ಚಂಡೀಗಢ ವಿಶ್ವವಿದ್ಯಾಲಯದ ಮೂಲಕ ಉನ್ನತ ದರ್ಜೆಯ ವಿಶ್ವವಿದ್ಯಾಲಯಗಳೊಂದಿಗೆ ಅಂತರರಾಷ್ಟ್ರೀಯ ಪದವಿಯನ್ನು ಪಡೆಯುವುದು ಹೇಗೆ ? ಇಲ್ಲಿದೆ ಮಾಹಿತಿ

ತನ್ನ ಜಾಗತಿಕ ಒಪ್ಪಂದಗಳ ಮೂಲಕ ಚಂಡೀಗಢ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳನ್ನು ವಿಶ್ವದ ಹಲವು ವಿಶ್ವವಿದ್ಯಾಲಯಗಳಲ್ಲಿ ನಿಯೋಜಿಸುತ್ತಿದ್ದು, ಅವರಿಗೆ ಸ್ಪರ್ಧಾತ್ಮಕ ಲಾಭವನ್ನು ಒದಗಿಸುತ್ತಿದೆ. ವಿಶ್ವವಿಂದು ಜಾಗತೀಕರಣಕ್ಕೆ ಕ್ರೋಡೀಕೃತಗೊಳ್ಳುತ್ತಿರುವಾಗ ಭಾಷೆ, ಗಡಿ, ಸಂಸ್ಕೃತಿಗಳಂತಹ ಕಟ್ಟುಪಾಡುಗಳು ತಿಳಿಗೊಳ್ಳುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ವ್ಯಾಪಕ ಆಯ್ಕೆಗಳು ತೆರದುಕೊಳ್ಳುತ್ತಿವೆ.

ಚಂಡೀಗಢ ವಿಶ್ವವಿದ್ಯಾಲಯದ ಮೂಲಕ ಉನ್ನತ ದರ್ಜೆಯ ವಿಶ್ವವಿದ್ಯಾಲಯಗಳೊಂದಿಗೆ ಅಂತರರಾಷ್ಟ್ರೀಯ ಪದವಿಯನ್ನು ಪಡೆಯುವುದು ಹೇಗೆ ? ಇಲ್ಲಿದೆ ಮಾಹಿತಿ
University of Chandigarh
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 20, 2022 | 5:03 PM

ಚಂಡೀಗಢ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಹಯೋಗಗಳು ಉನ್ನತ ದರ್ಜೆಯ ವಿಶ್ವವಿದ್ಯಾಲಯಗಳಲ್ಲಿ ಅಂತಾರಾಷ್ಟ್ರೀಯ ಡಿಗ್ರಿ ಪಡೆಯಲು ಹೇಗೆ ನಿಮಗೆ  ನೆರವಾಗುತ್ತದೆ? ವಿಶ್ವವಿಂದು ಜಾಗತಿಕ ಗ್ರಾಮವಾಗಿ ರೂಪುಗೊಳ್ಳುತ್ತಿರುವಾಗ ಯಾವುದೇ ಶೈಕ್ಷಣಿಕ ಸಂಸ್ಥೆಗೆ ಅಂತಾರಾಷ್ಟ್ರೀಯ ಸಹಯೋಗಗಳು ಹೆಚ್ಚು ಪ್ರಸ್ತುತವಾಗಿವೆ. ಇದನ್ನು ಮನಗಂಡು ಮತ್ತು ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿಯಲ್ಲಿ ಇದು ಹೇಗೆ ಸಮಗ್ರವಾಗಿ ಸಿದ್ಧಗೊಳ್ಳಲು ನೆರವಾಗಲಿದೆ ಎಂದು ಅರ್ಥೈಸಿಕೊಂಡು ಚಂಡೀಗಢ ವಿಶ್ವವಿದ್ಯಾಲಯ 383ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಹಯೋಗಗಳನ್ನು ಮಾಡಿಕೊಂಡಿದೆ. ಚಂಡೀಗಢ ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡಲು ತೆರಳಿದ್ದು ಮತ್ತು 221ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಲ್ಟ್ ಡಿಸ್ನಿಯಲ್ಲಿ ಇಂಟರ್ನ್ ಶಿಪ್ ಗೆ ಸಹಯೋಗ ಕಾರ್ಯಕ್ರಮಗಳ ಮೂಲಕ ಆಯ್ಕೆಯಾಗಿದ್ದಾರೆ. ಇದು ವಿದ್ಯಾರ್ಥಿಗಳು ಜಾಗತಿಕ ವೇದಿಕೆಗೆ ತೆರೆದುಕೊಳ್ಳುವ ಅವಕಾಶ ಸೃಷ್ಟಿಸಲಿದ್ದು, ಹೊಸಯುಗದ ಆಯ್ಕೆಗಳು ಅವರಿಗೆ ಸಿಗಲಿದೆ. ಇದಲ್ಲದೆ, ಈ ಸಹಯೋಗಗಳಿಂದ ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವೈವಿಧ್ಯಮಯ ಆಯ್ಕೆಗಳನ್ನು ಪಡೆಯಲಿದ್ದಾರೆ

