ಇಂದಿನಿಂದ ಪದವಿ ಪ್ರವೇಶ ಪ್ರಕ್ರಿಯೆ ಆರಂಭ; ಆನ್​ಲೈನ್​ನಲ್ಲಿ ಮಾತ್ರ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ

| Updated By: sandhya thejappa

Updated on: Jun 20, 2022 | 10:03 AM

ಕಾಲೇಜುಗಳಲ್ಲಿ ಲಭ್ಯವಿರುವ ಕೋರ್ಸ್, ಸಂಯೋಜನೆ, ಶುಲ್ಕದ ವಿವಿರ, ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳ ಮಾಹಿತಿಯನ್ನ ಯುಯುಸಿಎಂಎಸ್ ವೆಬ್​ಸೈಟ್​ನಲ್ಲಿ ಮಾಹಿತಿ ಹಾಕಬೇಕು.

ಇಂದಿನಿಂದ ಪದವಿ ಪ್ರವೇಶ ಪ್ರಕ್ರಿಯೆ ಆರಂಭ; ಆನ್​ಲೈನ್​ನಲ್ಲಿ ಮಾತ್ರ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: 2022-23ನೇ ಸಾಲಿನ ಪದವಿ ಪ್ರವೇಶ (Degree Admission) ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಆನ್​ಲೈನ್​ನಲ್ಲಿ (Online) ಮಾತ್ರ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ. ಯುಯುಸಿಎಂಎಸ್ (UUCMS) ವೆಬ್​ಸೈಟ್​ ಮೂಲಕ ದಾಖಲಿಸಿಕೊಳ್ಳಲು ಸೂಚನೆ ನೀಡಿರುವ ಕಾಲೇಜು ಶಿಕ್ಷಣ ಇಲಾಖೆ ಈ ಕುರಿತು ಸುತ್ತೋಲೆ ಹೊರಡಿಸಿದೆ. ಪ್ರಿನ್ಸಿಪಾಲರು ಕಾಲೇಜು ಹಂತದಲ್ಲಿ ಪ್ರವೇಶಾತಿ ಸಮಿತಿ ರಚಿಸಿ ಅಗತ್ಯವಿರುವ ಸಹಾಯವಾಣಿ ಸ್ಥಾಪಿಸಿ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯಿಂದ ಪ್ರವೇಶಾತಿ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಿ, ಅನುದಾನಿತ ಪದವಿ ಕಾಲೇಜುಗಳಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕಾಲೇಜುಗಳಲ್ಲಿ ಲಭ್ಯವಿರುವ ಕೋರ್ಸ್, ಸಂಯೋಜನೆ, ಶುಲ್ಕದ ವಿವಿರ, ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳ ಮಾಹಿತಿಯನ್ನ ಯುಯುಸಿಎಂಎಸ್ ವೆಬ್​ಸೈಟ್​ನಲ್ಲಿ ಮಾಹಿತಿ ಹಾಕಬೇಕು. ಕಾಲೇಜಿನ ವೆಬ್​ಸೈಟ್​ನಲ್ಲಿ ಹಾಗೂ ನೋಟಿಸ್ ಬೋರ್ಡ್​ನಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯಲು ಕ್ರಮ ವಹಿಸಬೇಂದು ಸರ್ಕಾರಿ, ಅನುದಾನಿತ ಪದವಿ ಕಾಲೇಜುಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ: Rahul Gandhi: ನ್ಯಾಷನಲ್ ಹೆರಾಲ್ಡ್ ಪ್ರಕರಣ; ಇಂದು ಮತ್ತೆ ಇಡಿ ವಿಚಾರಣೆಗೆ ರಾಹುಲ್ ಗಾಂಧಿ ಹಾಜರು

ಇದನ್ನೂ ಓದಿ
Viral Video: ಮ್ಯಾನ್​ಹೋಲ್​ಗೆ ಬಿದ್ದ ದಂಪತಿ, ಇದು ‘ಪ್ರಧಾನ ಮಂತ್ರಿ ಈಜುಕೊಳ ಯೋಜನೆ’ ಎಂದ ನೆಟ್ಟಿಗರು!
Pushpa 2 Story: ರಾಕಿ ಭಾಯ್​ ರೀತಿ ವಿದೇಶಕ್ಕೆ ಹೋಗ್ತಾನಾ ಪುಷ್ಪರಾಜ್​? ‘ಕೆಜಿಎಫ್​ 2’ ಚಿತ್ರಕ್ಕೆ ‘ಪುಷ್ಪ 2’ ಕಥೆ ಹೋಲಿಕೆ
Rahul Gandhi: ನ್ಯಾಷನಲ್ ಹೆರಾಲ್ಡ್ ಪ್ರಕರಣ; ಇಂದು ಮತ್ತೆ ಇಡಿ ವಿಚಾರಣೆಗೆ ರಾಹುಲ್ ಗಾಂಧಿ ಹಾಜರು
10ರೂಪಾಯಿ ನಾಣ್ಯಗಳ ಮೂಲಕ 6ಲಕ್ಷ ಮೌಲ್ಯದ ಕಾರು ಖರೀದಿಸಿದ ವ್ಯಕ್ತಿ, ಹೇಗೆ ಗೊತ್ತಾ?

ಪಿಯು ಫಲಿತಾಂಶ ಪ್ರಕಟ:
ಕರ್ನಾಟಕ ಪಿಯು ಬೋರ್ಡ್‌ 2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು, ವಿಜ್ಞಾನ ವಿಭಾಗದಲ್ಲಿ ನಾಲ್ವರು, ವಾಣಿಜ್ಯ ವಿಭಾಗದಲ್ಲಿ ನಾಲ್ವರು ಹಾಗೂ ಕಲಾ ವಿಭಾಗದಲ್ಲಿ ಇಬ್ಬರು ಅತ್ಯಧಿಕ ಅಂಕಗಳನ್ನು ಪಡೆದು ಟಾಪರ್ಸ್​ಗಳಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ 91,106 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್​ನಲ್ಲಿ ಪಾಸ್ ಆಗಿದ್ದಾರೆ.​​ ಮಲ್ಲೇಶ್ವರದ ಪಿಯೂ ಬೋರ್ಡ್  ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಬಿ.ಸಿ.ನಾಗೇಶ್ ಅವರು ಫಲಿತಾಂಶ ಪ್ರಕಟಿಸಿದ್ದಾರೆ.

ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 6,84,255 ವಿದ್ಯಾರ್ಥಿಗಳ ಪೈಕಿ 6,83,563 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ.61.88ರಷ್ಟು ಅಂದರೆ 4,02,697 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಹೆಚ್ಚು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಪ್ರತಿಬಾರಿಯಂತೆ ಈ  ಬಾರಿಯ ಪರೀಕ್ಷೆಯಲ್ಲೂ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 3,37,006 ಬಾಲಕಿಯರ ಪೈಕಿ 2,31,586 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಶೇಕಡಾವಾರು ನೋಡುವುದಾದರೆ 68.72ರಷ್ಟು ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ. ಪರೀಕ್ಷೆ ಬರೆದ 3,46,557 ಬಾಲಕರ ಪೈಕಿ 1,91,380 ಮಕ್ಕಳು ಪಾಸ್ ಆಗಿದ್ದು, ಶೇಕಡಾವಾರು ನೋಡುವುದಾದರೆ 55.22% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:59 am, Mon, 20 June 22