CBSE Board Exam 2021: ಬೋರ್ಡ್ ಪರೀಕ್ಷೆ ಎದುರಿಸಲಿರುವ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಈ ಮಾಹಿತಿ ಗಮನಿಸಿ
CBSE Board Exam: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (CBSE) ವಲಸೆ ಪ್ರಮಾಣಪತ್ರ ಸಂಬಂಧಿಸಿ ನೋಟಿಫಿಕೇಷನ್ ಬಿಡುಗಡೆಗೊಳಿಸಿದೆ.
CBSE Board Exam 2021: 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿಬಿಎಸ್ಇ ಬಹುಮುಖ್ಯ ನೋಟಿಫಿಕೇಷನ್ ಒಂದನ್ನು ಬಿಡುಗಡೆಗೊಳಿಸಿದೆ. 10 ಅಥವಾ 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಬಳಿಕ ಮತ್ತೊಂದು ಬೋರ್ಡ್ಗೆ ವಿದ್ಯಾರ್ಥಿ ತೆರಳುವುದಿದ್ದರೆ ಅಂಥವರಿಗೆ ವಲಸೆ ಪ್ರಮಾಣ ಪತ್ರ (Migration Certificate) ಅಗತ್ಯವಾಗಿರುತ್ತದೆ. 12ನೇ ತರಗತಿ ವಿದ್ಯಾರ್ಥಿ ಉನ್ನತ ಮಟ್ಟದ ಅಧ್ಯಯನಕ್ಕಾಗಿ ತೆರಳುವಾಗಲೂ ಈ ವಲಸೆ ಪ್ರಮಾಣಪತ್ರ ಅವಶ್ಯವಾಗಿರುತ್ತದೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (CBSE) ವಲಸೆ ಪ್ರಮಾಣಪತ್ರ ಸಂಬಂಧಿಸಿ ನೋಟಿಫಿಕೇಷನ್ ಬಿಡುಗಡೆಗೊಳಿಸಿದೆ. 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು CBSE ಅಧಿಕೃತ ವೆಬ್ಸೈಟ್ cbse.gov.in ನಲ್ಲಿ ನೋಟಿಫಿಕೇಷನ್ ಪರಿಶೀಲಿಸಬಹುದಾಗಿದೆ.
ಸಿಬಿಎಸ್ಇ ಸಂಸ್ಥೆಗಳ ಪ್ರಾಂಶುಪಾಲರು ಹಾಗೂ ಮುಖ್ಯಸ್ಥರಿಗೆ ನೀಡಿರುವ ಪತ್ರದಲ್ಲಿ, ಯಾವ ವಿದ್ಯಾರ್ಥಿಗಳು ವಲಸೆ ಪ್ರಮಾಣಪತ್ರಕ್ಕೆ ಮನವಿ ಮಾಡುತ್ತಾರೋ ಅಂಥವರಿಗೆ ಮಾತ್ರ ವಲಸೆ ಪ್ರಮಾಣಪತ್ರದ (Migration Certificate) ಹಾರ್ಡ್ ಕಾಪಿಯನ್ನು ನೀಡಲಾಗುವುದು ಎಂದು CBSE ಹೇಳಿದೆ. ಇಲ್ಲವಾದರೆ ಪರೀಕ್ಷೆ ಫಲಿತಾಂಶ ಬರುವವರೆಗೆ ವಿದ್ಯಾರ್ಥಿಗಳು ಕಾಯಬೇಕಾಗಿದೆ. ಪರೀಕ್ಷಾ ಫಲಿತಾಂಶ ಬಿಡುಗಡೆಗೊಂಡ ಬಳಿಕ, ವಲಸೆ ಪ್ರಮಾಣಪತ್ರವು ಸಾಫ್ಟ್ ಕಾಪಿ ರೂಪದಲ್ಲಿ ಡಿಜಿ ಲಾಕರ್ನಲ್ಲಿ ಲಭ್ಯವಾಗಲಿದೆ.
ಉನ್ನತ ಹಂತದ ಕಲಿಕೆಗಾಗಿ ಇತರ ಶಿಕ್ಷಣ ಸಂಸ್ಥೆಯಲ್ಲಿ ಅಡ್ಮಿಷನ್ ಮಾಡಿಸಿಕೊಳ್ಳಲು ಬಯಸುವವರಿಗೆ ವಲಸೆ ಪ್ರಮಾಣಪತ್ರದ ಸಾಫ್ಟ್ ಕಾಪಿ ಸಹಕಾರಿಯಾಗಲಿದೆ. ಸುಲಭವಾಗಿ ವೆಬ್ ವೆರಿಫಿಕೇಷನ್ಗೆ ವಲಸೆ ಪ್ರಮಾಣಪತ್ರ ನೀಡಬಹುದಾಗಿದೆ.
ವಿದ್ಯಾರ್ಥಿಗಳು ಗಮನಿಸಿ -ವಲಸೆ ಪ್ರಮಾಣಪತ್ರದ ಹಾರ್ಡ್ ಕಾಪಿ 2024ರಿಂದ ಸಂಪೂರ್ಣವಾಗಿ ನಿಲ್ಲಲಿದೆ. ಆ ಬಳಿಕ ಸಾಫ್ಟ್ ಕಾಪಿ ಮಾತ್ರ ಪಡೆಯಬಹುದು. -CBSE 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಮೇ 4, 2021ರಿಂದ ಆರಂಭವಾಗಲಿದೆ. -CBSE 10 ಹಾಗೂ 12ನೇ ತರಗತಿ ಪರೀಕ್ಷೆಯ ದಿನನಿತ್ಯದ ಅಪ್ಡೇಟ್ಗಾಗಿ CBSE ಇಲಾಖೆಯ ಅಧಿಕೃತ ವೆಬ್ಸೈಟ್ cbse.gov.in ಗೆ ಭೇಟಿ ನೀಡುತ್ತಿರಿ.
ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಿಕೆ
Published On - 5:22 pm, Fri, 26 March 21