ಜೆಇಇ ಮುಖ್ಯ ಪರೀಕ್ಷೆ 2021 (JEE Main 2021)ರ ನಾಲ್ಕನೇ ಸೆಶನ್ಸ್ನ ಪರೀಕ್ಷೆಯ ಪ್ರವೇಶ ಪತ್ರವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency-NTA) ಬಿಡುಗಡೆ ಮಾಡಿದ್ದು, ಪರೀಕ್ಷಾರ್ಥಿಗಳು ತಮ್ಮ ಪ್ರವೇಶ ಪತ್ರ (Admit Card)ವನ್ನು jeemain.nta.nic.in ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಜೆಇಇ ಮುಖ್ಯ ಪರೀಕ್ಷೆಯ ನಾಲ್ಕನೇ (ಕೊನೇ) ಹಂತದ ಪರೀಕ್ಷೆಗಳನ್ನು ಆಗಸ್ಟ್ 26, 27, 31 ಮತ್ತು ಸೆಪ್ಟೆಂಬರ್ 1, 2ರಂದು ನಡೆಸಲು ಎನ್ಟಿಎ (NTA) ನಿರ್ಧರಿಸಿದ್ದು, ಈ ಹಂತದಲ್ಲಿ 7.3 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಅಡ್ಮಿಟ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳುವ ಸರಳ ವಿಧಾನ ಇಲ್ಲಿದೆ..
1. ಮೊದಲು ಜೆಇಇ ಅಧಿಕೃತ ವೆಬ್ಸೈಟ್ jeemain.nta.nic.in.ಗೆ ಲಾಗಿನ್ ಆಗಿ
2. ಅದರಲ್ಲಿ Download JEE (Main) 2021 (Session – 4) Admit Card Paper (BE/B Tech/B Arch/ B Plan) ಎಂಬ ಹೆಸರಿನಲ್ಲಿ ಮೂರು ಲಿಂಕ್ಗಳು ಕಾಣಿಸುತ್ತವೆ. ನೀವು ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು
3. ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
4. ಅದರಲ್ಲಿ ನಿಮ್ಮ ಅಪ್ಲಿಕೇಶನ್ ನಂಬರ್, ಪರೀಕ್ಷೆಯ ಸೆಶನ್ಸ್, ಹುಟ್ಟಿದ ದಿನ, ಸೆಕ್ಯೂರಿಟಿ ಪಿನ್ಗಳನ್ನು ಕೇಳಲಾಗುತ್ತದೆ. ಅದನ್ನು ತುಂಬಿ, Submit ಎಂಬಲ್ಲಿ ಕ್ಲಿಕ್ ಮಾಡಿ.
5. ಆಗ ಸ್ಕ್ರೀನ್ ಮೇಲೆ ನಿಮ್ಮ ಪ್ರವೇಶ ಪತ್ರ ಕಾಣಿಸುತ್ತದೆ.
6. ಅದನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಜಂಟಿ ಪ್ರವೇಶ ಪರೀಕ್ಷೆಯನ್ನು ಈ ಬಾರಿ ನಾಲ್ಕು ಹಂತಗಳಲ್ಲಿ ನಡೆಸಲಾಗಿದೆ. ಒಂದು ಮತ್ತು 2ನೇ ಹಂತ ಫೆಬ್ರವರಿ ಹಾಗೂ ಮಾರ್ಚ್ನಲ್ಲಿ ನಡೆದಿತ್ತು. ಆದರೆ ಕೊರೊನಾ ಕಾರಣದಿಂದ ಮೂರು ಮತ್ತು ನಾಲ್ಕನೇ ಹಂತದ ಪರೀಕ್ಷೆ ನಡೆಸಲು ಹಿನ್ನಡೆಯಾಗಿತ್ತು. ಜೆಇಇ ಮುಖ್ಯ ಪರೀಕ್ಷೆ ಸೆಶನ್ಸ್ 3ನ್ನು ಜುಲೈನಲ್ಲಿ ನಡೆಸಲಾಗಿದ್ದು, ಇದೀಗ ನಾಲ್ಕನೇ ಹಂತದ ಪರೀಕ್ಷೆ ಆಗಸ್ಟ್ 26ರಿಂದ ನಡೆಯಲಿದೆ. ದೇಶದಲ್ಲಿ ಕೊರೊನಾ ಸ್ವಲ್ಪ ತಗ್ಗಿದ್ದು, ಲಸಿಕೆ ಅಭಿಯಾನವೂ ನಡೆಯುತ್ತಿದೆ. ಕೊವಿಡ್ 19 ಸಂಬಂಧಪಟ್ಟ ಎಲ್ಲ ಮಾರ್ಗಸೂಚಿಗಳನ್ನೂ ಅನುಸರಿಸಿಯೇ ಪರೀಕ್ಷೆ ನಡೆಸುವುದಾಗಿ ಎನ್ಟಿಎ ತಿಳಿಸಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಮರದ ದಿಮ್ಮಿಗಳನ್ನು ಹೊತ್ತ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಿಸಿ ಪಲ್ಟಿ; ಜಿಗಿದು ಬಚಾವಾದ ಚಾಲಕ