BTech in IISc: ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಿಂದ ಹೊಸ ಕೋರ್ಸ್; ಜೂನ್ 1ರಿಂದ ಅರ್ಜಿ ಆಹ್ವಾನ
IIScಯಲ್ಲಿ BTech ಗಣಿತ ಮತ್ತು ಕಂಪ್ಯೂಟಿಂಗ್‌ನ ಹೊಸ ಕೋರ್ಸ್ಗಳನ್ನು ಪ್ರಾರಂಭಿಸಿದ್ದು ನಾಳೆ ಜೂನ್ 1 ರಿಂದಲೇ ಅರ್ಜಿಗಳನ್ನು ಸಲ್ಲಿಸಬಹುದು. ಆಸಕ್ತಿ ಇರುವವರು https://admissions.iisc.ac.in ವೆಬ್ ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಭಾರತದ ಅತ್ಯುತ್ತಮ ಯೂನಿವರ್ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಈಗ ಹೊಸ ಕೋರ್ಸ್ಗಳನ್ನು ಪ್ರಾರಂಭಿಸಿದೆ. IIScಯಲ್ಲಿ BTech ಗಣಿತ ಮತ್ತು ಕಂಪ್ಯೂಟಿಂಗ್‌ನ ಹೊಸ ಕೋರ್ಸ್ಗಳನ್ನು ಪ್ರಾರಂಭಿಸಿದ್ದು ನಾಳೆಯಿಂದಲೇ (ಜೂನ್ 1) ಅರ್ಜಿಗಳನ್ನು ಸಲ್ಲಿಸಬಹುದು. ಆಸಕ್ತಿ ಇರುವವರು https://admissions.iisc.ac.in ವೆಬ್ ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಹಾಗೂ ಈ ಹೊಸ ಕೋರ್ಸ್ಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು https://iisc.ac.in/admissions/undergraduate-btech/ ವೆಬ್ ಸೈಟ್ಗೆ ಭೇಟಿ ನೀಡಬಹುದು. ಇನ್ನು BTechನಲ್ಲಿ ಅನೇಕ ಕೋರ್ಸ್ಗಳು ಲಭ್ಯವಿದೆ. ಪದವಿಪೂರ್ವ ಹಂತದಲ್ಲಿ ವಿದ್ಯಾರ್ಥಿಗಳು ಸಂಪನ್ಮೂಲ, ಮಾರ್ಗದರ್ಶನ ಮತ್ತು ನಿರ್ದೇಶನದ ಕೊರತೆಯಿಂದಾಗಿ ಕಲಿಕೆಗೆ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಈ ಕೋರ್ಸ್ ಮೂಲಕ ಪದವಿಪೂರ್ವ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಇದು ಸಹಾಯಕವಾಗಲಿದೆ. ಹೀಗೆ ತರಬೇತಿ ಪಡೆದ ವ್ಯಕ್ತಿಗಳ ಶೈಕ್ಷಣಿಕ ಮತ್ತು ಉದ್ಯಮ ಎರಡೂ ಕ್ಷೇತ್ರಗಳಲ್ಲೂ ಮಹತ್ವದ ಪ್ರಭಾವ ಬೀರುತ್ತದೆ. ಇದನ್ನೂ ಓದಿ: Team India: ಮುಂದಿನ 6 ತಿಂಗಳು ಟೀಮ್ ಇಂಡಿಯಾ ಫುಲ್ ಬಿಝಿ: ಹೀಗಿದೆ ವೇಳಾಪಟ್ಟಿ
Applications for IISc’s new BTech in Mathematics & Computing will open tomorrow. Don’t miss this opportunity to be part of an exciting and futuristic programme! Apply at: https://t.co/jI8yN06vtL More info: https://t.co/xYCY4mjZr6#admissions2022 #math #computing #AI #DataScience pic.twitter.com/4e7lloahat
— IISc Bangalore (@iiscbangalore) May 31, 2022
ಗಣಿತ ಮತ್ತು ಕಂಪ್ಯೂಟಿಂಗ್‌ನಲ್ಲಿನ ಈ ಹೊಸ ಪದವಿಪೂರ್ವ ಕಾರ್ಯಕ್ರಮವು ಭವಿಷ್ಯದಲ್ಲಿ ವಿದ್ಯಾರ್ಥಿಗಳನ್ನು ಉತ್ತಮರನ್ನಾಗಿಸಿ ಈ ಕ್ಷೇತ್ರದಲ್ಲಿ ಮುಂಬರುವ ಸವಾಲುಗಳನ್ನು ಎದುರಿಸುವಷ್ಟು ಬಲಿಷ್ಠರನ್ನಾಗಿಸಲಿದೆ. ಅವರು ಭವಿಷ್ಯದಲ್ಲಿ ಸಂಶೋಧನೆ, ಅಭಿವೃದ್ಧಿಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ ಮತ್ತು ಗಣಿತ, ಕಂಪ್ಯೂಟರ್ ವಿಜ್ಞಾನದ ಆಳವಾದ ಬಳಕೆಯ ಅಗತ್ಯವಿರುವ ಮುಂದಿನ ಪೀಳಿಗೆಯ ತಂತ್ರಜ್ಞಾನಗಳು, ಮತ್ತು ಡೇಟಾ ಸೈನ್ಸ್ಗಳನ್ನು ತಿಳಿಯುವಲ್ಲಿ ಈ ಕೋರ್ಸ್ ಸಹಾಯ ಮಾಡಲಿದೆ.