Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ ಸಂಸ್ಕೃತ ಬೋರ್ಡ್ ಪರೀಕ್ಷೆಗಳಲ್ಲಿ ಟಾಪ್ ರ‍್ಯಾಂಕ್ ಪಡೆದ ಇರ್ಫಾನ್, ಆದಿತ್ಯ

ಚಂಡೌಲಿ ಮತ್ತು ಬಲ್ಲಿಯಾ ಜಿಲ್ಲೆಗಳ ಈ ವಿದ್ಯಾರ್ಥಿಗಳು ಮಧ್ಯಂತರ ಮತ್ತು ಪ್ರೌಢಶಾಲಾ ಪರೀಕ್ಷೆಗಳಲ್ಲಿ ಇತರರನ್ನು ಹಿಂದಿಕ್ಕಿದ್ದಾರೆ. ಉತ್ತರ ಪ್ರದೇಶ ಮಾಧ್ಯಮಿಕ ಸಂಸ್ಕೃತ ಶಿಕ್ಷಾ ಪರಿಷತ್ತು ಬುಧವಾರ (ಮೇ 3) ಪೂರ್ವ ಮಾಧ್ಯಮ (9 ಮತ್ತು 10 ನೇ ತರಗತಿ), ಮತ್ತು ಉತ್ತರ ಮಾಧ್ಯಮ (11 ಮತ್ತು 12 ನೇ ತರಗತಿ) ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಿದೆ.

ಉತ್ತರ ಪ್ರದೇಶ ಸಂಸ್ಕೃತ ಬೋರ್ಡ್ ಪರೀಕ್ಷೆಗಳಲ್ಲಿ ಟಾಪ್ ರ‍್ಯಾಂಕ್ ಪಡೆದ ಇರ್ಫಾನ್, ಆದಿತ್ಯ
ಇರ್ಫಾನ್ ಸಂಸ್ಕೃತ ಪರಿಷತ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾನೆImage Credit source: Hindustan Times
Follow us
TV9 Web
| Updated By: ನಯನಾ ಎಸ್​ಪಿ

Updated on: May 05, 2023 | 12:47 PM

ಚಂಡೌಲಿ ಮತ್ತು ಬಲ್ಲಿಯಾ ಜಿಲ್ಲೆಗಳ ಈ ವಿದ್ಯಾರ್ಥಿಗಳು ಮಧ್ಯಂತರ (intermediate) ಮತ್ತು ಪ್ರೌಢಶಾಲಾ (High School) ಪರೀಕ್ಷೆಗಳಲ್ಲಿ ಇತರರನ್ನು ಹಿಂದಿಕ್ಕಿದ್ದಾರೆ. ಉತ್ತರ ಪ್ರದೇಶ ಮಾಧ್ಯಮಿಕ ಸಂಸ್ಕೃತ ಶಿಕ್ಷಾ ಪರಿಷತ್ತು (Uttar Pradesh Madhyamik Sanskrit Shiksha Parishad) ಬುಧವಾರ (ಮೇ 3) ಪೂರ್ವ ಮಾಧ್ಯಮ (9 ಮತ್ತು 10 ನೇ ತರಗತಿ), ಮತ್ತು ಉತ್ತರ ಮಾಧ್ಯಮ (11 ಮತ್ತು 12 ನೇ ತರಗತಿ) ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಿದೆ. ಮಧ್ಯಂತರ ಹಂತದಲ್ಲಿ, ಚಂದೌಲಿ ಜಿಲ್ಲೆಯ ಶ್ರೀ ಸಂಪೂರ್ಣಾನಂದ ವಿದ್ಯಾಲಯದ ವಿದ್ಯಾರ್ಥಿ ಇರ್ಫಾನ್ 82.71% ಅಂಕಗಳೊಂದಿಗೆ ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬಲ್ಲಿಯಾದಲ್ಲಿನ ಮಹರ್ಷಿ ದಯಾನಂದ ಸರಸ್ವತಿಯ ವಿದ್ಯಾರ್ಥಿ ಆದಿತ್ಯ ಸಿಂಗ್ 92.5% ಅಂಕಗಳೊಂದಿಗೆ ಹೈಸ್ಕೂಲ್ ಮಟ್ಟದಲ್ಲಿ ಅಗ್ರ ಸ್ಕೋರರ್ ಆಗಿದ್ದಾರೆ.

