Viral Video: ನಿಂಗಿದು ಬೇಕಿತ್ತಾ ಮಗನೇ; ಮೊಸಳೆ ಮರಿಗೆ ಮುತ್ತು ಕೊಡಲು ಹೋಗಿ ಪಜೀತಿಗೆ ಸಿಲುಕಿದ ವ್ಯಕ್ತಿ
ಕೆಲವರು ಇತರರ ಮುಂದೆ ನಾನ್ಯಾರಿಗೂ ಕಮ್ಮಿಯಿಲ್ಲ ಎಂದು ತೋರಿಸಿಕೊಳ್ಳಲು ಅಪಾಯಕಾರಿ ಸಾಹಸಗಳನ್ನು ಮಾಡಲು ಹೋಗಿ ಸುಮ್ನೆ ಇರಲಾರದೆ ಇರುವೆ ಬಿಟ್ಟುಕೊಳ್ಳುತ್ತಿರುತ್ತಾರೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಸಿಗುತ್ತವೆ. ಇದೀಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ವ್ಯಕ್ತಿಯೊಬ್ಬ ಮೊಸಳೆ ಮರಿಗೆ ಮುತ್ತು ಕೊಡಲು ಹೋಗಿ ಪಜೀತಿಗೆ ಸಿಳುಕಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ದೃಶ್ಯವಾಳಿ ನೋಡುಗರನ್ನು ಬೆಚ್ಚಿ ಬೀಳಿಸಿದೆ.
ಮೊಸಳೆಗಳು ಎಷ್ಟು ಅಪಾಯಕಾರಿ ಜೀವಿ ಎಂಬುದು ಎಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಮೊಸಳೆಗಳ ತಂಟೆಗೆ ಅಷ್ಟಾಗಿ ಯಾರು ಹೋಗಲ್ಲ. ಅಷ್ಟೇ ಅಲ್ಲದೆ ಮೊಸಳೆಗಳೇ ನಮ್ಮ ತಂಟೆಗೆ ಬಂದ್ರೂ, ಆ ದೈತ್ಯ ಜೀವಿಯನ್ನು ಕಂಡು ನಾವೆಲ್ಲರೂ ಕಾಲ್ಕಿತ್ತು ಓಡಿ ಹೋಗುತ್ತೇವೆ. ಆದ್ರೆ ಈ ಕೆಲವು ಎಂಟೆದೆ ಬಂಟರು ಅಪಾಯಕಾರಿ ಹಾವುಗಳನ್ನು, ಮೊಸಳೆಗಳನ್ನು ಹಿಡಿಯುವಂತಹ ಸಾಹಸಕ್ಕೆ ಕೈ ಹಾಕುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಆಸಾಮಿ ಕೂಡಾ ನಾನ್ಯಾರಿಗೂ ಕಮ್ಮಿಯಿಲ್ಲ ಎನ್ನುತ್ತಾ, ಮೊಸಳೆಯ ಮರಿಯನ್ನು ಕೈಯಲ್ಲಿ ಎತ್ತಿಕೊಂಡಿದ್ದು ಮಾತ್ರವಲ್ಲದೆ, ಆ ಮೊಸಳೆಗೆ ಮುತ್ತನ್ನು ಕೊಡುವ ಸಾಹಸಕ್ಕೆ ಕೈ ಹಾಕಿದ್ದಾನೆ. ಹೀಗೆ ಮುತ್ತು ಕೊಡಲು ಬಂದಂತಹ ಈ ವ್ಯಕ್ತಿಯ ಮೂಗನ್ನೇ ಮೊಸಳೆ ಕಚ್ಚಿ ಹಾಕಿದೆ. ಇದೀಗ ಸುಮ್ನೆ ಇರಲಾರದೆ ಇರುವೆ ಬಿಟ್ಟಿಕೊಂಡ ಈ ಭೂಪನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ವೈರಲ್ ವಿಡಿಯೋವನ್ನು ಲೂಯಿಸ್ ರಾಮಿರೆಜ್ (@lounatic11) ಎಂಬವರು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮೊಸಳೆಯ ಮರಿಗೆ ಮುತ್ತು ಕೊಡುಲು ಹೋಗಿ ಪಜೀತಿಗೆ ಸಿಳುಕಿರುವಂತಹ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮೊಸಳೆ ಮರಿಯನ್ನು ಕೈಯಲ್ಲಿ ಹಿಡಿದುಕೊಂಡು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಕೊನೆಯಲ್ಲಿ ಆತ ಈ ಅಪಾಯಕಾರಿ ಜೀವಿಗೆ ಮುತ್ತು ಕೊಡುವ ಸಾಹಸಕ್ಕೆ ಕೈ ಹಾಕಿದ್ದಾನೆ. ಮುತ್ತು ಕೊಡುತ್ತಿದ್ದಂತೆ ಕೋಪಗೊಂಡ ಮೊಸಳೆ ಮರಿ ಆತನ ಮೂಗನ್ನೇ ಕಚ್ಚಿ ಹಾಕುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಬೆಂಕಿ ಅವಘಡದಿಂದ ಮನೆಯನ್ನು ರಕ್ಷಣೆ ಮಾಡಿದ ಶ್ವಾನ, ಹೇಗಿದೆ ನೋಡಿ ಇದರ ಬುದ್ಧಿವಂತಿಕೆ
ಜನವರಿ 30 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ನಾಲ್ಕು ಲಕ್ಷಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಅಲ್ಲದೆ ತರಹೇವಾರಿ ಕಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಯಾರಿವನು ಮೂರ್ಖʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಬ್ಬಬ್ಬಾ ಈ ದೃಶ್ಯ ತುಂಬಾನೇ ಭಯಾನಕವಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ವ್ಯಕ್ತಿ ಯಾವುದೇ ವೆಚ್ಚವಿಲ್ಲದೆ ಮೂಗಿನ ಮೇಲೆ ಟ್ಯಾಟೂ ಹಾಕಿಸಿಕೊಂಡʼ ಎಂಬ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾನೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Mon, 19 February 24