ಸಿಬಿಎಸ್ಇ ಕ್ಲಾಸ್ 12 ಫಲಿತಾಂಶ: ಬೆಂಗಳೂರಲ್ಲಿ ಶೇ. 96.95 ತೇರ್ಗಡೆ; ಕಳೆದ ವರ್ಷಕ್ಕಿಂತ ಕಡಿಮೆ ಪಾಸ್
CBSE Class 12 Exam Results 2024, Region-wise list: ಕೇಂದ್ರದ ಸಿಬಿಎಸ್ಇ ಪರೀಕ್ಷಾ ಮಂಡಳಿ ನಡೆಸುವ 12ನೇ ತರಗತಿ ಪರೀಕ್ಷೆಗಳ ಫಲಿತಾಂಶ ಇಂದು ಮೇ 13 ಪ್ರಕಟವಾಗಿದೆ. ಶೇ. 87.98ರಷ್ಟು ಮಕ್ಕಳು ಪಾಸ್ ಆಗಿದ್ದಾರೆ. ಪರೀಕ್ಷೆ ಬರೆದಿದ್ದ 16,21,224 ವಿದ್ಯಾರ್ಥಿಗಳ ಪೈಕಿ 14,26,420 ಮಕ್ಕಳು ಪಾಸ್ ಆಗಿದ್ದಾರೆ. ಬೆಂಗಳೂರಿನಲ್ಲಿ ಪಾಸಿಂಗ್ ಪರ್ಸಂಟೇಜ್ ಶೇ. 96.95ರಷ್ಟಿದೆ. ಕಳೆದ ಬಾರಿ 98.64ರಷ್ಟು ಫಲಿತಾಂಶ ಕಂಡಿದ್ದ ಬೆಂಗಳೂರು 2ನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿದೆ.
ಬೆಂಗಳೂರು, ಮೇ 13: ಸಿಬಿಎಸ್ಇ ಪಠ್ಯಕ್ರಮದ 12ನೇ ತರಗತಿ ಪರೀಕ್ಷಾ ಫಲಿತಾಂಶ (CBSE Class 12 Exam Results 2024) ಪ್ರಕಟವಾಗಿದ್ದು ಶೇ. 87.98ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ. 87.33ರಷ್ಟು ಫಲಿತಾಂಶ ಬಂದಿತ್ತು. ಕಳೆದ ವರ್ಷಕ್ಕಿಂತಲೂ (2023) ಈ ಬಾರಿ ಪಾಸಿಂಗ್ ಪರ್ಸಂಟೇಜ್ ಹೆಚ್ಚು ಬಂದಿದೆ. ಆದರೆ, ಬೆಂಗಳೂರಿನ ವಿದ್ಯಾರ್ಥಿಗಳು ಕಳೆದ ವರ್ಷಕ್ಕಿಂತಲೂ ಕಡಿಮೆ ತೇರ್ಗಡೆ ಆಗಿದ್ದಾರೆ. ಶೇ. 96.95ರಷ್ಟು ಬೆಂಗಳೂರಿಗರು ಪಾಸ್ ಆಗಿದ್ದಾರೆ. ಪ್ರಾದೇಶಿಕವಾರು ಪಟ್ಟಿ ಮಾಡಲಾಗಿರುವ 17 ನಗರಗಳಲ್ಲಿ ಬೆಂಗಳೂರು ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಕಳೆದ ವರ್ಷ ಬೆಂಗಳೂರು ಸಿಬಿಎಸ್ಇ ಕ್ಲಾಸ್ 12 ಪರೀಕ್ಷೆಯಲ್ಲಿ ಶೇ. 98.64ರಷ್ಟು ರಿಸಲ್ಟ್ ಪಡೆದಿತ್ತು.
ಕೇರಳದ ತಿರುವನಂತರಪುರಂ ನಗರ ಶೇ 99.91ರಷ್ಟು ಫಲಿತಾಂಶ ಪಡೆದು ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದೆ. ಕಳೆದ ಹಲವು ವರ್ಷಗಳಿಂದಲೂ ತಿರುನಂತಪುರಂ ಅಗ್ರಸ್ಥಾನ ಪಡೆಯುತ್ತಲೇ ಇದೆ. ಕಳೆದ ವರ್ಷ ಅದರ ಪಾಸಿಂಗ್ ಪರ್ಸಂಟೇಜ್ ಶೇ. 99.91ರಷ್ಟೇ ಇತ್ತು. ಈ ವರ್ಷವೂ ಅಷ್ಟೇ ಇದೆ.