ಪೂರ್ವ ಮಾಧ್ಯಮ 9ನೇ ತರಗತಿ ಪರೀಕ್ಷೆಯಲ್ಲಿ ಒಟ್ಟು 21,313 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 17,428 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅದೇ ರೀತಿ ಪೂರ್ವ ಮಾಧ್ಯಮ 10ನೇ ತರಗತಿ ಪರೀಕ್ಷೆಯಲ್ಲಿ 15,874 ವಿದ್ಯಾರ್ಥಿಗಳು ಹಾಜರಾಗಿದ್ದು, 14,332 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಅಂತೆಯೇ ಉತ್ತರ ಮಾಧ್ಯಮ 11 ನೇ ತರಗತಿಯಲ್ಲಿ ಒಟ್ಟು 13,620 ಪರೀಕ್ಷಾರ್ಥಿಗಳಲ್ಲಿ 11,579 ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅದೇ ರೀತಿ, ಉತ್ತರ ಮಾಧ್ಯಮ 12 ನೇ ತರಗತಿಯಲ್ಲಿ 13,738 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಮತ್ತು 12,243 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಬಲ್ಲಿಯಾದಲ್ಲಿ ಮಹರ್ಷಿ ದಯಾನಂದ ಸರಸ್ವತಿ ಶಾಲೆಯ ವಿದ್ಯಾರ್ಥಿ ಆದಿತ್ಯ ಸಿಂಗ್ 92.5% ಅಂಕಗಳೊಂದಿಗೆ ಹೈಸ್ಕೂಲ್ ಮಟ್ಟದಲ್ಲಿ ಟಾಪರ್ ಆಗಿದ್ದರೆ, ಅಯೋಧ್ಯೆಯ ರುದೌಲಿಯ ಶ್ರೀ ಶಾಂತಿ ನಿಕೇತನದ ವಿದ್ಯಾರ್ಥಿಗಳಾದ ಸಹೋದರರು, ಅಭಿಷೇಕ್ ಪಾಂಡೆ ಮತ್ತು ಅಂಶುಮಾನ್ ಪಾಂಡೆ 91.92% ಮತ್ತು 91.71% ನೊಂದಿಗೆ ಎರಡು ಮತ್ತು ಮೂರನೇ ರ್ಯಾಂಕ್ ಗಳಿಸಿದ್ದಾರೆ.

ಅದೇ ರೀತಿ, ಮಧ್ಯಂತರ ಮಟ್ಟದಲ್ಲಿ, ಚಂದೌಲಿಯ ಶ್ರೀ ಸಂಪೂರ್ಣಾನಂದ ವಿದ್ಯಾಲಯದ ಇರ್ಫಾನ್ 82.71% ಅಂಕಗಳೊಂದಿಗೆ ಅಗ್ರ ರ‍್ಯಾಂಕ್, ಬಲ್ಲಿಯ ಗಂಗೋತ್ರಿ ದೇವಿ ವಿದ್ಯಾಲಯದ ಶಿವದಯಾಳ್ ಗುಪ್ತಾ 80.57% ನೊಂದಿಗೆ ದ್ವಿತೀಯ ಮತ್ತು ಪ್ರತಾಪ್‌ಗಢದ ಶ್ರೀ ರಾಮ್ ತಹಲ್ ವಿದ್ಯಾಲಯದ ವಿಕಾಸ್ ಯಾದವ್ 80.35% ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: CBSE ಬೋರ್ಡ್ ಫಲಿತಾಂಶ ಮೇ 7ರ ಒಳಗೆ ಪ್ರಕಟವಾಗುವ ಸಾಧ್ಯತೆ

ವಿದ್ಯಾರ್ಥಿಗಳು upmsp.edu.in ನಲ್ಲಿ ಫಲಿತಾಂಶಗಳನ್ನು ಪರಿಶೀಲಿಸಬಹುದು.

ಉತ್ತರ ಪ್ರದೇಶ ಮಾಧ್ಯಮಿಕ ಸಂಸ್ಕೃತ ಶಿಕ್ಷಾ ಪರಿಷತ್ ಪರೀಕ್ಷೆಯು ಫೆಬ್ರವರಿ 23 ರಿಂದ ಮಾರ್ಚ್ 20 ರವರೆಗೆ ನಡೆಯಿತು. ಮೌಲ್ಯಮಾಪನ ಕಾರ್ಯವನ್ನು ಮಾರ್ಚ್ 28 ರಿಂದ ನಡೆಸಲಾಯಿತು ಮತ್ತು ಏಪ್ರಿಲ್ 8 ರಂದು ಮುಕ್ತಾಯವಾಯಿತು.

ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