AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಗ್ಯಾಸ್ ಖಾಲಿ ಎಂದು ಸಾಂಬಾರ್ ಬೇಯಿಸಲು ಈತ ಮಾಡಿದ ಪ್ಲಾನ್ ನೋಡಿ

ನಮ್ಮಲ್ಲಿ ಪ್ರತಿಭೆಗಳಿಗೆ,  ಜುಗಾಡ್ ಐಡಿಯಾಗಳಿಗೇನೂ ಕೊರತೆ ಇಲ್ಲ. ಹೊಸ ಹೊಸ ಪ್ರಯೋಗಗಳ ಕುರಿತ ಇಂತಹ ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಸದಾ ವೈರಲ್ ಆಗುತ್ತಿರುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಗ್ಯಾಸ್ ಖಾಲಿಯಾದರೆ ಯಾಕೆ ಟೆನ್ಷನ್, ನನ್ನತ್ರ ಈ ಸಮಸ್ಯೆಗೆ ಪರಿಹಾರವಿದೆ ಎನ್ನುತ್ತಾ ವ್ಯಕ್ತಿಯೊಬ್ಬ ವಾಟರ್ ಹೀಟರ್ ರಾಡ್ ಸಹಾಯದಿಂದ ಸಾಂಬರ್ ಬೇಯಿಸಿದ್ದಾನೆ. ಈತನ ಈ ಜುಗಾಡ್ ಐಡಿಯಾವನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

Viral Video: ಗ್ಯಾಸ್ ಖಾಲಿ ಎಂದು ಸಾಂಬಾರ್ ಬೇಯಿಸಲು ಈತ ಮಾಡಿದ ಪ್ಲಾನ್ ನೋಡಿ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 19, 2024 | 6:54 PM

Share

ಇಂದಿನ ಕಾಲದಲ್ಲಿ ಗ್ಯಾಸ್ ಸ್ಟವ್ ಇಲ್ಲದ ಮನೆಗಳೇ ಇಲ್ಲ. ಕಟ್ಟಿಗೆ ಒಲೆಯ ಬದಲು ಪ್ರತಿಯೊಬ್ಬರೂ ಈ ಗ್ಯಾಸ್ ಒಲೆಯಲ್ಲಿಯೇ ಅಡುಗೆ ಮಾಡುತ್ತಾರೆ. ಆದರೆ ಈ ಗ್ಯಾಸ್ ಯಾವಾಗ ಖಾಲಿ ಆಗುತ್ತೆ ಅನ್ನೋದೇ ಬಹುದೊಡ್ಡ ಸಮಸ್ಯೆ. ಅದೆಷ್ಟೋ ಗೃಹಿಣಿಯರು ಅಡುಗೆ ಮಾಡುವ  ಸಂದರ್ಭದಲ್ಲಿ ಗ್ಯಾಸ್ ಖಾಲಿಯಾಗಿ, ಈ ಗ್ಯಾಸ್ ಇನ್ಯಾವಾಗ ಬರುತ್ತೋ, ಮಧ್ಯಾಹ್ನದ ಊಟಕ್ಕೆ ಹೇಗಪ್ಪಾ ಅಡುಗೆ ಬೇಯಿಸೋದು ಎಂದು ಸಂಕಷ್ಟಕ್ಕೆ ಸಿಳುಕಿದ್ದೂ ಉಂಟು. ಗ್ಯಾಸ್ ಖಾಲಿಯಾದರೆ ಯಾವುದೇ ಟೆನ್ಷನ್ ಮಾಡಿಕೊಳ್ಳಬೇಡಿ, ಸರಿಯಾದ ಸಮಯಕ್ಕೆ ಊಟ ಬೇಕೆಂದರೆ ನೀವು ವಾಟರ್ ಹೀಟರ್ ರಾಡ್ ನಿಂದಲೂ ಅಡುಗೆಯನ್ನು ಮಾಡಿಕೊಳ್ಳಬಹುದು ಎಂಬುದನ್ನು ಇಲ್ಲೊಬ್ಬ ವ್ಯಕ್ತಿ ತೋರಿಸಿಕೊಟ್ಟಿದ್ದಾನೆ. ಈತನ ಜುಗಾಡ್ ಐಡಿಯಾವನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ದೇಸಿ ಜುಗಾಡ್ ಉಪಾಯಗಳ ಕುರಿತ ಒಂದಲ್ಲಾ ಒಂದು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಸದ್ಯ ಅದೇ ರೀತಿಯ ವಿಡಿಯೋವೊಂದು ಇದೀಗ ಹರಿದಾಡುತ್ತಿದ್ದು, ಗ್ಯಾಸ್ ಖಾಲಿಯಾಯಿತೆಂದು ವ್ಯಕ್ತಿಯೊಬ್ಬ ವಾಟರ್ ಹೀಟರ್ ರಾಡ್ ಸಹಾಯದಿಂದ ಸಾಂಬಾರ್ ಬೇಯಿಸಿದ್ದಾನೆ. ಈ ವಿಡಿಯೋವನ್ನು  @sahoo_341  ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by Silu Majih (@sahoo_341)

ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಅಡುಗೆ ಮಾಡುವ ಸಮಯದಲ್ಲಿ ಗ್ಯಾಸ್ ಖಾಲಿಯಾಗಿ ಹೋಗುತ್ತೆ. ಈ ಸಾಂಬಾರ್ ಅನ್ನು ಇನ್ನೂ ಹೇಗಪ್ಪಾ ಬೇಯಿಸೋದು ಎಂದು ಯೋಚಿಸಿದ ಆತ, ತನ್ನ ಜುಗಾಡ್ ಐಡಿಯಾವನ್ನು ಉಪಯೋಗಿಸಿಕೊಂಡು ವಾಟರ್ ಹೀಟರ್ ರಾಡ್ ಸಹಾಯದಿಂದ ಸಾಂಬಾರ್ ಬೇಯಿಸುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಕೋಪ ತಂದ ಆಪತ್ತು, ಸಿಗರೇಟ್ ಕೊಡಲಿಲ್ಲವೆಂದು ಕಾರನ್ನೇ ಸುಟ್ಟು ಹಾಕಿದ ಸೈಕೋ ಮಹಿಳೆ

ಫೆಬ್ರವರಿ 03 ರಂದು ಹಂಚಿಕೊಳ್ಳಲಾದ ಈ ವಿಡಿಯೋ 15.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  ನಾಲ್ಕುವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ತರಹೇವಾರಿ ಕಮೆಂಟ್ಸ್ ಗಳೂ ಹರಿದು ಬಂದಿವೆ.  ಒಬ್ಬ ಬಳಕೆದಾರರು ʼನಮ್ಮ ಭಾರತದಲ್ಲಿ ಇಂತಹ ಪ್ರತಿಭೆಗಳಿಗೆ ಯಾವುದೇ ಕೊರತೆಯಿಲ್ಲʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ವ್ಯಕ್ತಿ ಅಡುಗೆಯಲ್ಲಿ ಪಿ.ಹೆಚ್.ಡಿ ಮಾಡಿದ್ದಾನೆʼ ಎಂಬ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ತಂತ್ರಜ್ಞಾನ ಭಾರತ ಬಿಟ್ಟು ಹೊರಗೆ ಹೋಗಬಾರದುʼ ಎಂಬ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್