಆಗ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಶೌಚಾಲಯಕ್ಕೆಂದು ಸುನೀಲ್ ಒಬ್ಬನನ್ನೇ ಬಸ್ನಲ್ಲಿ ಬಿಟ್ಟು, ಚಿನ್ನದ ಗಟ್ಟಿ ಇದ್ದ ಬ್ಯಾಗ್ ಸಮೇತ ಶೌಚಾಲಯದತ್ತ ತೆರಳುತ್ತಿದ್ದರು.
ಈ ವೇಳೆ ಆಗಮಿಸಿದ ಇಬ್ಬರು ತಾವು ಪೊಲೀಸರೆಂದು ಇಬ್ಬರನ್ನು ಎಲ್ಲಿಗೊ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಇಬ್ಬರ ಬಳಿಯಿದ್ದ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:48 am, Mon, 13 March 23