ಇದನ್ನೂ ಓದಿ: SSLC Result: 50ರ ಗಡಿಯಲ್ಲಿದ್ದ ಫಲಿತಾಂಶ ಹೆಚ್ಚಿಸಲು ಕೃಪಾಂಕ ಹಾದಿ, ಆದರೂ 10% ರಿಸಲ್ಟ್ ಡೌನ್
ಆಂಧ್ರದ ವಿಜಯವಾಡ ನಗರ ಶೇ. 99.04ರಷ್ಟು ಫಲಿತಾಂಶ ಪಡೆದಿದೆ. ಚೆನ್ನೈ ಮೂರನೇ ಸ್ಥಾನದಲ್ಲಿ ಮುಂದುವರಿದಿದೆಯಾದರೂ ಕಳೆದ ಬಾರಿಗಿಂತ ಹೆಚ್ಚು ತೇರ್ಗಡೆ ಪಡೆದಿದೆ. ಉತ್ತರಪ್ರದೇಶದ ಪ್ರಯಾಗರಾಜ್ ನಗರ ಕೊನೆಯ ಸ್ಥಾನದಲ್ಲಿ ಮುಂದುವರಿದಿದೆ.
ಸಿಬಿಎಸ್ಇ 12ನೇ ತರಗತಿ ನಗರವಾರು ಫಲಿತಾಂಶ 2024
- ತಿರುವನಂತಪುರಂ: ಶೇ. 99.91
- ವಿಜಯವಾಡ: ಶೇ. 99.04
- ಚೆನ್ನೈ: ಶೇ. 98.47
- ಬೆಂಗಳೂರು: ಶೇ. 96.95
- ದೆಹಲಿ ಪಶ್ಚಿಮ: ಶೇ. 95.64
- ದೆಹಲಿ ಪೂರ್ವ: ಶೇ. 94.51
- ಚಂದೀಗಡ: ಶೇ. 91.09
- ಪಂಚಕುಲ: ಶೇ. 90.26
- ಪುಣೆ: ಶೇ. 89.78
- ಅಜ್ಮೇರ್: ಶೇ. 89.53
- ದೆಹ್ರಾಡೂನ್: ಶೇ. 83.82
- ಪಟ್ನಾ: ಶೇ. 83.59
- ಭುವನೇಶ್ವರ್: ಶೇ. 83.34
- ಭೋಪಾಲ್: ಶೇ. 82.46
- ಗುವಾಹಟಿ: ಶೇ. 82.05
- ನೋಯ್ಡಾ: ಶೇ. 80.27
- ಪ್ರಯಾಗರಾಜ್: ಶೇ. 78.25
ಇದನ್ನೂ ಓದಿ: ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸದ ಶಿಕ್ಷಣ ಇಲಾಖೆ! ವಿದ್ಯಾರ್ಥಿ, ಪೋಷಕರ ಜೊತೆ ಚೆಲ್ಲಾಟ
ಈ ವರ್ಷ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯನ್ನು 16,21,224 ವಿದ್ಯಾರ್ಥಿಗಳು ಬರೆದಿದ್ದರು. ಇವರಲ್ಲಿ 14,26,420 ಮಕ್ಕಳು ಪಾಸ್ ಆಗಿದ್ದಾರೆ. ಹತ್ತಿರ ಹತ್ತಿರ ಎರಡು ಲಕ್ಷದಷ್ಟು ವಿದ್ಯಾರ್ಥಿಗಳು ನಪಾಸಾಗಿದ್ದಾರೆ.
ಈ ವರ್ಷದ ಸಿಬಿಎಸ್ಇ ಕ್ಲಾಸ್ 10 ಪರೀಕ್ಷೆಯಲ್ಲಿ ಪಾಸಿಂಗ್ ಪರ್ಸಂಟೇಜ್ ಶೇ. 93.12ರಷ್ಟು ಇತ್ತು. ಪರೀಕ್ಷೆ ಬರೆದಿದ್ದ 21,65,805 ಮಕ್ಕಳಲ್ಲಿ 20,16,779 ಮಂದಿ ಪಾಸ್ ಆಗಿದ್ದಾರೆ.
ಫಲಿತಾಂಶ ವೀಕ್ಷಿಸಲು ಇಲ್ಲಿವೆ ಲಿಂಕ್ಸ್
ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಆನ್ಲೈನ್ನಲ್ಲಿ ನೋಡಬಹುದು. ಎರಡು ಅಧಿಕೃತ ವೆಬ್ಸೈಟ್ಗಳ ಲಿಂಕ್ ಇಲ್ಲಿವೆ:
cnr.nic.in/ResultDir/class_xii_a_2024/ClassTwelfth_c_2024.htm
testservices.nic.in/cbseresults/class_xii_a_2024/ClassTwelfth_c_2024.htm
ಇನ್ನಷ್ಟು ಶಿಕ್ಷಣ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:23 pm, Mon, 13 May 24