ಅಂತಾರಾಷ್ಟ್ರೀಯ ಬೇಸಿಗೆ ಮತ್ತು ಚಳಿಗಾಲದ ಕಾರ್ಯಕ್ರಮಗಳು

ವಿದೇಶದಲ್ಲಿ ಸೆಮಿಸ್ಟರ್ / ವಿನಿಮಯ ಕಾರ್ಯಕ್ರಮಗಳು

ಇದನ್ನೂ ಓದಿ
Image
BASE ಪ್ರಧಾನಿ ಮೋದಿಯಿಂದ ಉದ್ಘಾಟನೆ: ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಬೆಂಗಳೂರು ಇಲ್ಲಿ ಶೈಕ್ಷಣಿಕ ಪ್ರವೇಶಕ್ಕಾಗಿ ಅರ್ಜಿಗಳ ಆಹ್ವಾನ
Image
ಇಂದಿನಿಂದ ಪದವಿ ಪ್ರವೇಶ ಪ್ರಕ್ರಿಯೆ ಆರಂಭ; ಆನ್​ಲೈನ್​ನಲ್ಲಿ ಮಾತ್ರ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ
Image
Career Guidance: ದ್ವಿತೀಯ ಪಿಯುಸಿ ನಂತರ BSC ಫಾರ್ಮಸಿ, BSC ನರ್ಸಿಂಗ್ ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ
Image
Career Guidance: ದ್ವಿತೀಯ ಪಿಯುಸಿ ನಂತರ ಬಿಎಸ್​ಸಿ ಫಾರ್ಮ್​ ಸೈನ್ಸ್ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ

ಉನ್ನತ ಶಿಕ್ಷಣ ಕಾರ್ಯಕ್ರಮಗಳು

ಗ್ಲೋಬಲ್ ಇಮ್ಮರ್ಶನ್ ಕಾರ್ಯಕ್ರಮಗಳು

ಅಂತಾರಾಷ್ಟ್ರೀಯ ಇಂಟರ್ನ್ ಶಿಪ್ ಗಳು

ಈ ರೀತಿಯ ವಿವಿಧ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಸಹಯೋಗದ ನೆರವಿನೊಂದಿಗೆ ಅವರ ಕೌಶಲ್ಯವನ್ನು ಉನ್ನತಿಗೊಳಿಸುವ ಜೊತೆಗೆ ಹೆಚ್ಚು ವಿಸ್ತಾರ ಮಾಡಲು ಸಾಧ್ಯವಿರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಸ್ವಯಂ ಅಭಿವೃದ್ಧಿ ಹೊಂದಲು ಹೆಚ್ಚು ಅವಕಾಶ ಸಿಗುವ ಜೊತೆಗೆ ಜಾಗತಿಕ ವ್ಯಾಪಾರ ಕ್ಷೇತ್ರದ ಆಗು-ಹೋಗುಗಳನ್ನು ಅರಿಯಲು ಸಾಧ್ಯವಾಗುತ್ತದೆ. ತನ್ಮೂಲಕ ತಮ್ಮ ವೃತ್ತಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ. ಎಲ್ಲಕ್ಕೂ ಮುಖ್ಯವಾಗಿ ಅಂತಾರಾಷ್ಟ್ರೀಯ ಭೇಟಿಗಳಿಂದ ಕಲಿಯುವುದು ಮತ್ತು ಅಂತಾರಾಷ್ಟ್ರೀಯ ಕಮ್ಮಟಗಳು/ ವಿಚಾರಗೋಷ್ಠಿ/ ಕ್ಲಾಸ್ ರೂಂ ಶಿಕ್ಷಣ ವಿದ್ಯಾರ್ಥಿಗಳಿಗೆ ಜಾಗತಿಕ ನೋಟದ ಅನುಭವ ನೀಡುವ ಜೊತೆಗೆ ಅದನ್ನು ಭಿನ್ನವಾದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಅರಿಯಲು ನೆರವಾಗುತ್ತದೆ.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ದ್ವಿತೀಯ ಪಿಯುಸಿ ನಂತರ ಬಿಎಸ್​ಸಿ ಫಾರ್ಮ್​ ಸೈನ್ಸ್ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ

ಇದು ಅವರಲ್ಲಿ ಗುಣಮಟ್ಟದ ಸಹಾನುಭೂತಿ ಅಭಿವೃದ್ಧಿ ಹೊಂದಲು ಗಣನೀಯ ಪಾತ್ರ ವಹಿಸುತ್ತದೆ. ಇದಕ್ಕೂ ಮಿಗಿಲಾಗಿ ಅಂತರ್ ಸಾಂಸ್ಕೃತಿಕ ಪರಿಚಯ ವಿದ್ಯಾರ್ಥಿಗಳ ಬತ್ತಳಿಕೆಯಲ್ಲಿ ಒಂದು ಅಸ್ತ್ರವಾಗಿ ಸೇರ್ಪಡೆಯಾಗಲಿದ್ದು, ಅವರು ಶಿಕ್ಷಣದ ಮಾರ್ಗದಿಂದ ಜಾಗತಿಕ ವೇದಿಕೆಯನ್ನು ಪರಿಚಯಿಸಿಕೊಳ್ಳುತ್ತಾರೆ. ಚಂಡೀಗಢ ವಿಶ್ವವಿದ್ಯಾಲಯದ ಹಲವಾರು ವಿದ್ಯಾರ್ಥಿಗಳು ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಈ ರೀತಿಯ ಸಹಯೋಗಗಳು ವಿದ್ಯಾರ್ಥಿಗಳಿಗೆ ತಮ್ಮ ವ್ಯಾಪಾರೋದ್ಯಮವನ್ನು ಎಲ್ಲಿಯಾದರೂ ಮತ್ತು ಯಾರೊಂದಿಗಾದರೂ ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗಲಿದೆ. ಜಾಗತಿಕ ಅನುಭವ ನಮ್ಮ ವಿದ್ಯಾರ್ಥಿಗಳನ್ನು ಉದ್ದೀಪನಗೊಳಿಸಿದ್ದು, ಅವರಲ್ಲಿ ಅರ್ಥೈಸಿಕೊಳ್ಳುವ ಉತ್ಸಾಹಕ್ಕೆ ನಿಶ್ಚಯವಾಗಿ ನೆರವಾಗಿದೆ. ಇದಲ್ಲದೆ, ಅವರಲ್ಲಿ ನಾಯಕತ್ವ ಹಾಗೂ ತಂಡವಾಗಿ ಕಾರ್ಯನಿರ್ವಹಿಸುವ ಕ್ಷಮತೆ ಪರಿಣಾಮಕಾರಿಯಾಗಿ ರೂಪುಗೊಳ್ಳಲಿದೆ.

ತನ್ನ ಜಾಗತಿಕ ಒಪ್ಪಂದಗಳ ಮೂಲಕ ಚಂಡೀಗಢ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳನ್ನು ವಿಶ್ವದ ಹಲವು ವಿಶ್ವವಿದ್ಯಾಲಯಗಳಲ್ಲಿ ನಿಯೋಜಿಸುತ್ತಿದ್ದು, ಅವರಿಗೆ ಸ್ಪರ್ಧಾತ್ಮಕ ಲಾಭವನ್ನು ಒದಗಿಸುತ್ತಿದೆ. ವಿಶ್ವವಿಂದು ಜಾಗತೀಕರಣಕ್ಕೆ ಕ್ರೋಡೀಕೃತಗೊಳ್ಳುತ್ತಿರುವಾಗ ಭಾಷೆ, ಗಡಿ, ಸಂಸ್ಕೃತಿಗಳಂತಹ ಕಟ್ಟುಪಾಡುಗಳು ತಿಳಿಗೊಳ್ಳುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ವ್ಯಾಪಕ ಆಯ್ಕೆಗಳು ತೆರದುಕೊಳ್ಳುತ್ತಿವೆ. ಇದರ ಫಲಶೃತಿಯಾಗಿ ವಿದ್ಯಾರ್ಥಿಗಳಿಂದು ಹಿಂದೆಂದಿಗಿಂತಲೂ ಉತ್ತಮವಾಗಿ ಸಿದ್ಧತೆಗೊಳ್ಳುವ ಜೊತೆಗೆ ತಮ್ಮನ್ನು ತಾವು ಸಜ್ಜುಗೊಳಿಸಬೇಕಿದೆ. ಇದರಿಂದ ತಮ್ಮೆಡೆಗೆ ಹರಿದು ಬರುವ ಎಲ್ಲ ಜಾಗತಿಕ ಅವಕಾಶಗಳ ಲಾಭವನ್ನು ಪಡೆಯಬೇಕಿದೆ.ಇದಕ್ಕೆ ಜಾಗತಿಕ ಮಾರ್ಗದ ಮೂಲಕ ಶಿಕ್ಷಣ ಮತ್ತು ಶಿಕ್ಷಣಕ್ಕೆ ಸೂಕ್ತ ಸ್ಥಳ ಎರಡು ಪ್ರಮುಖವಾದ ಅಸ್ತ್ರಗಳಾಗಿವೆ. ಇದು ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಯಶಸ್ವಿ ಪಥವಾಗಲಿದೆ.

