AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gujarat: ವರ್ಷಗಳ ನಂತರ 10 ನೇ ತರಗತಿ ಪರೀಕ್ಷೆ ಬರೆದ ಪ್ಯೂನ್; ಮಗನೊಂದಿಗೆ ತಂದೆಯೂ ಪಾಸ್

42 ವರ್ಷದ ವೀರಭದ್ರಸಿನ್ಹ್ ಸಿಸೋಡಿಯಾ, ಮತ್ತು ಅವರ 16 ವರ್ಷದ ಮಗ ಯುವರಾಜ್, ಗುಜರಾತ್ ರಾಜ್ಯ ಬೋರ್ಡ್ ಪರೀಕ್ಷೆಗಳಿಗೆ ಒಟ್ಟಿಗೆ ಹಾಜರಾಗಿದ್ದರು.

Gujarat: ವರ್ಷಗಳ ನಂತರ 10 ನೇ ತರಗತಿ ಪರೀಕ್ಷೆ ಬರೆದ ಪ್ಯೂನ್; ಮಗನೊಂದಿಗೆ ತಂದೆಯೂ ಪಾಸ್
ಯುವರಾಜ್, ವೀರಭದ್ರಸಿನ್ಹ ಸಿಸೋಡಿಯಾImage Credit source: Indian Express
ನಯನಾ ಎಸ್​ಪಿ
|

Updated on: May 26, 2023 | 10:57 AM

Share

ಓದುವುದಕ್ಕೆ (Education) ವಯಸ್ಸು ಮುಖ್ಯವಲ್ಲ ಎಂಬುದು ಅಕ್ಷರಶಃ ಸತ್ಯ. ಗುಜರಾತ್ ಶಾಲೆ (Gujarat) ಒಂದರಲ್ಲಿ ಈ ಮಾತಿನಂತೆ ಎಷ್ಟೋ ವರ್ಷಗಳ ನಂತರ ಪ್ಯೂನ್ (Peon) 10ನೇ ತರಗತಿ ಪರೀಕ್ಷೆಯನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಮಗನೊಂದಿಗೆ, ತಂದೆ ಕೂಡ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಯಸ್ಸಾಗುತ್ತಿದ್ದಂತೆ ಓದೋದು, ಪರೀಕ್ಷೆ ಬರಿಯುವುದು ಕಷ್ಟದ ಕೆಲಸ ಎನ್ನುವವರಿಗೆ ಈ ತಂದೆ ಸ್ಫೂರ್ತಿಯಾಗಿದ್ದಾರೆ. 42 ವರ್ಷದ ವೀರಭದ್ರಸಿನ್ಹ್ ಸಿಸೋಡಿಯಾ, ಮತ್ತು ಅವರ 16 ವರ್ಷದ ಮಗ ಯುವರಾಜ್, ಗುಜರಾತ್ ರಾಜ್ಯ ಬೋರ್ಡ್ ಪರೀಕ್ಷೆಗಳಿಗೆ ಒಟ್ಟಿಗೆ ಹಾಜರಾಗಿದ್ದರು. ತಂದೆ ಸಿಸೋಡಿಯಾ ಶೇ.45 ಪಡೆದರೆ ಮಗ ಶೇ.79 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ ಎಂದು ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಗುರುವಾರ (ಮೇ 25) ಬೆಳಗ್ಗೆ ಅಹಮದಾಬಾದ್‌ನಲ್ಲಿರುವ ಸಿಸೋಡಿಯಾ ಕುಟುಂಬದ ತಂದೆ-ಮಗ, ಗುಜರಾತ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ಬೋರ್ಡ್ (GSHSEB) 10 ನೇ ತರಗತಿಯಲ್ಲಿ ಒಟ್ಟಿಗೆ ಉತ್ತೀರ್ಣರಾಗಿದ್ದಾರೆ. ಯುವರಾಜ್ ಸಾಮಾನ್ಯ ವಿದ್ಯಾರ್ಥಿಯಾಗಿ ಕಾಣಿಸಿಕೊಂಡರು, ಅವರ ತಂದೆ ಮಾರ್ಚ್‌ನಲ್ಲಿ ನಡೆದ ಪರೀಕ್ಷೆಗಳಿಗೆ ಖಾಸಗಿ ಅಭ್ಯರ್ಥಿಯಾಗಿದ್ದರು.

“ನಾವು ಒಟ್ಟಿಗೆ ಪರೀಕ್ಷೆಗೆ ತಯಾರಿ ನಡೆಸಿದ್ದೇವೆ ಮತ್ತು ನಾನು ನನ್ನ ತಂದೆಗೆ ಸ್ನೇಹಿತನಂತೆ ಸಹಾಯ ಮಾಡುತ್ತಿದ್ದೆ” ಎಂದು ಯುವರಾಜ್ ತನ್ನ ತಂದೆಯೊಂದಿಗೆ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅನುಭವದ ಬಗ್ಗೆ ಹೇಳಿದರು. “ನಾನು ಪರೀಕ್ಷೆಗೆ ಹಾಜರಾಗಲು ಮತ್ತು ಸುಮಾರು 25 ವರ್ಷಗಳ ನಂತರ ಕಾಣಿಸಿಕೊಳ್ಳಲು ನನಗೆ ನನ್ನ ಮಗನೆ ಸ್ಫೂರ್ತಿ” ಎಂದು ವೀರಭದ್ರಸಿಂಹ ಹೇಳಿದರು. 1998 ರಲ್ಲಿ ತನ್ನ ಕೊನೆಯ ಪರೀಕ್ಷೆಯನ್ನು(10 ನೇ ತರಗತಿ) ತನ್ನ ಊರಿನ ರಾಜಸ್ಥಾನದ ಸ್ಥಳೀಯ ಡುಂಗರ್‌ಪುರದಲ್ಲಿ ಬರೆದಿದ್ದರು.

