AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೆಂಕಿಯ ಜೊತೆ ಸರಸ ಬೇಡ ಅನ್ನೋದು ಇದಕ್ಕೆ ನೋಡಿ

ಬೆಂಕಿಯ ಜೊತೆ ಸರಸ ಸರಿಯಲ್ಲ ಎಂದು ಹಿರಿಯರು ಆಗಾಗ್ಗೆ ಹೇಳುತ್ತಿರುತ್ತಾರೆ. ಹೀಗೆ ಹುಚ್ಚಾಟ ಮೆರೆಯುವುದು ಸರಿಯಲ್ಲ ಅಂತ ಗೊತ್ತಿದ್ರೂ ಕೂಡಾ ಕೆಲವೊಂದು ತರ್ಲೆ ಹುಡುಗ್ರು ಬೆಂಕಿಯ ಜೊತೆಗೆ ಕಸರತ್ತು ಮಾಡುತ್ತಾರೆ. ಅದೇ ರೀತಿ ಇಲ್ಲಿಬ್ಬರು ಯುವಕರೂ ಕೂಡಾ ಬೆಂಕಿಯ ಜೊತೆ ಸರಸವಾಡೋಕೆ ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Viral Video: ಬೆಂಕಿಯ ಜೊತೆ ಸರಸ ಬೇಡ ಅನ್ನೋದು ಇದಕ್ಕೆ ನೋಡಿ
ವೈರಲ್​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Feb 20, 2024 | 11:14 AM

