1,419 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಇನ್ನೂ ಸಿಕ್ಕಿಲ್ಲ ಇಂಗ್ಲಿಷ್ ಮೀಡಿಯಂ ಪಠ್ಯ ಪುಸ್ತಕಗಳು, ಪೋಷಕರ ಆಕ್ರೋಶ

|

Updated on: Sep 10, 2024 | 11:14 AM

75ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಇರುವ 1,419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹಾಲಿ ಇರುವ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದಲ್ಲಿ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ 1,419 ಶಾಲೆಗಳಿಗೆ ಇನ್ನೂ ಕೂಡ ಪಠ್ಯಪುಸ್ತಕಗಳು ಸಿಕ್ಕಿಲ್ಲ. ಇದರಿಂದ ಮಕ್ಕಳ ಓದಿಗೆ ಸಮಸ್ಯೆಗಳು ಎದುರಾಗಿವೆ.

1,419 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಇನ್ನೂ ಸಿಕ್ಕಿಲ್ಲ ಇಂಗ್ಲಿಷ್ ಮೀಡಿಯಂ ಪಠ್ಯ ಪುಸ್ತಕಗಳು, ಪೋಷಕರ ಆಕ್ರೋಶ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಸೆ.10: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2024-25ನೇ ಸಾಲಿನಿಂದ ಸದ್ಯ ಇರುವ ಕನ್ನಡ/ ಇತರೆ ಮಾಧ್ಯಮದ ಜೊತೆಗೆ ಆಂಗ್ಲ ದ್ವಿಭಾಷಾ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ. ರಾಜ್ಯದಲ್ಲಿ 75ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಇರುವ 1,419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹಾಲಿ ಇರುವ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದಲ್ಲಿ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಸರ್ಕಾರದ ಈ ಆದೇಶ ಬಂದಿರುವ ಸರ್ಕಾರಿ ಶಾಲೆಗಳು ತಮ್ಮದೇ ಆದ ಸಮಸ್ಯೆಗಳನ್ನು ಎದುರಿಸುತ್ತಿವೆ.

ಸದ್ಯ ಮಧ್ಯಾವಧಿ ಪರೀಕ್ಷೆಗಳಿಗೆ ಸಾವಿರಾರು ಮಕ್ಕಳು ತಯಾರಾಗುತ್ತಿದ್ದು, ಈ ವರ್ಷದ ಆರಂಭದಲ್ಲಿ ಆಂಗ್ಲ-ಮಾಧ್ಯಮ ವಿಭಾಗಗಳನ್ನು ಪರಿಚಯಿಸಿದ 1,419 ಶಾಲೆಗಳಿಗೆ ಇನ್ನೂ ಕೂಡ ಪಠ್ಯಪುಸ್ತಕಗಳು ಸಿಕ್ಕಿಲ್ಲ. ಇದರಿಂದ ಮಕ್ಕಳ ಓದಿಗೆ ಸಮಸ್ಯೆಗಳು ಎದುರಾಗಿವೆ. ಇದರ ಹೊರತಾಗಿಯೂ, ಸೆಪ್ಟೆಂಬರ್ 5 ರಂದು, ಸರ್ಕಾರವು 2,000 ಶಾಲೆಗಳಲ್ಲಿ ಹೆಚ್ಚು ಬೇಡಿಕೆಯಿರುವ ವಿಭಾಗಗಳನ್ನು ಸೇರಿಸುವ ತನ್ನ ಕಾರ್ಯಕ್ರಮದ ಭಾಗವಾಗಿ ವರ್ಷದ ಮಧ್ಯದಲ್ಲಿ ಇನ್ನೂ 373 ಶಾಲೆಗಳಲ್ಲಿ ಇಂಗ್ಲಿಷ್-ಮಾಧ್ಯಮ ವಿಭಾಗಗಳನ್ನು ಮಂಜೂರು ಮಾಡಲು ನಿರ್ಧರಿಸಿದೆ.

ಸರ್ಕಾರಿ ಶಾಲೆಗಳಿಗೆ ಪುಸ್ತಕಗಳನ್ನು ಪೂರೈಸುವ ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯು ಈ ತಿಂಗಳ ಅಂತ್ಯದೊಳಗೆ ಅಗತ್ಯ ಅಧ್ಯಯನ ಸಾಮಗ್ರಿಗಳನ್ನು ಪೂರೈಸುವ ಸಾಧ್ಯತೆ ಇದ್ದು, ಕೆಲವು ತಜ್ಞರು ಹಿಂದಿನ ವರ್ಷದ ಪುಸ್ತಕಗಳನ್ನು ಬಳಸಿ ಅಥವಾ ಬೇರೆ ವ್ಯವಸ್ಥೆ ಮಾಡುವವರೆಗೆ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು, ವಿಡಿಯೋ ನೋಡಿ

2019ರಲ್ಲಿ ಹೆಚ್‌ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಲಾಗಿತ್ತು. ಅಂದಿನಿಂದ, 285 ಕರ್ನಾಟಕ ಸಾರ್ವಜನಿಕ ಶಾಲೆಗಳು ಸೇರಿದಂತೆ 2,403 ಶಾಲೆಗಳು ಇಂಗ್ಲಿಷ್-ಮಾಧ್ಯಮ ವಿಭಾಗಗಳನ್ನು ಆರಂಭಿಸಿವೆ. ಇದೀಗ ಸಾರ್ವಜನಿಕ ಬೇಡಿಕೆಯಿಂದ ಉತ್ತೇಜಿತವಾಗಿರುವ ರಾಜ್ಯ ಸರ್ಕಾರವು 2024-25ರ ಬಜೆಟ್‌ನಲ್ಲಿ 2,000 ಆಂಗ್ಲ-ಮಾಧ್ಯಮ ವಿಭಾಗಗಳನ್ನು ಸೇರಿಸುವುದಾಗಿ ಘೋಷಿಸಿತ್ತು. ಇನ್ನೂ 1,419 ಶಾಲೆಗಳಿಗೆ ಪಠ್ಯಪುಸ್ತಕಗಳ ಕೊರತೆ ಇದ್ದು ಇತ್ತ ಪುಸ್ತಕಗಳಿಲ್ಲದಿರುವ ಕಾರಣ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