ನಿರ್ಮಾಣ ಹಂತದ ಕಟ್ಟಡದಲ್ಲಿ ಯುವತಿಯ ಶವ ಪತ್ತೆ, ಸ್ಥಳಕ್ಕೆ ಧಾವಿಸಿದ ಸಂಪಂಗಿರಾಮನಗರ ಪೊಲೀಸರು

| Updated By: ಆಯೇಷಾ ಬಾನು

Updated on: Feb 20, 2024 | 1:43 PM

ಬೆಂಗಳೂರಿನ ಡಬಲ್ ರೋಡ್ ಬಳಿ ಇರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಯುವತಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಸಂಪಂಗಿರಾಮನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು 25-26 ವಯಸ್ಸಿನ ಯುವತಿಯ ಮೃತದೇಹ ಎಂದು ತಿಳಿದುಬಂದಿದೆ.

ನಿರ್ಮಾಣ ಹಂತದ ಕಟ್ಟಡದಲ್ಲಿ ಯುವತಿಯ ಶವ ಪತ್ತೆ, ಸ್ಥಳಕ್ಕೆ ಧಾವಿಸಿದ ಸಂಪಂಗಿರಾಮನಗರ ಪೊಲೀಸರು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಫೆ.20: ಬೆಂಗಳೂರಿನ ಡಬಲ್ ರೋಡ್ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವತಿ ಶವಪತ್ತೆಯಾಗಿದೆ (Dead Body Found). ಅರ್ಧ ನಿರ್ಮಾಣ ಮಾಡಿ ಹಾಗೇ ಬಿಟ್ಟಿರುವ ಕಟ್ಟಡದಲ್ಲಿ ಶವಪತ್ತೆಯಾದ ಬಗ್ಗೆ ಮಾಹಿತಿ ಸಿಕ್ಕಿದ್ದು ಸ್ಥಳಕ್ಕೆ ಸಂಪಂಗಿರಾಮನಗರ ಪೊಲೀಸರು (Sampangiramanagar police) ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು 25-26 ವಯಸ್ಸಿನ ಯುವತಿಯ ಮೃತದೇಹ ಎಂದು ತಿಳಿದುಬಂದಿದೆ. ಸದ್ಯ ಸಾವಿನ ಕಾರಣದ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು ಮೃತಳ ಗುರುತು ಪತ್ತೆ ಮಾಡಲಾಗುತ್ತಿದೆ. ಕೊಲೆ, ಆತ್ಮಹತ್ಯೆ ಅಥವಾ ಯಾವ ಕಾರಣಕ್ಕೆ ಸಾವು ಎಂಬುದು ಅಸ್ಪಷ್ಟವಾಗಿದೆ.

ಉಡುಪಿಯಲ್ಲಿ ಪರೀಕ್ಷಾ ಭಯಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

ಪರೀಕ್ಷಾ ಭೀತಿಯಿಂದ ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯದ 6ನೇ ಮಹಡಿಯಿಂದ ಸುಮನ್ ಎಂಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದಾನೆ. ಕೆಲ ಹೊತ್ತು ಕಟ್ಟಡದ ಮೇಲಿಂದ ಕೆಳಗೆ ನೋಡಿದ್ದ. ಇತರೆ ವಿದ್ಯಾರ್ಥಿಗಳು ತನ್ನನ್ನು ನೋಡ್ತಿದ್ದಂತೆ ಕಟ್ಟಡದ ಮೇಲಿಂದ ಜಿಗಿದಿದಾನೆ. ಫೆಬ್ರವರಿ 17ರಂದು ಈ ಘಟನೆದಿದ್ದು, ಈ ವಿಡಿಯೋ ವೈರಲ್ ಆಗಿದೆ. ಮೃತ ವಿದ್ಯಾರ್ಥಿ ದ್ವಿತೀಯ ಬಿಎಸ್‌ಸಿ ಓದುತ್ತಿದ್ದ ಬಿಹಾರನ ಸತ್ಯಂ ಸುಮನ್ ಎಂದು ಗೊತ್ತಾಗಿದೆ. ಈತ ಮಣಿಪಾಲ ಕಾಲೇಜು ಆಫ್ ಹೆಲ್ತ್ ಪ್ರೊಫೇಶನ್ ವಿಭಾಗದಲ್ಲಿ ಓದುತ್ತಿದ್ದ.

ಇದನ್ನೂ ಓದಿ: Viral Video: ಬೆಂಕಿಯ ಜೊತೆ ಸರಸ ಬೇಡ ಅನ್ನೋದು ಇದಕ್ಕೆ ನೋಡಿ

ಬೀದಿ ನಾಯಿಗಳ ದಾಳಿಯಿಂದ ಬಾಲಕನಿಗೆ ಗಂಭೀರ ಗಾಯ

ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದಲ್ಲಿ ಬೀದಿ ನಾಯಿಗಳ ದಾಳಿಯಿಂದ ಅರ್ಫತ್‌ನಗರದ ಉಮರ್ 4 ವರ್ಷದ ಬಾಲಕ ಯಾಸಿನ್ ಪಠಾಣ್‌ನ ಮುಖ, ತೊಡೆಗೆ ನಾಯಿಗಳು ಕಚ್ಚಿವೆ. ಆಸ್ಪತ್ರೆಯಲ್ಲಿ ಬಾಲಕನ ನರಳ ನೋಡಿ ಪೋಷಕರ ಕಣ್ಣೀರು ಹಾಕುವಂತಾಗಿದೆ. ಬೀದಿ ನಾಯಿಗಳ ಬಗ್ಗೆ ಕ್ರಮ ಕೈಗೊಳ್ತಿಲ್ಲ ನಗರಸಭೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:38 pm, Tue, 20 February 24