AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICMAI CMA 2023: ಐಸಿಎಂಎಐ ಸಿಎಂಎ 2023 ಜೂನ್ ಪರೀಕ್ಷೆ ನೋಂದಣಿಗೆ ಇಂದೇ ಕೊನೆಯ ದಿನಾಂಕ: ನೋಂದಣಿ ಪ್ರಕ್ರಿಯೆ ಹೀಗಿದೆ

ಹೊಸ ನವೀಕರಣದ ಪ್ರಕಾರ ಐಸಿಎಂಎಐ ಸಿಎಂಎ (ICMAI CMA) ಜೂನ್ 2023 ನೋಂದಣಿ ಇಂದು ಫೆಬ್ರವರಿ 10, 2023 ರಂದು ಕೊನೆಗೊಳ್ಳುತ್ತದೆ. ಸಿಎಂಎ ಫೌಂಡೇಶನ್, ಫೈನಲ್ ಮತ್ತು ಸಿಎ (CA)ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ icmai.in ನಲ್ಲಿ ಬೇಗನೆ ನೋಂದಣಿಗೆ ಅರ್ಜಿ ಸಲ್ಲಿಸಿ.

ICMAI CMA 2023: ಐಸಿಎಂಎಐ ಸಿಎಂಎ 2023 ಜೂನ್ ಪರೀಕ್ಷೆ ನೋಂದಣಿಗೆ ಇಂದೇ ಕೊನೆಯ ದಿನಾಂಕ: ನೋಂದಣಿ ಪ್ರಕ್ರಿಯೆ ಹೀಗಿದೆ
ಐಸಿಎಂಎಐ ಸಿಎಂಎ2023 ಜೂನ್ ನೋಂದಣಿಗೆ ಇಂದೇ ಕೊನೆಯ ದಿನಾಂಕImage Credit source: ICMAI CMA
TV9 Web
| Edited By: |

Updated on:Feb 10, 2023 | 11:30 AM

Share

ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಿಎಂಎ ಜೂನ್ ಪರೀಕ್ಷೆ 2023 (ICMAI CMA) ನೋಂದಣಿಗಳನ್ನು ನಡೆಸುತ್ತಿದೆ ಮತ್ತು ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕ (ಫೆಬ್ರವರಿ 10). ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ icmai.in ನಲ್ಲಿ ಅರ್ಜಿ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್ icmai.in ನಲ್ಲಿ ನೋಂದಣಿ ಪೋರ್ಟಲ್ ತೆರೆದಿದೆ. ನೋಂದಣಿ ಅರ್ಜಿ ಸಲ್ಲಿಸದೆ ಇರುವ ಅಭ್ಯರ್ಥಿಗಳು ತಡ ಮಾಡದೆ ಈಗಲೇ ಅರ್ಜಿ ಸಲ್ಲಿಸಿ. ಕೊನೆಯ ಕ್ಷಣದಲ್ಲಾಗುವ ಗಾಬರಿಯಿಂದ ತಪ್ಪಿಸಿಕೊಳ್ಳಿ. ಕೊನೆಯ ದಿನಾಂಕವು ಮೂಲತಃ ಜನವರಿ 31, 2023 ಆಗಿತ್ತು ಆದರೆ ನಂತರ ಅದನ್ನು ಫೆಬ್ರವರಿ 10, 2023 ರವರೆಗೆ ವಿಸ್ತರಿಸಲಾಯಿತು.

