Viral Video: ಕೋಪ ತಂದ ಆಪತ್ತು, ಸಿಗರೇಟ್ ಕೊಡಲಿಲ್ಲವೆಂದು ಕಾರನ್ನೇ ಸುಟ್ಟು ಹಾಕಿದ ಸೈಕೋ ಮಹಿಳೆ
ಮನುಷ್ಯನಿಗೆ ಕೋಪ ಬರುವುದು ಸಹಜ. ಆದರೆ ಈ ಕೋಪದ ಕೈಗೆ ಬುದ್ಧಿ ಕೊಟ್ರೆ ಅದರ ಪರಿಣಾಮ ತುಂಬಾ ಗಂಭೀರವಾಗಿರುತ್ತದೆ. ಈ ಒಂದು ಸಿಟ್ಟಿನ ಕಾರಣದಿಂದ ಕೊಲೆಗಳು, ಹೊಡೆದಾಟಗಳು ನಡೆದಿರುವುದನ್ನು ನೀವು ನೋಡಿರಬಹುದು, ಕೇಳಿರಬಹುದು. ಸದ್ಯ ಇಲ್ಲೊಂದು ಅಂತಹದ್ದೇ ಘಟನೆಯೊಂದು ನಡೆದಿದ್ದು, ತನಗೆ ಸೇದಲು ಸಿಗರೇಟ್ ಕೊಡಲಿಲ್ಲವೆಂದು ಮಹಿಳೆಯೊಬ್ಬಳು ಕೋಪದ ಭರದಲ್ಲಿ ಪೆಟ್ರೋಲ್ ಬಂಕ್ ನಲ್ಲಿ ವ್ಯಕ್ತಿಯೊಬ್ಬರ ಕಾರನ್ನೇ ಸುಟ್ಟು ಹಾಕಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಭಯಾನಕ ವಿಡಿಯೋ ನೋಡುಗರನ್ನು ಬೆಚ್ಚಿ ಬೀಳಿಸಿದೆ.
ಮನುಷ್ಯನಿಗೆ ಕೋಪ ಬರುವುದು ಸಹಜ. ಕೋಪವನ್ನು ಮನುಷ್ಯನ ಪರಮ ಶತ್ರು ಎಂದು ಹೇಳಲಾಗುತ್ತದೆ. ಏಕೆಂದರೆ ಕೋಪದ ಕೈಗೆ ಬುದ್ಧಿ ಕೊಟ್ರೆ ಅದರ ಪರಿಣಾಮಗಳು ತುಂಬಾ ಗಂಭೀರವಾಗಿರುತ್ತದೆ. ಹೌದು ಒಬ್ಬ ವ್ಯಕ್ತಿ ಕೋಪದ ಭರದಲ್ಲಿ ಏನು ಮಾಡುತ್ತಾನೆ ಎಂದು ಅವನಿಗೆಯೇ ಅರಿವಿರುವುದಿಲ್ಲ. ಇದರಿಂದ ಆತ ಕೊಲೆ ಮಾಡುವುದಕ್ಕೂ ಸಿದ್ಧನಿರುತ್ತಾನೆ. ಕೆಲವರಿಗೆ ಸಣ್ಣಪುಟ್ಟ ಕಾರಣ ಸಾಕು ಕೋಪ ಜೋರಾಗಿ ಬಂದುಬಿಡುತ್ತದೆ. ಈ ಸಿಟ್ಟಿನ ಕಾರಣದಿಂದ ಜಗಳಗಳು, ಕೊಲೆಗಳು ನಡೆದಿರುವ ಅದೆಷ್ಟೋ ಉದಾಹರಣೆಗಳಿವೆ. ಈಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ತನಗೆ ಸೇದಲು ಸಿಗರೇಟ್ ಕೊಡಲಿಲ್ಲವೆಂದು, ವ್ಯಕ್ತಿಯೊಬ್ಬರ ಕಾರನ್ನೆ ಸೈಕೋ ಮಹಿಳೆ ಸುಟ್ಟು ಭಸ್ಮ ಮಾಡಿದ್ದಾಳೆ. ಈ ಕುರಿತ ಬೆಚ್ಚಿ ಬೀಳಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತನಗೆ ಸೇದಲು ಸಿಗರೇಟ್ ಕೊಡಲಿಲ್ಲವೆಂದು ಕೋಪಗೊಂಡ ಮಹಿಳೆ ಪೆಟ್ರೋಲ್ ಬಂಕ್ ಅಲ್ಲಿ ವ್ಯಕ್ತಿಯೊಬ್ಬರ ಕಾರಿಗೆ ಬೆಂಕಿ ಹಚ್ಚಿದಂತಹ ಭಯಾನಕ ದೃಶ್ಯವನ್ನು ಕಾಣಬಹುದು. ಈ ವೈರಲ್ ವಿಡಿಯೋವನ್ನು @PicturesFolder ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸಿಗರೇಟ್ ಕೊಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬರ ಕಾರಿಗೆ ಬೆಂಕಿ ಹಚ್ಚಿದ ಮಹಿಳೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Woman asks man for a cigarette, when he refuses she lights his car on fire 😬 pic.twitter.com/iH7YHI8Pbq