Share

ಬೆಂಕಿ ಮತ್ತು ನೀರಿನೊಂದಿಗೆ ಹುಚ್ಚಾಟವಾಡಬಾರದು ಎಂದು ಹಿರಿಯರು ಹೇಳುವ ಮಾತುಂಟು. ಹೀಗೆ ಬೆಂಕಿಯ ಜೊತೆಗೆ ಸರಸವಾಡೋದ್ರಿಂದ ಯಾರಿಗೆ ಯಾವ ತೊಂದರೆ ಆಗಬಹುದು ಎಂದು ಹೇಳಲು ಸಾಧ್ಯವಿಲ್ಲ. ಇದು ಗೊತ್ತಿದ್ದರೂ ಕೂಡಾ ಫೈರ್ ಸ್ಟಂಟ್ ಮಾಡುವವರು ಬೆಂಕಿಯೊಂದಿಗೆ ಆಟವಾಡುತ್ತಿರುತ್ತಾರೆ. ಇಂತಹ ಫೈರ್ ಸ್ಟಂಟ್ ಮಾಡುವವರ ಸಾಹಸವನ್ನು ಕಂಡು ಕೆಲವೊಬ್ಬ ತರ್ಲೆ ಯುವಕರು ನಾವ್ಯಾರಿಗೂ ಕಮ್ಮಿಯಿಲ್ಲ ಎಂದು ಬೆಂಕಿಯ ಜೊತೆಗೆ ಹುಚ್ಚಾಟ ಮಾಡಲು ಹೋಗಿ ಕೈ ಕಾಲು, ಗಡ್ಡ ಸುಟ್ಟುಕೊಂಡ ಅದೆಷ್ಟೋ ಉದಾಹರಣೆಗಳಿವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಯುವಕರಿಬ್ಬರು ಬೆಂಕಿಯ ಜೊತೆ ಸರಸವಾಡಲು ಹೋಗಿ ಪಜೀತಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜಾಸ್ತಿ ಹುಚ್ಚಾಟ ಮೆರೆಯೋಕೆ ಹೋದ್ರ ಇದೇ ಗತಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ತುಣುಕಿನಲ್ಲಿ ಯುವಕರಿಬ್ಬರು ಬೆಂಕಿಯ ಜೊತೆ ಸರಸವಾಡೋಕೆ ಹೋಗಿ ಯಡವಟ್ಟಿಗೆ ಸಿಕ್ಕಿಹಾಕಿಕೊಂಡಿರುವುದನ್ನು ಕಾಣಬಹುದು. ಈ ವಿಡಿಯೋವನ್ನು @ChapraZila ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಜಾಸ್ತಿ ಹುಚ್ಚಾಟ ಮೆರೆದರೆ ಅನಾಹುತ ತಪ್ಪಿದ್ದಲ ಅಂತ ಜನ ಹೇಳೋದು ನಿಜ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇಬ್ಬರು ಯುವಕರು ಕೈಯಲ್ಲಿ ಬಾಟಲಿ ಹಿಡಿದುಕೊಂಡು ಟೆರೇಸ್ ಮೇಲೆ ನಿಂತಿರುವುದನ್ನು ಕಾಣಬಹುದು. ಪೆಟ್ರೋಲ್ ತುಂಬಿದ ಆ ಬಾಟಲಿಯನ್ನು ಟೆರೇಸ್ ಮೇಲಿಟ್ಟು ಅದಕ್ಕೆ ಬೆಂಕಿ ಹಚ್ಚುತ್ತಾರೆ. ಅದ್ರಲ್ಲಿ ಒಬ್ಬ ಯುವಕ ಬಾಟಲಿಯ ಮೇಲೆ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ, ಅದನ್ನು ಕೈಗೆತ್ತಿಕೊಂಡು ಪೆಟ್ರೋಲ್ ಅನ್ನು ಟೆರೇಸ್ ಮೇಲೆ ಚೆಲ್ಲುತ್ತಾನೆ. ಆ ಸಂದರ್ಭದಲ್ಲಿ ಬೆಂಕಿಯೂ ಕೂಡಾ ಧಗಧಗನೇ ಹತ್ತಿಕೊಳ್ಳುತ್ತದೆ. ಆತ ಪೆಟ್ರೋಲ್ ಸುರಿಯುವ ಈ ಪ್ರಕ್ರಿಯೆಯಲ್ಲಿ ಅಲ್ಲಿದ್ದ ಇನ್ನೊಬ್ಬ ಯುವಕನ ಮೇಲೂ ಕೆಲವು ಹನಿ ಪೆಟ್ರೋಲ್ ಬಿದ್ದು, ಆತನ ಮೇಲೂ ಬೆಂಕಿ ಹರಡುತ್ತದೆ. ಬೆಂಕಿ ಹತ್ತಿಕೊಂಡ ತಕ್ಷಣ ನೋವಿನಿಂದ ಒದ್ದಾಡುತ್ತಾ ಅದನ್ನು ನಂದಿಸಲು ಪ್ರಯತ್ನಿಸಿದರು. ಆದರೆ ಬೆಂಕಿಯನ್ನು ಹೇಗೆ ನಿಯಂತ್ರಿಸಬೇಕೆಂದು ಇಬ್ಬರಿಗೂ ಅರ್ಥವಾಗಲಿಲ್ಲ. ಕೊನೆಗೆ ಆ ಹುಡುಗ ತನ್ನ ಟೀ ಶರ್ಟ್ ಹರಿದು ಹೇಗೋ ತನ್ನ ಜೀವ ಉಳಿಸಿಕೊಂಡನು. ಸ್ವಲ್ಪ ವಿಳಂಬವಾಗುತ್ತಿದ್ದರೂ, ದೊಡ್ಡ ಅಪಘಾತವೇ ಸಂಭವಿಸುತ್ತಿತ್ತು.

ಇದನ್ನೂ ಓದಿ: ಗ್ಯಾಸ್ ಖಾಲಿ ಎಂದು ಸಾಂಬಾರ್ ಬೇಯಿಸಲು ಈತ ಮಾಡಿದ ಪ್ಲಾನ್ ನೋಡಿ

ಫೆಬ್ರವರಿ 01 ರಂದು ಹಂಚಿಕೊಳ್ಳಲಾದ ಈ ವಿಡಿಯೋ 40 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಹಾಗೂ 400 ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಈ ವೈರಲ್ ವಿಡಿಯೋವನ್ನು ಕಂಡು ಬೆಂಕಿಯ ಜೊತೆ ಸರಸವಾಡಿದ್ರೆ ಇದೇ ಗತಿ ಅಂತ ನೆಟ್ಟಿಗರು ಹೇಳಿದ್ದಾರೆ.