ಹಳೆ ವೈಷಮ್ಯಕ್ಕೆ ಕಲಬುರಗಿಯಲ್ಲಿ ಯುವಕ ಬಲಿಯಾದ
ಹಳೆ ವೈಷಮ್ಯದ ಹಿನ್ನೆಲೆಯಲ್ಲಿ 23 ವರ್ಷ ವಯಸ್ಸಿನ ಯುವಕನೊಬ್ಬನನ್ನು ಹಾಡುಹಗಲೇ ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿರುವ ಕೃತ್ಯ ಕಲಬುರಗಿ ನಗರದ ಪಬ್ಲಿಕ್ ಗಾರ್ಡನ್ ಮುಂಭಾಗದಲ್ಲಿ ನಡೆದಿದೆ. ಯುವಕನನ್ನು ನಗರದ ರಾಣೇಶ್ ಪೀರ್ ದರ್ಗಾ ಬಡಾವಣೆ ನಿವಾಸಿ ವಿರೇಶ್ ಕಡಗಂಚಿ ಎಂದು ಗುರುತಿಸಲಾಗಿದೆ. ಪಲ್ಸರ್ ಬೈಕ್ನಲ್ಲಿ ಬಂದ ಮೂವರು ಹಂತಕರು ಕೃತ್ಯವೆಸಗಿ ಕ್ಷಣಾರ್ಧದಲ್ಲೇ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವಿರೇಶ್ನನ್ನು ಅಂಬ್ಯಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ದಾಖಲಿಸುವ ಮುನ್ನವೇ ಕೊನೆಯುಸಿರೆಳದನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಬ್ರಹ್ಮಪುರ ಪೊಲೀಸ್ […]
ಹಳೆ ವೈಷಮ್ಯದ ಹಿನ್ನೆಲೆಯಲ್ಲಿ 23 ವರ್ಷ ವಯಸ್ಸಿನ ಯುವಕನೊಬ್ಬನನ್ನು ಹಾಡುಹಗಲೇ ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿರುವ ಕೃತ್ಯ ಕಲಬುರಗಿ ನಗರದ ಪಬ್ಲಿಕ್ ಗಾರ್ಡನ್ ಮುಂಭಾಗದಲ್ಲಿ ನಡೆದಿದೆ. ಯುವಕನನ್ನು ನಗರದ ರಾಣೇಶ್ ಪೀರ್ ದರ್ಗಾ ಬಡಾವಣೆ ನಿವಾಸಿ ವಿರೇಶ್ ಕಡಗಂಚಿ ಎಂದು ಗುರುತಿಸಲಾಗಿದೆ.
ಪಲ್ಸರ್ ಬೈಕ್ನಲ್ಲಿ ಬಂದ ಮೂವರು ಹಂತಕರು ಕೃತ್ಯವೆಸಗಿ ಕ್ಷಣಾರ್ಧದಲ್ಲೇ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವಿರೇಶ್ನನ್ನು ಅಂಬ್ಯಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ದಾಖಲಿಸುವ ಮುನ್ನವೇ ಕೊನೆಯುಸಿರೆಳದನೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಂತಕರನ್ನು ಬಂಧಿಸಲು ಜಾಲ ಬೀಸಲಾಗಿದೆ