ಚಂಡೀಗಢ ವಿಶ್ವವಿದ್ಯಾಲಯ ಸೂಕ್ತ ರೀತಿಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ರೀತಿಯ ಸೂಕ್ತ ಒಪ್ಪಂದಗಳ ಪರಿಣಾಮವಾಗಿ ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬಹುತೇಕ ಲಾಭವನ್ನು ಪಡೆಯುತ್ತಿದ್ದಾರೆ. ಇದು ಯುಎಸ್ ಎ ಅಥವಾ ಆಸ್ಟ್ರೇಲಿಯಾ ಅಥವಾ ಕೆನಡಾದ ಉನ್ನತ ದರ್ಜೆಯ ವಿಶ್ವವಿದ್ಯಾಲಯಗಳಾಗಿರಬಹುದು. ಕಾಲದಿಂದ ಕಾಲಕ್ಕೆ ವಿದ್ಯಾರ್ಥಿಗಳು ತಮ್ಮ ಕೌಶಲ್ಯಕ್ಕೆ ಹೆಚ್ಚಿನ ಮೌಲ್ಯವನ್ನು ಗಣನೀಯವಾಗಿ ಸೇರಿಸಿದ್ದು ಮತ್ತು ಇದರಿಂದ ಉತ್ತಮ ವೇತನವನ್ನು ಪಡೆಯುತ್ತಿದ್ದಾರೆ.

ಅಂತರ್ ಸಂಸ್ಕೃತಿ ಪ್ರಸ್ತಾವನೆಗಳು ಮತ್ತು ಜಾಗತಿಕ ಆಯಾಮಗಳು ನಮ್ಮ ವಿದ್ಯಾರ್ಥಿಗಳಿಗೆ ವ್ಯಾಪಾರೋದ್ಯಮವನ್ನು ಸ್ಥಾಪಿಸುವಲ್ಲಿ ತಳಮಟ್ಟದ ದೃಷ್ಟಿಕೋನ ಮತ್ತು ಅನುಭವವನ್ನು ವಿವಿಧ ದೇಶಗಳಲ್ಲಿ ಒದಗಿಸಲಾಗುತ್ತಿದೆ. ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬಹುರಾಷ್ಟ್ರೀಯ ಬೋಧಕ ವರ್ಗದಿಂದ ಕಲಿಯಲಿದ್ದು, ಅವರಿಗೆ ವ್ಯಾಪಾರೋದ್ಯಮದ ಅಭ್ಯಾಸಗಳನ್ನು ವಿವಿಧ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ನೆಲೆಗಟ್ಟಿನಲ್ಲಿ ಒದಗಿಸಲಾಗುತ್ತಿದೆ. ಇದು ನಮ್ಮ ವಿದ್ಯಾರ್ಥಿಗಳಿಗೆ ವಿವಿಧ ವ್ಯಾಪಾರೋದ್ಯಮದ ಸೂತ್ರಗಳ ಬಗ್ಗೆ ಅಲೋಚಿಸಲು ನೆರವಾಗಲಿದ್ದು, ಅದನ್ನು ತಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಕೆಲವು ಅಂತಾರಾಷ್ಟ್ರೀಯ ಒಪ್ಪಂದಗಳು ಹೀಗಿವೆ.

