ಮೇ 29ರಿಂದ ಸರ್ಕಾರಿ, ಪ್ರೌಢಶಾಲೆಗಳ ಪುನಾರಂಭ: ಶಿಥಿಲಾವಸ್ಥೆ ಶಾಲಾ ಕೊಠಡಿ ಬಳಸದಂತೆ ಶಿಕ್ಷಣ ಇಲಾಖೆ ವಾರ್ನಿಂಗ್​

|

Updated on: May 26, 2023 | 3:18 PM

2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿದ್ದು, ಮೇ 29ರಿಂದ ರಾಜ್ಯದಲ್ಲಿ ಸರ್ಕಾರಿ, ಪ್ರೌಢಶಾಲೆಗಳ ಪುನಾರಂಭಗೊಳ್ಳಲಿವೆ ಎಂದು ತಿಳಿಸಿದೆ.

ಮೇ 29ರಿಂದ ಸರ್ಕಾರಿ, ಪ್ರೌಢಶಾಲೆಗಳ ಪುನಾರಂಭ: ಶಿಥಿಲಾವಸ್ಥೆ ಶಾಲಾ ಕೊಠಡಿ ಬಳಸದಂತೆ ಶಿಕ್ಷಣ ಇಲಾಖೆ ವಾರ್ನಿಂಗ್​
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: 2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿದ್ದು, ಮೇ 29ರಿಂದ ರಾಜ್ಯದಲ್ಲಿ ಸರ್ಕಾರಿ, ಪ್ರೌಢಶಾಲೆ (Govt, high schools) ಗಳ ಪುನಾರಂಭಗೊಳ್ಳಲಿವೆ ಎಂದು ತಿಳಿಸಿದೆ. ಜೊತೆಗೆ ಮುಂಗಾರು ಆರಂಭ ಹಿನ್ನಲೆ ಅಲರ್ಟ್ ಆಗಿರುವಂತೆ ಸೂಚನೆ ನೀಡಿದ್ದು, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿ ಬಳಸದಂತೆ ಶಿಕ್ಷಣ ಇಲಾಖೆ ವಾರ್ನಿಂಗ್​ ನೀಡಿದೆ. ಶಾಲೆ ಆರಂಭಕ್ಕೂ ಮೊದಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲು ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

ಬಿಸಿಯೂಟದಲ್ಲಿ ಸಿಹಿ ಉಪಹಾರ

ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಈಗಾಗಲೇ ಆರಂಭವಾಗಿದೆ. ಶಾಲಾ ಕೊಠಡಿ, ಶೌಚಾಲಯ, ಕಾಂಪೌಂಡ್​​ಗಳ ಶಿಥಿಲಗೊಂಡ ಬಗ್ಗೆ ಪರಿಶೀಲನೆ ನಡೆಸಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಉಪನಿರ್ದೇಶಕರ ಗಮನಕ್ಕೆ ತಂದು ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿಹಿ ಉಪಹಾರ ವಿತರಿಸಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Textbook Controversy: ಶಾಲಾರಂಭಕ್ಕೂ ಮುನ್ನವೇ ಮತ್ತೆ ಶುರುವಾಯ್ತು ಪಠ್ಯ ಪರಿಷ್ಕರಣೆ ದಂಗಲ್, ಹೆಡ್ಗೆವಾರ್ ಪಾಠಕ್ಕೆ ಬೀಳುತ್ತಾ ಬ್ರೇಕ್?

ಜೂನ್ 1ರಿಂದ ಶಾಲಾ ತರಗತಿಗಳನ್ನು ಆರಂಭಿಸುವ ಬಗ್ಗೆ ಸೂಚನೆ ನೀಡಿದ್ದು, ಮಳೆಯಿಂದಾಗಿ ಹಲವು ಭಾಗದಲ್ಲಿ ಹಳ್ಳ, ಕೊಳ್ಳ, ನದಿಗಳು ತುಂಬಿವೆ. ರಸ್ತೆ ಹಾಳಾಗಿದ್ದರೇ ಮಕ್ಕಳನ್ನು ಶಾಲೆಗೆ ಬರಲು ಒತ್ತಾಯಿಸಬಾರದು. ಅಧಿಕಾರಿಗಳ ಗಮನಕ್ಕೆ ತಂದು ಶಾಲೆಗೆ ರಜೆ ಘೋಷಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: Text Book Row: ಮತ್ತೆ ಪರಿಷ್ಕರಣೆ ಆಗಲಿದೆಯೇ ಪಠ್ಯ ಪುಸ್ತಕ; ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು

ಪ್ರಸಕ್ತ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ವಿವರ ಹೀಗಿದೆ

  • ಮೊದಲನೇ ಅವಧಿಯ ಶಾಲಾ ಕರ್ತವ್ಯ ದಿನಗಳು: ಮೇ 29, 2023 ರಿಂದ 02-10-2023ರ ವರೆಗೆ.
  • ಎರಡನೇ ಅವಧಿಯ ಶಾಲಾ ಕರ್ತವ್ಯ ದಿನಗಳು: 25-10-23 ರಿಂದ 10-04-24ರ ವರೆಗೆ.
  • ದಸರಾ ರಜೆ: 8-10- 23 ರಿಂದ 24-10-23ರ ವರೆಗೆ.
  • ಬೇಸಿಗೆ ರಜೆ: 11-4-24 ರಿಂದ 28-5-24ರ ವರೆಗೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:17 pm, Fri, 26 May 23