AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

JEE Advanced Exam Results 2025: ದೀಕ್ಷಾ ವೇದಾಂತುವಿನ ದಕ್ಷ್ ಕರ್ನಾಟಕಕ್ಕೆ ಟಾಪರ್

Deeksha Vedantu students shine in JEE Advanced exams: JEE ಅಡ್ವಾನ್ಸ್ಡ್ 2025 ಪರೀಕ್ಷೆಯಲ್ಲಿ ದೀಕ್ಷಾ ವೇದಾಂತುವಿನ ದಕ್ಷ್ ಅವರು ಕರ್ನಾಟಕದಲ್ಲಿ ಮೊದಲ ರ‍್ಯಾಂಕ್ ಗಳಿಸಿದ್ದಾರೆ. AIR 15 ಪಡೆದುಕೊಂಡಿದ್ದಾರೆ. ವೇದಾಂತುವಿನ ಇನ್ನೂ 137 ವಿದ್ಯಾರ್ಥಿಗಳು ಟಾಪ್ 10,000 ರ‍್ಯಾಂಕ್​​​ಗಳಲ್ಲಿ ಸ್ಥಾನ ಪಡೆದಿದ್ದಾರೆ.

JEE Advanced Exam Results 2025: ದೀಕ್ಷಾ ವೇದಾಂತುವಿನ ದಕ್ಷ್ ಕರ್ನಾಟಕಕ್ಕೆ ಟಾಪರ್
ದಕ್ಷ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 03, 2025 | 5:59 PM

Share

ಬೆಂಗಳೂರು, ಜೂನ್ 3: JEE ಅಡ್ವಾನ್ಸ್ಡ್ 2025 ಪರೀಕ್ಷೆಗಳಲ್ಲಿ ದೀಕ್ಷಾ ವೇದಾಂತು (Deeksha Vedantu) ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಕಂಡಿದ್ದಾರೆ. ದಕ್ಷ್ ತಯಲಿಯಾ ಎನ್ನುವ ವಿದ್ಯಾರ್ಥಿ ಈ ಪರೀಕ್ಷೆಯಲ್ಲಿ ಕರ್ನಾಟಕದ ಟಾಪರ್ ಎನಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಇವರು 15ನೇ ರ‍್ಯಾಂಕ್ ಪಡೆದಿದ್ದಾರೆ. ಗಣಿತ ಪರೀಕ್ಷೆಯಲ್ಲಿ ಅವರು 120ಕ್ಕೆ 120 ಅಂಕ ಪಡೆದು ಗಮನ ಸೆಳೆದಿದ್ದಾರೆ. ದಕ್ಷ್ ಜೊತೆಗೆ ತನ್ನ ಅಕಾಡೆಮಿಯ ಇನ್ನೂ ಹಲವು ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ 10,000ದವರೆಗೆ ರ‍್ಯಾಂಕ್​​ಗಳನ್ನು ಪಡೆದಿದ್ದಾರೆ ಎಂದು ದೀಕ್ಷಾ ವೇದಾಂತು ಸಂಸ್ಥೆ ಹೇಳಿಕೊಂಡಿದೆ.

2025ರ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಕೆಲ ದೀಕ್ಷಾ ವೇದಾಂತು ಮಕ್ಕಳ ಸಾಧನೆ:

  • ದಕ್ಷ್ ತಯಲಿಯಾ (AIR 15): ದೀಕ್ಷಾ ವೇದಾಂತು ಆನ್​​ಲೈನ್ ಪ್ರೋಗ್ರಾಂ
  • ಹೃಷಿಕೇಶ್ ಎಲ್ (AIR 79) : ದೀಕ್ಷಾ ವೇದಾಂತು ಇಂದಿರಾನಗರ ಕೇಂದ್ರ
  • ಪ್ರಖರ್ ಸಿಂಗ್ (AIR 92): ದೀಕ್ಷಾ ವೇದಾಂತು ಆನ್ಲೈನ್ ಪ್ರೋಗ್ರಾಂ
  • ಧನುಷ್ ಕುಮಾರ್ ಎ (AIR 207): ಎಲೆಕ್ಟ್ರಾನಿಕ್ ಸಿಟಿ ಕೇಂದ್ರ
  • ಅನುಭವ್ ಶೈಜೇಶ್ (AIR 390): ಮುಖ್ಯ ಕೇಂದ್ರ
  • ಕೇತನ ಹೆಗಡೆ (AIR 511): ದೀಕ್ಷಾ STEM, ಬನ್ನೇರ್ಘಟ್ಟ ರಸ್ತೆ
  • ಅನುರುದ್ಧ್ ವಿ (AIR 741): ದೀಕ್ಷಾ ವೇದಾಂತು ಇಂದಿರಾನಗರ ಕೇಂದ್ರ