ಯಎಸ್ ಎ

ನಾರ್ಥ್ ಅಲ್ಬಾಮಾ ವಿಶ್ವವಿದ್ಯಾಲಯ

ಅರ್ ಕನ್ಸಸ್ ಸ್ಟೇಟ್ ವಿಶ್ವವಿದ್ಯಾಲಯ

ಕ್ರಿಶ್ಚಿಯನ್ ಬ್ರದರ್ಸ್ ವಿಶ್ವವಿದ್ಯಾಲಯ

ನ್ಯೂಯಾರ್ಕ್ ಫಿಲ್ಮಂ ಅಕಾಡೆಮಿ

ಯುರೋಪ್

ಬಾಮನ್ ಮಾಸ್ಕೋ ಸ್ಟೇಟ್ ಟೆಕ್ನಿಕಲ್ ವಿಶ್ವವಿದ್ಯಾಲಯ

ಸೇಂಟ್ ಪೀಟರ್ಸ್ ಬರ್ಗ್ ಪಾಲಿಟೆಕ್ನಿಕ್ ವಿಶ್ವವಿದ್ಯಾಲಯ

ಕಝನ್ ಫೆಡರಲ್ ಸ್ಟೇಟ್ ವಿಶ್ವವಿದ್ಯಾಲಯ

ವಿಜ್ಞಾನ ಮತ್ತು ತಂತ್ರಜ್ಞಾನದ ರಾಷ್ಟ್ರೀಯ ವಿಶ್ವವಿದ್ಯಾಲಯ – ಎಂಐಎಸ್ ಐಎಸ್

ಯುಕೆ

ಮಿಡಲ್ಸೆಕ್ಸ್ ವಿಶ್ವವಿದ್ಯಾಲಯ

ನಾರ್ಥಂಬ್ರಿಯಾ ವಿಶ್ವವಿದ್ಯಾಲಯ

ಈಸ್ಟ್ ಲಂಡನ್ ವಿಶ್ವವಿದ್ಯಾಲಯ

ಬ್ರೂನಲ್ ವಿಶ್ವವಿದ್ಯಾಲಯ

ಆಸ್ಟ್ರೇಲಿಯಾ

ಚಾರ್ಲ್ಸ್ ಸ್ಟುವರ್ಟ್ ವಿಶ್ವವಿದ್ಯಾಲಯ

ಡೀಕಿನ್ ವಿಶ್ವವಿದ್ಯಾಲಯ

ಕ್ಯಾನ್ ಬೇರಾ ವಿಶ್ವವಿದ್ಯಾಲಯ

ಸನ್ ಶೈನ್ ಕೋಸ್ಟ್ ವಿಶ್ವವಿದ್ಯಾಲಯ

ಕೆನಡಾ

ಕನ್ ಕಾರ್ಡಿಯಾ ವಿಶ್ವವಿದ್ಯಾಲಯ, ಮಾಂಟ್ರಿಯಲ್

ರೆಜಿನ್ ವಿಶ್ವವಿದ್ಯಾಲಯ

ಆಂಟೋರಿಯೋ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಶ್ವವಿದ್ಯಾಲಯ

ವ್ಯಾಂಕೋವರ್ ಫಿಲ್ಮಂ ಸ್ಕೂಲ್

ನ್ಯೂಜಿಲ್ಯಾಂಡ್

ಮ್ಯಾಸ್ಸಿ ವಿಶ್ವವಿದ್ಯಾಲಯ

ಕಾರ್ನೆಲ್ ಇನ್ಸ್ ಟಿಟ್ಯೂಟ್ ಆಫ್ ಬಿಸಿನೆಸ್ ಅಂಡ್ ಟೆಕ್ನಾಲಜಿ

ಆಕ್ಲೆಂಡ್ ಇನ್ಸ್ ಟಿಟ್ಯೂಟ್ ಆಫ್ ಸ್ಟಡೀಸ್

ಟೋಯ್ ಓಹೋಮಯ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ

ಇಸ್ರೇಲ್

ಟೆಲ್ ಅವೀವ್ ವಿಶ್ವವಿದ್ಯಾಲಯ

ಸೇನ್ಸ್ ಮಲೇಷ್ಯಾ ವಿಶ್ವವಿದ್ಯಾಲಯ

ಸಿಂಗಪುರ್

ಜೇಮ್ಸ್ ಕುಕ್ ವಿಶ್ವವಿದ್ಯಾಲಯ

ತೈವಾನ್

ನ್ಯಾಷನಲ್ ಯಂಗ್ ಮಿಂಗ್ ವಿಶ್ವವಿದ್ಯಾಲಯ

ನ್ಯಾಷನಲ್ ಸೆಂಟ್ರಲ್ ವಿಶ್ವವಿದ್ಯಾಲಯ

ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:59 pm, Mon, 20 June 22