ಎಂಬಿಬಿಎಸ್ ಪರೀಕ್ಷೆಯಲ್ಲಿ ಒಂದೇ ರೀತಿ ಅಂಕಗಳನ್ನು ಗಳಿಸುವ ಮೂಲಕ ವಿಶಿಷ್ಟ ದಾಖಲೆಯನ್ನು ಸೃಷ್ಟಿಸಿರುವ ಅವಳಿ ಸಹೋದರಿಯರು ಸುದ್ದಿಯಲ್ಲಿದ್ದಾರೆ. ಈ ಅವಳಿ ಸಹೋದರಿಯರು ಗುಜರಾತ್‌ನ ಸೂರತ್ ನಿವಾಸಿಗಳಾಗಿದ್ದು, ಅವರ ಹೆಸರುಗಳು ರೀಬಾ ಮತ್ತು ರಹಿನ್ ಹಫೀಜಿ. ಅಂತಿಮ MBBS ಪರೀಕ್ಷೆಗಳಲ್ಲಿ ಅದೇ ಅಂಕಗಳನ್ನು ಗಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಈ ಅವಳಿ ಸಹೋದರಿಯರು ಏಕಕಾಲದಲ್ಲಿ ವಡೋದರಾದ ಜಿಎಂಇಆರ್ಎಸ್ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಒಟ್ಟು 935 ಅಂಕಗಳನ್ನು ಅಂದರೆ ಶೇ. 66.8 ಅಂಕಗಳನ್ನು ಗಳಿಸಿದ್ದಾರೆ.
ವರದಿಗಳ ಪ್ರಕಾರ, ರೀಬಾ 10 ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 99 ಅಂಕಗಳನ್ನು ಗಳಿಸಿದ್ದರೆ, ರಹಿನ್ ಶೇಕಡಾ 98.5 ಅಂಕಗಳನ್ನು ಪಡೆದಿದ್ದರು. ಆದರೆ 12ನೇ ತರಗತಿಯಲ್ಲಿ ಇವರು ಕ್ರಮವಾಗಿ 98.2 ಮತ್ತು 97.3 ಪ್ರತಿಶತ ಅಂಕಗಳನ್ನು ಗಳಿಸಿದ್ದಾರೆ. ತರಬೇತಿ ಇಲ್ಲದೆಯೇ ಅವರು ನೀಟ್ ಯುಜಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ರೀಬಾ ಶೇ. 97 ಅಂಕಗಳನ್ನು ಗಳಿಸಿದ್ದರೆ, ರಹಿನ್ ಶೇ. 97.7 ಅಂಕಗಳನ್ನು ಗಳಿಸಿದ್ದರು.
ಇದನ್ನೂ ಓದಿ: ಪ್ರತಿಭಾವಂತ ಕ್ರಿಕೆಟ್ ಆಟಗಾರ ಇಂದು ಐಪಿಎಸ್ ಅಧಿಕಾರಿ; ಕಾರ್ತಿಕ್ ಮಧಿರಾ ಅವರ ಸ್ಪೂರ್ತಿದಾಯಕ ಕಥೆಯಿದು
ಜಿಎಂಇಆರ್ಎಸ್ ವೈದ್ಯಕೀಯ ಕಾಲೇಜಿನಲ್ಲಿ, ಈ ಇಬ್ಬರೂ ಸಹೋದರಿಯರು ಒಂದೇ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು ಮತ್ತು ಒಟ್ಟಿಗೆ ಓದುತ್ತಿದ್ದರು. ಇದೀಗ ಈ ಅವಳಿ ಸಹೋದರಿಯರು ತಮ್ಮ ಯಶಸ್ಸಿಗೆ ತಮ್ಮ ತಾಯಿ ಮತ್ತು ಅಜ್ಜ-ಅಜ್ಜಿ ಕಾರಣ ಎಂದು ಹೇಳುತ್ತಾರೆ. “ನಾವು ಅನೇಕ ಏರಿಳಿತಗಳನ್ನು ಕಂಡಿದ್ದೇವೆ, ಆದರೆ ನನ್ನ ತಾಯಿ ನಮಗೆ ನಿರಂತರ ಶಕ್ತಿ ಮತ್ತು ಸ್ಫೂರ್ತಿಯ ಮೂಲವಾಗಿದ್ದರು” ಎಂದು ರಹಿನ್ ಹೇಳುತ್ತಾರೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