ಒಟ್ಟಾರೆ, ದೀಕ್ಷಾ ವೇದಾಂತು ವಿದ್ಯಾರ್ಥಿಗಳು ಈ ಕೆಳಗಿನಂತೆ ರ‍್ಯಾಂಕ್ಸ್ ಗಳಿಸಿದ್ದಾರೆ:

  • ಟಾಪ್ 100 ರ‍್ಯಾಂಕ್ಗಳಲ್ಲಿ 8
  • ಟಾಪ್ 500 ರ‍್ಯಾಂಕ್ಗಳಲ್ಲಿ 20
  • ಟಾಪ್ 1,000 ರ‍್ಯಾಂಕ್ಗಳಲ್ಲಿ 21
  • ಟಾಪ್ 2,000 ರ‍್ಯಾಂಕ್ಗಳಲ್ಲಿ 41
  • ಟಾಪ್ 5,000 ರ‍್ಯಾಂಕ್ಗಳಲ್ಲಿ 83
  • ಟಾಪ್ 10,000 ರ‍್ಯಾಂಕ್ಗಳಲ್ಲಿ 138

ಅಂಕಿಅಂಶಗಳಾಚೆಗಿನ ಕಥೆಗಳು, ಒಳನೋಟಗಳು

ದೀಕ್ಷಾ ವೇದಾಂತು ಸಹ-ಸ್ಥಾಪಕರಾದ ಡಾ. ಜಿ ಶ್ರೀಧರ್ ಅವರು ಜೆಇಇ ಅಡ್ವಾನ್ಸ್ಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ತಮ್ಮ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

“ನಮ್ಮ ವಿದ್ಯಾರ್ಥಿಗಳ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ಈ ಫಲಿತಾಂಶಗಳು ಕೇವಲ ಅವರ ಶ್ರಮವಲ್ಲ, ದೀಕ್ಷಾ ವೇದಾಂತು ಶೈಕ್ಷಣಿಕ ಪದ್ದತಿಯ ಶಕ್ತಿಯ ಪ್ರತಿಬಿಂಬವಾಗಿದೆ. ನಮ್ಮ ಸುವ್ಯವಸ್ಥಿತ ಪಠ್ಯಕ್ರಮಗಳು, ಪರಿಣತಿ ಮಾರ್ಗದರ್ಶನ, ಮೌಲ್ಯಮಾಪನಗಳು ಮತ್ತು ತಂತ್ರಜ್ಞಾನ ಆಧಾರಿತ ಪರಿಕಲ್ಪನೆಗಳು ವಿದ್ಯಾರ್ಥಿಗಳನ್ನು ತಾವು ಸಾಧಿಸಬಹುದಾದ ಮಟ್ಟಕ್ಕೆ ತಲುಪಿಸಲು ಸಹಾಯ ಮಾಡಿವೆ. ಹೆತ್ತವರ ನಂಬಿಕೆಗಾಗಿ ನಾವು ಋಣಿ ಆಗಿದ್ದೇವೆ. ಮತ್ತು ಈ ಪೈಕಿ ಪ್ರತಿಯೊಬ್ಬ ವಿದ್ಯಾರ್ಥಿಯ ಧೈರ್ಯ ಮತ್ತು ನಿಷ್ಠೆಗೆ ಅಭಿನಂದನೆಗಳು” ಎಂದು ಡಾ. ಶ್ರೀಧರ್ ಜಿ ಹೇಳಿದ್ದಾರೆ.