— non aesthetic things (@PicturesFoIder) February 16, 2024
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಪೆಟ್ರೋಲ್ ಬಂಕ್ ಅಲ್ಲಿ ತನ್ನ ಕಾರಿಗೆ ಪೆಟ್ರೋಲ್ ತುಂಬಿಸುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಅಷ್ಟರಲ್ಲಿ ಅವರ ಬಳಿ ಬಂದಂತಹ ಮಹಿಳೆಯೊಬ್ಬಳು ಸಿಗರೇಟ್ ಬೇಕೆಂದು ಕೇಳುತ್ತಾಳೆ. ಪೆಟ್ರೋಲ್ ಬಂಕ್ ಆಗಿರುವ ಕಾರಣ ಆ ವ್ಯಕ್ತಿ ಸಿಗರೇಟ್ ಕೊಡಲು ನಿರಾಕರಿಸುತ್ತಾನೆ. ಇದರಿಂದ ಕೋಪಕೊಂಡ ಈ ಮಹಿಳೆ ಕಾರಿಗೆ ಪೆಟ್ರೋಲ್ ತುಂಬಿಸುತ್ತಿರುವ ವೇಳೆಯಲ್ಲಿ ಲೈಟರ್ ನಿಂದ ಕಾರಿಗೆ ಬೆಂಕಿ ಹಚ್ಚಿ ಓಡಿ ಹೋಗುತ್ತಾಳೆ. ಕಾರಿಗೆ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಆ ವ್ಯಕ್ತಿಯೂ ಅಲ್ಲಿಂದ ಓಡಿ ಹೋಗುವಂತಹ ದೃಶ್ಯವನ್ನು ಕಾಣಬಹುದು.
ಈ ಘಟನೆ ಇಸ್ರೇಲ್ ನ ಜೆರುಸಲೇಂನಲ್ಲಿ ನಡೆದಿದ್ದು, ಮಹಿಳೆಯೊಬ್ಬಳು ಸಿಗರೇಟ್ ನೀಡಲು ನಿರಾಕರಿಸಿದ ವ್ಯಕ್ತಿಯೊಬ್ಬರ ಕಾರಿಗೆ ಪೆಟ್ರೋಲ್ ಬಂಕ್ ಅಲ್ಲಿ ಬೆಂಕಿ ಹಚ್ಚಿದ್ದಾಳೆ. ಇದಾದ ಬಳಿಕ ಮಹಿಳೆಯನ್ನು ಪೋಲಿಸರು ಬಂಧಿಸಿದ್ದು, ತಾನು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಿಲ್ಲ ಅದು ಅಕಸ್ಮಾತಾಗಿ ಬೆಂಕಿ ತಗುಲಿದ್ದು ಎಂಬ ಹೇಳಿಕೆಯನ್ನು ನೀಡಿದ್ದಾಳೆ.
ಇದನ್ನೂ ಓದಿ; ನಿಂಗಿದು ಬೇಕಿತ್ತಾ ಮಗನೇ; ಮೊಸಳೆ ಮರಿಗೆ ಮುತ್ತು ಕೊಡಲು ಹೋಗಿ ಪಜೀತಿಗೆ ಸಿಲುಕಿದ ವ್ಯಕ್ತಿ
ಫೆಬ್ರವರಿ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 10.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 38 ಸಾವಿರಕ್ಕೂ ಹೆಚ್ಚಿನ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ ಗಳು ಹರಿದು ಬಂದಿದೆ. ಒಬ್ಬ ಬಳಕೆದಾರರು ʼಆಕೆಯನ್ನು ನೇರವಾಗಿ ಜೈಲಿಗೆ ಕಳುಹಿಸಿʼ ಎಂದು ಕಿಡಿ ಕಾರಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಬ್ಬಬ್ಬಾ ದೇವ್ರೆ ಈ ಕೆಲವು ಜನಗಳು ಯಾಕಿಷ್ಟು ಕ್ರೂರ ಮನಸ್ಥಿತಿಯನ್ನು ಹೊಂದಿರುತ್ತಾರೆʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ನಿಜವಾಗಿಯೂ ಕೆಟ್ಟ ಬುದ್ಧಿʼ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