Career Guidance: ದ್ವಿತೀಯ ಪಿಯುಸಿ ನಂತರ BSC ಫಾರ್ಮಸಿ, BSC ನರ್ಸಿಂಗ್ ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ
ದ್ವಿತೀಯ ಪಿಯುಸಿ ನಂತರ BSC ಫಾರ್ಮಸಿ, BSC ನರ್ಸಿಂಗ್ ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ
BSC ಫಾರ್ಮಸಿ – ಫಾರ್ಮಾ ಡಿ (ಡಾಕ್ಟರ್ ಆಫ್ ಫಾರ್ಮ್ಸಿ)/ಡಿ. ಫಾರ್ಮ್ / BSC ಫಾರ್ಮ ಓದಲು ಇಚ್ಚಿಸುವ ವಿದ್ಯಾರ್ಥಿಗಳು PCMB ಓದಿರಬೇಕು. ಅದರಲ್ಲೂ Chemistry ಕಡ್ಡಾಯವಾಗಿ ಓದಿರಬೇಕು. ಜರ್ನಲ್ ಮೆರಿಟ್ ವಿದ್ಯಾರ್ಥಿಗಳು 85 ಪ್ರತಿಶತಕ್ಕಿಂತ ಹೆಚ್ಚಿನ ಅಂಕ ಪಡೆದಿರಬೇಕು. ಎಸ್/ಎಸ್ಟಿ ಅವರಿಗೆ 75 ರಿಂದ 85 ಪಡೆದರೆ ಸರರ್ಕಾರಿ ಸೀಟ್ ಪಡೆಯಬಹದು. ರಾಜ್ಯದಲ್ಲಿ ಒಂದೇ ಸರರ್ಕಾರಿ ಕಾಲೇಜ್ ಇದ್ದು ಇನ್ನು ಉಳಿದಂತೆ ಬೇರೆ ಬೇರೆ ಖಾಸಗಿ ಕಾಲೇಜ್ಗಳಲ್ಲಿ 10% ಸರರ್ಕಾರಿ ಸೀಟ್ಗಳಿರುತ್ತವೆ. ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಆಫ್ ಹೆಲ್ತ್ ಸೈನ್ಸ್ನಿಂದ BSC ಫಾರ್ಮಸಿ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಆನ್ಲೈನ್ ಅರ್ಜಿ ಸಲ್ಲಿಸಿ ಹಣ ತುಂಬಿದ ನಂತರ. ನಿಮ್ಮ ಎಲ್ಲ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು.
15 ದಿನಗಳ ನಂತರ ಮೆರಿಟ್ ಲಿಸ್ಟ್ ಬಿಟ್ಟ ನಂತರ ದಾಖಲಾತಿ ಪರಿಶೀಲನೆಗೆ ನೀವು ಅರ್ಜಿಯಲ್ಲಿ ನಮೂದಿಸಿದ ನಿಮ್ಮ ಜಿಲ್ಲೆಯಲ್ಲೇ ನಡೆಯುತ್ತದೆ. ನಂತರ ಅಲ್ಲಿಯೇ ಒಂದು ಸೀಕ್ರೆಟ್ ಕೀ ಸಂಖ್ಯೆ ನೀಡಲಾಗುತ್ತದೆ. ಆ ಸೀಕ್ರೆಟ್ ಕೀ ಸಂಖ್ಯೆ ಮುಖಾಂತರ ನಿಮಗೆ ಬೇಕಾದ ಮಹಾವಿದ್ಯಾಲಯಗಳನ್ನು ಆಯ್ದುಕೊಳ್ಳಬಹದು.
BSC ನರ್ಸಿಂಗ್
BSC ನರ್ಸಿಂಗ್ ಓದಲು ಇಚ್ಚಿಸುವ ವಿದ್ಯಾರ್ಥಿಗಳು PUCಯಲ್ಲಿ PCMB, English ವಿಷಯಗಳನ್ನು ಕಡ್ಡಾಯವಾಗಿ ಆಯ್ದುಕೊಂಡಿರಬೇಕು. ನಂತರ KE ವೈಬ್ಸೈಟ್ನಲ್ಲಿ BSC ನರ್ಸಿಂಗ್ಗೆ ಕಾಲ್ಫಾರ್ಮ್ ಆದ ನಂತರ ನೀವು ಅಲ್ಲಿ ಅರ್ಜಿಯನ್ನು ಹಾಕಬೇಕು. ನಂತರ PUCಯಲ್ಲಿ ಕಲಿತ PCMB ವಿಷಯಗಳಲ್ಲಿ PCBಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ರ್ಯಾಂಕ್ ಲಿಸ್ಟ್ ಬಿಡುತ್ತಾರೆ. ನಂತರ ನಿಮಗೆ ಬೇಕಾದ ಮಹಾವಿದ್ಯಾಲಯವನ್ನು ಆಯ್ದುಕೊಳ್ಳಲು ಅವಕಾಶವಿರುತ್ತದೆ. ನೀವು PCBಯಲ್ಲಿ 80 ಪ್ರತಿಶತಕ್ಕಿಂತ ಹೆಚ್ಚು ಅಂಕ ಪಡೆದಿದ್ದರೇ ಸರರ್ಕಾರಿ ಸೀಟ್ನ್ನು ಪಡೆಯಬಹದು.