ಆನಂದ್ ಪ್ರಕಾಶ್, ವೇದಾಂತು ಸಹ-ಸ್ಥಾಪಕ ಮತ್ತು ಅಕಾಡೆಮಿಕ್ಸ್ ಮುಖ್ಯಸ್ಥ ಹೇಳಿದ್ದಿದು:

“ನಾವು ವಿದ್ಯಾರ್ಥಿಗಳನ್ನು ಒತ್ತಡಕ್ಕೆ ತರುವುದಲ್ಲ, ಅವರಿಗೂ ಬೇಕಾದ ಮಾರ್ಗದರ್ಶನ, ಉಪಕರಣಗಳನ್ನು ನೀಡುವುದೇ ಮುಖ್ಯ. ದಕ್ಷ್ ಅವರ ಕರ್ನಾಟಕ ರ‍್ಯಾಂಕ್ 1 ಮತ್ತು ಇತರ ವಿದ್ಯಾರ್ಥಿಗಳ ಯಶಸ್ಸು ನಮ್ಮ ನಿಲುವು ಸರಿಯಾಗಿದೆಯೆಂಬುದನ್ನು ತೋರಿಸುತ್ತದೆ. ಈ ಸಾಧನೆ ಸಾಧ್ಯವಾಗಿಸಿದ ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಹೃತ್ಪೂರ್ವಕ ಅಭಿನಂದನೆಗಳು.”

ದಕ್ಷ್ ತಯಲಿಯಾ, ಕರ್ನಾಟಕದ ರಾಜ್ಯದ ಟಾಪರ್ (AIR 15) ಹೇಳುವುದಿದು:

“ಈ ಪ್ರಯಾಣ ತೃಪ್ತಿಕರವಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು, ದಾರಿ ತೋರಿಸಿದ ಮತ್ತು ಪ್ರೋತ್ಸಾಹಿಸಿದ ವೇದಾಂತು ಶಿಕ್ಷಕರಿಗೆ ಧನ್ಯವಾದಗಳು. AIR 15 ಗಳಿಸಿ ಕರ್ನಾಟಕವನ್ನು ಟಾಪ್ ಮಾಡಿರುವುದು ನನಗೆ ಇನ್ನೂ ನಂಬಲಾಗುತ್ತಿಲ್ಲ. ವೈಯಕ್ತಿಕ ಮಾರ್ಗದರ್ಶನ ಮತ್ತು ರಚನಾತ್ಮಕ ಬೆಂಬಲ ವ್ಯವಸ್ಥೆ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.”

ದೀಕ್ಷಾ ವೇದಾಂತು ಸಂಸ್ಥೆ ಕುರಿತು

25 ವರ್ಷಗಳಷ್ಟು ಕಾಲದ ಶೈಕ್ಷಣಿಕ ಪ್ರಯಾಣದಲ್ಲಿ ದೀಕ್ಷಾ ವೇದಾಂತು ಶೈಕ್ಷಣಿಕ ಶ್ರೇಷ್ಠತೆಗೆ ಪ್ರತೀಕವಾಗಿದೆ. JEE, NEET ಮತ್ತು KCET ಮುಂತಾದ ಭಾರತದ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ತರುವಲ್ಲಿ ಇದು ನಿರಂತರವಾಗಿ ಮುಂಚೂಣಿಯಲ್ಲಿದೆ. JEE ಅಡ್ವಾನ್ಸ್ಡ್ 2025ರ ಫಲಿತಾಂಶದಲ್ಲಿ ದೀಕ್ಷಾ ವೇದಾಂತು ವಿದ್ಯಾರ್ಥಿಗಳ ಈ ಅದ್ಭುತ ಪ್ರದರ್ಶನವು ಸಂಸ್ಥೆಯ ಈ ಶ್ರೇಷ್ಠತೆಯ ಪರಂಪರೆಯ ಮತ್ತೊಂದು ಮೈಲಿಗಲ್ಲು ಎನ್ನಬಹುದು.

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