AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CBSE 10th Result 2025: CBSE 10ನೇ ತರಗತಿ ಫಲಿತಾಂಶ ಪ್ರಕಟ; ಟಾಪ್​​-3 ಪಟ್ಟಿಯಲ್ಲಿ ನಮ್ಮ ಬೆಂಗಳೂರು

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಶೇಕಡಾ 93.66ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶವನ್ನು CBSEಯ ಅಧಿಕೃತ ವೆಬ್‌ಸೈಟ್ ಮತ್ತು ಡಿಜಿಲಾಕರ್‌ನಲ್ಲಿ ಪರಿಶೀಲಿಸಬಹುದು. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಸುಮಾರು 2 ಲಕ್ಷ ವಿದ್ಯಾರ್ಥಿಗಳು ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಟಾಪ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು 3ನೇ ಸ್ಥಾನವನ್ನು ಪಡೆದುಕೊಂಡಿದೆ.

CBSE 10th Result 2025: CBSE 10ನೇ ತರಗತಿ ಫಲಿತಾಂಶ ಪ್ರಕಟ; ಟಾಪ್​​-3 ಪಟ್ಟಿಯಲ್ಲಿ ನಮ್ಮ ಬೆಂಗಳೂರು
Cbse 10th Result 2025
ಅಕ್ಷತಾ ವರ್ಕಾಡಿ
|

Updated on: May 13, 2025 | 2:33 PM

Share

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷಾ ಫಲಿತಾಂಶ ಬಿಡುಗಡೆ ಮಾಡಿದೆ. ಈ ಬಾರಿ ಶೇ. 93.66 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್‌ನ ಹೊರತಾಗಿ, ವಿದ್ಯಾರ್ಥಿಗಳು ಡಿಜಿಲಾಕರ್‌ನಲ್ಲಿಯೂ ಫಲಿತಾಂಶವನ್ನು ಪರಿಶೀಲಿಸಬಹುದು. ಈ ಬಾರಿ ಸಿಬಿಎಸ್‌ಇ ಮಂಡಳಿಯ 10ನೇ ತರಗತಿ ಪರೀಕ್ಷೆಗೆ ಸುಮಾರು 23 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 22 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಬಾಲಕಿಯರು ಮೇಲು ಗೈ ಸಾಧಿಸಿದ್ದಾರೆ. ಈ ಬಾರಿ ಶೇ. 95 ರಷ್ಟು ಬಾಲಕಿಯರು ಹಾಗೂ ಶೇ. 92.63 ರಷ್ಟು ಬಾಲಕರು ಪಾಸ್​​ ಆಗಿದ್ದಾರೆ.

2 ಲಕ್ಷ ವಿದ್ಯಾರ್ಥಿಗಳಿಗೆ ಶೇ. 90 ಕ್ಕಿಂತ ಅಧಿಕ ಅಂಕ:

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲಿ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಶೇ. 90 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ, ಅದರಲ್ಲಿ 45 ಸಾವಿರ ವಿದ್ಯಾರ್ಥಿಗಳು ಶೇ. 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಆದರೆ ಈ ಬಾರಿ ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ನಡೆಯಲಿರುವ ಪೂರಕ ಪರೀಕ್ಷೆ ಅಂದರೆ ಕಂಪಾರ್ಟ್‌ಮೆಂಟ್ ಪರೀಕ್ಷೆಯನ್ನು 1 ಲಕ್ಷ 41 ಸಾವಿರ ವಿದ್ಯಾರ್ಥಿಗಳು ಬರೆಯಬೇಕಾಗುತ್ತದೆ.

ಟಾಪ್-3 ಪಟ್ಟಿಯಲ್ಲಿ ನಮ್ಮ ಬೆಂಗಳೂರು:

ಈ ಬಾರಿಯೂ ಸಹ, ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶದಲ್ಲಿ ತಿರುವನಂತಪುರಂ, ವಿಜಯವಾಡ, ಬೆಂಗಳೂರು ನಗರಗಳು ಟಾಪ್ -3 ಪಟ್ಟಿಯಲ್ಲಿದೆ. ದೆಹಲಿ 7 ನೇ ಸ್ಥಾನದಲ್ಲಿದೆ. ಗುವಾಹಟಿ ಕೊನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ರಿಸಲ್ಟ್ ಪರಿಶೀಲಿಸುವ ಲಿಂಕ್​​ ಇಲ್ಲಿದೆ

ಫಲಿತಾಂಶ ಬಿಡುಗಡೆಯಾದಾಗ ಪರಿಶೀಲಿಸುವುದು ಹೇಗೆ?

  • ಮೊದಲನೆಯದಾಗಿ ನೀವು CBSE ಯ ಅಧಿಕೃತ ವೆಬ್‌ಸೈಟ್  cbse.gov.in ಗೆ ಭೇಟಿ ನೀಡಬೇಕು.
  • ನಂತರ ಫಲಿತಾಂಶ ವಿಭಾಗಕ್ಕೆ ಹೋಗಿ ಮತ್ತು CBSE 10ನೇ ತರಗತಿಯ ಫಲಿತಾಂಶ 2025 ಅನ್ನು ಪರಿಶೀಲಿಸಲು ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಅದರ ನಂತರ ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ.
  • ಈಗ ನಿಮ್ಮ CBSE 10ನೇ ತರಗತಿಯ ಫಲಿತಾಂಶ/ಅಂಕಪಟ್ಟಿಯನ್ನು ಸ್ಕ್ರೀನ್​ ಮೇಲೆ ನೋಡಿ.
  • ಭವಿಷ್ಯದ ಬಳಕೆಗಾಗಿ ಅದರ ಪ್ರಿಂಟ್​ ಕಾಪಿಯನ್ನು ತೆಗೆದಿಟ್ಟುಕೊಳ್ಳಿ.

ಇದಲ್ಲದೆ DigiLocker ಮತ್ತು UMANG ಅಪ್ಲಿಕೇಶನ್‌ಗಳ ಮೂಲಕ ಫಲಿತಾಂಶ ಪರಿಶೀಲಿಸಬಹುದು.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿ, ಯುವಕ ಸಾವು: ವಿಡಿಯೋ ವೈರಲ್
ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿ, ಯುವಕ ಸಾವು: ವಿಡಿಯೋ ವೈರಲ್
ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್
ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್