CBSE Board Exam 2021: 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಳ್ಳಬಹುದು. ಇಲ್ಲಿದೆ ವಿವರ

ಕೊವಿಡ್-19 ಕಾರಣದಿಂದ ವಿದ್ಯಾರ್ಥಿಗಳು ತಮ್ಮ ಕುಟುಂಬದ ಜೊತೆ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರವಾಗಿರುವ ಸಾಧ್ಯತೆ ಇದೆ. ಅಂಥಾ ವಿದ್ಯಾರ್ಥಿಗಳಿಗೆ ತಮ್ಮ ಥಿಯರಿ ಹಾಗೂ ಪ್ರಾಕ್ಟಿಕಲ್ ಪರೀಕ್ಷೆ ಎದುರಸಿಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

CBSE Board Exam 2021: 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಳ್ಳಬಹುದು. ಇಲ್ಲಿದೆ ವಿವರ
ಪರೀಕ್ಷೆ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: ganapathi bhat

Updated on:Apr 05, 2022 | 1:18 PM

CBSE Board Exam 2021: ದೇಶದೆಲ್ಲೆಡೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸದ್ಯ ಕಾಲೇಜು ಕ್ಯಾಂಪಸ್​ಗಳಲ್ಲೂ ಕೊರೊನಾ ಕಾಣಿಸಿಕೊಳ್ಳುತ್ತಿದೆ. ಈ ಕಾರಣದಿಂದ CBSEಯ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗೆ ತಮ್ಮ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಿದೆ. ಕೊವಿಡ್-19 ಕಾರಣದಿಂದ ವಿದ್ಯಾರ್ಥಿಗಳು ತಮ್ಮ ಕುಟುಂಬದ ಜೊತೆ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರವಾಗಿರುವ ಸಾಧ್ಯತೆ ಇದೆ. ಅಂಥಾ ವಿದ್ಯಾರ್ಥಿಗಳಿಗೆ ತಮ್ಮ ಥಿಯರಿ ಹಾಗೂ ಪ್ರಾಕ್ಟಿಕಲ್ ಪರೀಕ್ಷೆ ಎದುರಸಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೊರೊನಾ ಕಾರಣದಿಂದ 10, 12ನೇ ತರಗತಿಯ ವಿದ್ಯಾರ್ಥಿಗಳು, ತಮ್ಮ ಕುಟುಂಬದೊಂದಿಗೆ ದೇಶದ ಇತರ ಊರುಗಳಿಗೆ ಸ್ಥಳಾಂತರಗೊಂಡಿರಬಹುದು. ಈ ವಿಚಾರ ಬೋರ್ಡ್​ನ ಗಮನಕ್ಕೆ ಬಂದಿದೆ. ಅಂಥಾ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಅಥವಾ ಥಿಯರಿ ಪರೀಕ್ಷೆಯನ್ನು ಮೊದಲು ನೋಂದಾಯಿಸಿಕೊಂಡಿದ್ದ ಕೇಂದ್ರದಲ್ಲಿ ಬಂದು ಬರೆಯುವುದು ಕಷ್ಟವಾಗಬಹುದು. ಈ ವಿಚಾರ CBSE ಬೋರ್ಡ್​ನ ಗಮನಕ್ಕೆ ಬಂದಿದೆ. ಹಾಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು CBSE ತನ್ನ ನೋಟಿಫಿಕೇಷನ್​ನಲ್ಲಿ ತಿಳಿಸಿದೆ.

ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಳ್ಳಲು ಈ ವಿಚಾರಗಳನ್ನು ನೆನಪಿಡಿ

  • 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆ ಕೇಂದ್ರಗಳನ್ನು ಬದಲಾಯಿಸಿಕೊಳ್ಳಲು ಕೊನೆಯ ದಿನಾಂಕ ಮಾರ್ಚ್ 25
  • ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳು ಮನವಿಯನ್ನು ತಮ್ಮ ತಮ್ಮ ಶಾಲೆಯ ಮೂಲಕವೇ ಸಲ್ಲಿಸಬೇಕು
  • ಆಯಾ ಶಾಲೆಗಳು ತಮ್ಮ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಬಳಿಕ CBSE ಅಧಿಕೃತ ವೆಬ್​ಸೈಟ್​ನಲ್ಲಿ ಅವುಗಳನ್ನು ಅಪ್ಲೋಡ್ ಮಾಡುತ್ತವೆ. CBSE ವೆಬ್​ಸೈಟ್ ಲಿಂಕ್: cbse.gov.in
  • ಪರೀಕ್ಷಾ ಕೇಂದ್ರ ಬದಲಾದರೆ, ಥಿಯರಿ ಹಾಗೂ ಪ್ರಾಕ್ಟಿಕಲ್ ಪರೀಕ್ಷೆ ಎರಡಕ್ಕೂ ಅದೇ ಕೇಂದ್ರ ಅನ್ವಯವಾಗಲಿದೆ. ಥಿಯರಿ ಮತ್ತು ಪ್ರಾಕ್ಟಿಕಲ್ ಪರೀಕ್ಷೆಗೆ ಪ್ರತ್ಯೇಕ ಪರೀಕ್ಷಾ ಕೇಂದ್ರಗಳನ್ನು ನೀಡಲಾಗುವುದಿಲ್ಲ
  • ಶಾಲೆಗಳು ತುಂಬಾ ಜಾಗರೂಕವಾಗಿ ತಮ್ಮ ಮನವಿಯನ್ನು ಸಲ್ಲಿಸಬೇಕು. ಒಬ್ಬ ವಿದ್ಯಾರ್ಥಿಗೆ ಒಂದೇ ಬಾರಿ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗುವುದು

CBSE ಪರೀಕ್ಷೆಗೆ ಪರೀಕ್ಷಾ ಕೇಂದ್ರ ಬದಲಾಯಿಸಲು ಅಪ್ಲೈ ಮಾಡೋದು ಹೇಗೆ?

1. CBSE ಬೋರ್ಡ್ ಪರೀಕ್ಷೆಯ ರೋಲ್ ನಂಬರ್ ಪಡೆದುಕೊಂಡಿರುವವರು, ಪರೀಕ್ಷಾ ಕೇಂದ್ರಗಳನ್ನು ಬದಲಿಸಿಕೊಳ್ಳಲು ತಮ್ಮ ಮನವಿಯನ್ನು ಶಾಲೆಗೆ ನೀಡಬೇಕು

2. CBSE ವೆಬ್​ಸೈಟ್​ಗೆ ಲಾಗ್​ಇನ್ ಆಗಿ, ಅಲ್ಲಿಗೆ ವಿದ್ಯಾರ್ಥಿಗಳ ಮನವಿಯನ್ನು ಕಳುಹಿಸಲು ಆಯಾ ಶಾಲೆಗಳಿಗೆ ಅವಕಾಶವಿರುತ್ತದೆ

3. ಆಯಾ ಶಾಲೆಗಳು ವಿದ್ಯಾರ್ಥಿಯ ಹೆಸರು, ರೋಲ್ ನಂಬರ್, ಥಿಯರಿ ಮತ್ತು ಪ್ರಾಕ್ಟಿಕಲ್ ಪರೀಕ್ಷೆ ಎದುರಿಸಲು ಬದಲಾಯಿಸಬೇಕಾಗಿರುವ ಸ್ಥಳ ವಿವರವನ್ನು ದಾಖಲಿಸುತ್ತದೆ

4. ಶಾಲೆಯ ಮೂಲಕ ವಿದ್ಯಾರ್ಥಿಗಳು ಕಳುಹಿಸಿರುವ ಮನವಿಯನ್ನು ಪರಿಗಣಿಸಿ, CBSE ಪರೀಕ್ಷಾ ಕೇಂದ್ರಗಳನ್ನು ಅಪ್​ಡೇಟ್ ಮಾಡುತ್ತದೆ

ಇದನ್ನೂ ಓದಿ: ಈಗಾಗಲೇ ನಿಗದಿಯಾದಂತೆ ಪರೀಕ್ಷೆಗಳು ಮತ್ತು ಆಫ್‌ಲೈನ್ ಕ್ಲಾಸ್ ನಡೆಯುತ್ತದೆ; ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣ ಸ್ಪಷ್ಟನೆ

UPSC Calendar: ಐಎಎಸ್​, ಐಎಫ್​ಎಸ್​ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 24 ಕೊನೆಯ ದಿನ

Published On - 3:08 pm, Tue, 23 March 21