ತಂದೆ-ಮಗ ಇಬ್ಬರ ನಡುವೆ ಮತ್ತೊಂದು ಸಾಮಾನ್ಯ ಅಂಶವೆಂದರೆ, ಮಗ ಯುವರಾಜ್ ಅಹಮದಾಬಾದ್‌ನ ನವ ವಡಾಜ್‌ನಲ್ಲಿರುವ ಡಿಪಿ ಹೈಸ್ಕೂಲ್ ಅಲ್ಲಿ ವಿದ್ಯಾರ್ಥಿಯಾಗಿದ್ದರೆ, ತಂದೆ ವೀರಭದ್ರ ಅದೇ ಶಾಲೆಯಲ್ಲಿ ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದಾರೆ. “ನಾನು ಇಷ್ಟು ವರ್ಷಗಳ ನಂತರ ನನ್ನ ಪರೀಕ್ಷೆಯನ್ನು ಮತ್ತೆ ಬರೆಯುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ, ಆದರೆ ನನ್ನ ಮಗ 10 ನೇ ತರಗತಿಗೆ ಬಂದಾಗ, ನಾನು ಕೂಡ ಶಾಲೆಯ ಬೆಂಬಲದೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಬಹುದೆಂದು ನಾನು ಭಾವಿಸಿದೆ” ಎಂದು ವೀರಭದ್ರ ಹೇಳಿದರು.

ವೀರಭದ್ರರಿಗೆ ಕಿರಿಯ ಮಗಳಿದ್ದು, ಅವರು 5 ನೇ ತರಗತಿಯಲ್ಲಿ ಓದುತ್ತಿದ್ದಾರೆ. “ನಮ್ಮ ಶಾಲೆಯಲ್ಲಿ ಇದು ಮೊದಲ ಪ್ರಕರಣವಾಗಿದೆ” ಎಂದು ಶಾಲೆಯ ಪ್ರಾಂಶುಪಾಲರಾದ ಚಿರಾಗ್ ಶಾ ಹೇಳಿದರು, ಪಾಈಕ್ಷೆಗೆ ಸಿದ್ಧವಾಗಲು ಶಾಲೆಯು ತಂದೆಗೆ ಎಲ್ಲಾ ಸಹಾಯ ಮತ್ತು ಬೆಂಬಲವನ್ನು ನೀಡಿದೆ ಎಂದು ಹೇಳಿದರು. ಯುವರಾಜ್ ಖಾಸಗಿ ಟ್ಯೂಷನ್ ತೆಗೆದುಕೊಂಡರೆ, ಅವರ ತಂದೆ ಸ್ವಯಂ ಅಧ್ಯಯನ ಮತ್ತು ಶಾಲೆಯ ಬೆಂಬಲದ ಮೂಲಕ ತಯಾರಿ ನಡೆಸಿದರು.

“ಸಂಜೆ 5.30 ರ ನಂತರ, ಅವನ ಶಿಫ್ಟ್ ಮುಗಿಯುವಾಗ, ಅವರೊಂದಿಗೆ ಕುಳಿತು ಯಾವುದೇ ವಿಷಯದಲ್ಲಿ ಅವರಿಗೆ ತೊಂದರೆ ಕಂಡುಬಂದರೆ ಕಲಿಸಲು ಒಬ್ಬ ಶಿಕ್ಷಕರಿದ್ದರು” ಎಂದು ಶಾ ತಿಳಿಸಿದರು. 25 ಸಾವಿರ ಸಂಬಳದಲ್ಲಿ ಉದ್ಯೋಗದಲ್ಲಿರುವ ವೀರಭದ್ರ ಮುಂದೆ ಓದುವ ಹಂಬಲ ಹೊಂದಿದ್ದಾರೆ.

ಇದನ್ನೂ ಓದಿ: ಜಿಲ್ಲಾವಾರು ಒಟ್ಟು 27 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ತೀರ್ಮಾನ

“ಶಾಲಾ ಆಡಳಿತವು ನನಗೆ ಸಹಾಯ ಮಾಡಿದ್ದು ಮಾತ್ರವಲ್ಲದೆ ನನ್ನಗೆ ಪ್ರೋಟ್ಸ್ನಹ ನೀಡಿದೆ. ನಾನು ಪರೀಕ್ಷೆಯಲ್ಲಿ ಉತ್ತೀರ್ಣನಾದರೆ ನನಗೆ ಉತ್ತಮ ಅವಕಾಶಗಳಿವೆ ಎಂದು ಅವರು ನನಗೆ ಹೇಳಿದರು.” ಎಂದು ವೀರಭದ್ರ ಶಾಲೆಯ ಕುರಿತು ಮಾತನಾಡಿದರು. ಅತ್ಯಂತ ಸವಾಲಿನ ವಿಷಯದ ಬಗ್ಗೆ ಕೇಳಿದಾಗ, ವೀರಭದ್ರ ಗುಜರಾತಿ ಎಂದು ಹೇಳಿದರು. “ನಾನು ರಾಜಸ್ಥಾನದವನಾದ್ದರಿಂದ ನನಗೆ ಗುಜರಾತಿ ಚೆನ್ನಾಗಿ ಬರುವುದಿಲ್ಲ. ಭಾಷೆ ಬರೆಯುವುದು ಮತ್ತು ಓದುವುದು ನನಗೆ ಅತ್ಯಂತ ಕಠಿಣವಾಗಿತ್ತು, ”ಎಂದು ಅವರು ತಿಳಿಸಿದರು.

ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