“1959 ರ ವೆಚ್ಚ ಮತ್ತು ಕಾರ್ಯಗಳ ಲೆಕ್ಕಪರಿಶೋಧಕರ ನಿಯಂತ್ರಣ, 20ಬಿ (Regulation 20B of Cost and Works Accountants Regulation,1959) ಯ ಅನುಸಾರವಾಗಿ, ಫೌಂಡೇಶನ್, ಮಧ್ಯಂತರ ಮತ್ತು ಅಂತಿಮ ಕೋರ್ಸ್‌ನ ಜೂನ್ 2023 ರ ಪರೀಕ್ಷೆಯ ಪ್ರವೇಶ/ನೋಂದಣಿ/ ದಾಖಲಾತಿಗಾಗಿ ಕೊನೆಯ ದಿನಾಂಕವನ್ನು 10 ನೇ ಫೆಬ್ರವರಿ, 2023 (ಶುಕ್ರವಾರ) ವರೆಗೆ ವಿಸ್ತರಿಸಲಾಗಿದೆ.” ಎಂದು ಅಧಿಕೃತ ಸೂಚನೆಯು ತಿಳಿಸುತ್ತದೆ. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ನಿರ್ಧಿಷ್ಟ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ಫೌಂಡೇಶನ್ ಕೋರ್ಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 6,000 ರೂ. ಪಾವತಿಸಬೇಕು, ಇಂಟರ್ಮೀಡಿಯೇಟ್ ಕೋರ್ಸ್ ಪರೀಕ್ಷೆ​ಗೆ ಅರ್ಜಿ ಸಲ್ಲಿಸುವವರು 23,100 ರೂ. ಪಾವತಿಸಬೇಕು. ಫೈನಲ್ ಕೋರ್ಸ್ ಪರೀಕ್ಷೆಗೆ ಅರ್ಜಿ ಸಲ್ಲಿಸುವವರು 25,000 ರೂ. ಪಾವತಿಸಬೇಕಿದೆ.

ಐಸಿಎಂಎಐ ಸಿಎಂಎ ಜೂನ್ 2023 ಪರೀಕ್ಷೆ ನೋಂದಣಿಗೆ ಅರ್ಜಿ ಸಲ್ಲಿಸಲು ನೇರ ಲಿಂಕ್

ಐಸಿಎಂಎಐ ಸಿಎಂಎ ಜೂನ್ 2023 ನೋಂದಣಿ: ಅರ್ಜಿ ಸಲ್ಲಿಸುವುದು ಹೇಗೆ?

  • ಐಸಿಎಂಎಐ ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ icmai.in
  • ನಂತರ ಮುಖಪುಟದ ಮೇಲ್ಭಾಗದಲ್ಲಿರುವ ಆನ್ಲೈನ್ ಅಡ್ಮಿಶನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಅಭ್ಯರ್ಥಿಗಳನ್ನು ಮತ್ತೊಂದು ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ ಇಲ್ಲಿ ನೀವು ಅರ್ಜಿಸಲ್ಲಿಸಲು ಬಯಸುವ ಕೋರ್ಸ್ ಅನ್ನು ಕ್ಲಿಕ್ ಮಾಡಿ
  • ಅರ್ಜಿಯಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ
  • ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ
  • ಮುಂದೆ ಈ ಅರ್ಜಿಯ ಅಗತ್ಯವಿದ್ದಲ್ಲಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.ಐಸಿಎಂಎಐ ಜೂನ್ 2023 ರ ಪರೀಕ್ಷೆಯ ನೋಂದಣಿಯನ್ನು ನಡೆಸುತ್ತಿದೆ.

ಇದನ್ನೂ ಓದಿ: ಎಥಿಕಲ್ ಹ್ಯಾಕರ್ ಆಗುವುದು ಹೇಗೆ? ಉದ್ಯೋಗಾವಕಾಶ ಮತ್ತು ಟಾಪ್ ಇನ್​ಸ್ಟಿಟ್ಯೂಟ್​​ಗಳ ಮಾಹಿತಿ

ಡಿಸೆಂಬರ್ 2022 ರ ಅವಧಿಯ ಫಲಿತಾಂಶವನ್ನು ಈಗಾಗಲೇ ಜನವರಿ 31, 2023 ರಂದು ಬಿಡುಗಡೆ ಮಾಡಲಾಗಿದೆ. ಐಸಿಎಂಎಐ ಸಿಎಂಎ ನ ಹೆಚ್ಚಿನ ಅಪ್​ಡೇಟ್​ಗಳಿಗಾಗಿ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:30 am, Fri, 10 February 23

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್