ಚಿಕ್ಕಮಗಳೂರು: ಮರದ ದಿಮ್ಮಿಗಳನ್ನು ಹೊತ್ತ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಿಸಿ ಪಲ್ಟಿ; ಜಿಗಿದು ಬಚಾವಾದ ಚಾಲಕ
ಹಿಂಬದಿ ಚಕ್ರಕ್ಕೆ ಕಲ್ಲು ಕೊಟ್ಟಿದ್ದರೂ ಏರು ಹತ್ತಲಾಗದೆ ಟ್ರ್ಯಾಕ್ಟರ್ ಹಿಂದೆ ಬಂದಿದ್ದು ಸುತ್ತಲೂ ನಿಂತಿದ್ದವರು ನೋಡುತ್ತಿರುವಾಗಲೇ ಹಿಮ್ಮುಖವಾಗಿ ಚಲಿಸಿ ಪಲ್ಟಿ ಹೊಡೆದಿದೆ. ಗಾಡಿ ಹಿಂದೆ ಹೋಗುತ್ತಿದ್ದಂತೆಯೇ ಚಾಲಕ ಕೆಳಗೆ ಜಿಗಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕಮಗಳೂರು: ಮರದ ದಿಮ್ಮಿಗಳನ್ನು ಹೊತ್ತು ಸಾಗುತ್ತಿದ್ದ ಟ್ರ್ಯಾಕ್ಟರ್ನ ಬ್ರೇಕ್ ಫೇಲ್ಯೂರ್ ಆಗಿ ನೋಡನೋಡುತ್ತಲೇ ಪಲ್ಟಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯಲ್ಲಿ ನಡೆದಿದೆ. ಟ್ರ್ಯಾಕ್ಟರ್ನಲ್ಲಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಕಾರಣ ಲೋಡ್ ಹೆಚ್ಚಾಗಿದ್ದು, ರಸ್ತೆಯಲ್ಲಿ ಒಂದು ತಿರುವನ್ನು ದಾಟಿ ತುಸು ಏರು ಪ್ರದೇಶದಲ್ಲಿ ಹತ್ತುವಾಗ ಟ್ರ್ಯಾಕ್ಟರ್ ನಿಂತಿದೆ. ನಂತರ ಚಾಲಕ ಎಷ್ಟೇ ಪ್ರಯತ್ನಿಸಿದರೂ ಮುಂದೆ ಹೋಗಿಲ್ಲ. ಹಿಂಬದಿ ಚಕ್ರಕ್ಕೆ ಕಲ್ಲು ಕೊಟ್ಟಿದ್ದರೂ ಏರು ಹತ್ತಲಾಗದೆ ಟ್ರ್ಯಾಕ್ಟರ್ ಹಿಂದೆ ಬಂದಿದ್ದು ಸುತ್ತಲೂ ನಿಂತಿದ್ದವರು ನೋಡುತ್ತಿರುವಾಗಲೇ ಹಿಮ್ಮುಖವಾಗಿ ಚಲಿಸಿ ಪಲ್ಟಿ ಹೊಡೆದಿದೆ. ಗಾಡಿ ಹಿಂದೆ ಹೋಗುತ್ತಿದ್ದಂತೆಯೇ ಚಾಲಕ ಕೆಳಗೆ ಜಿಗಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಲ್ಲದೇ, ಟ್ರ್ಯಾಕ್ಟರ್ ಹಿಂಭಾಗದಲ್ಲಿ ಕೆಲ ಜನರು ರಸ್ತೆಯಲ್ಲೇ ನಿಂತಿದ್ದರು. ಅದೃಷ್ಟವಶಾತ್, ಗಾಡಿ ಚಾಲಕನ ನಿಯಂತ್ರಣ ತಪ್ಪುತ್ತಿದ್ದಂತೆಯೇ ಅವರೂ ಅಲ್ಲಿಂದ ಓಡಿದ್ದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಹಿಮ್ಮುಖವಾಗಿ ಚಲಿಸಿದ ಟ್ರ್ಯಾಕ್ಟರ್ ಪಲ್ಟಿಯಾಗುವ ಮೊದಲು ಅದರ ಕೆಳ ಭಾಗದಲ್ಲಿ ಪಟಾಕಿ ಸಿಡಿದ ರೀತಿಯಲ್ಲೇ ಸದ್ದು ಬಂದಿದ್ದು ನೆರೆದಿದ್ದವರು ಗಾಬರಿಯಾಗಿದ್ದಾರೆ. ಘಟನೆಯಲ್ಲಿ ಯಾರಿಗೂ ಜೀವಹಾನಿಯಾಗಿಲ್ಲ.
ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆಯಲ್ಲಿ ಬೈಕ್ಗೆ ಬೆಂಕಿ ಆನೇಕಲ್: ಕೇಂದ್ರ ಸಚಿವ ನಾರಾಯಣಸ್ವಾಮಿ ಅವರ ಜನಾಶೀರ್ವಾದ ಯಾತ್ರೆ ವೇಳೆ ಪಟಾಕಿ ಸಿಡಿಸುವಾಗ ಅಚಾತುರ್ಯದಿಂದ ಬೈಕ್ಗೆ ಬೆಂಕಿ ತಗುಲಿ ಅದು ಹೊತ್ತಿ ಉರಿದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಕೇಂದ್ರ ಸಚಿವರಾದ ನಾರಾಯಣಸ್ವಾಮಿ ಅವರು ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಅವರನ್ನು ಸ್ವಾಗತಿಸಲು ಪಟಾಕಿ ಸಿಡಿಸಿದ ಪರಿಣಾಮ ಅನಾಹುತ ಸಂಭವಿಸಿದೆ.
ವಿಜಯೋತ್ಸವ ಮಾಡುತ್ತಿದ್ದ ವೇಳೆ ಪಟಾಕಿ ಹಚ್ಚಿದ ಬಿಜೆಪಿ ಕಾರ್ಯಕರ್ತರು ಬೈಕ್ಗೆ ಬೆಂಕಿ ತಗುಲಿತ್ತಿದ್ದಂತೆಯೇ ತಕ್ಷಣ ಎಚ್ಚೆತ್ತು ಬೆಂಕಿ ನಂದಿಸಲು ಧಾವಿಸಿದ್ದಾರೆ. 220 ಪಲ್ಸರ್ ಬೈಕ್ಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರ್ಯಕರ್ತರು ತಕ್ಷಣ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಅದೃಷ್ಟವಶಾತ್ ಕೂಡಲೇ ಎಲ್ಲರೂ ಎಚ್ಚೆತ್ತುಕೊಂಡ ಕಾರಣ ಬೇರೆ ಯಾವುದೇ ರೀತಿಯ ಅವಘಡ ಸಂಭವಿಸಿಲ್ಲ.
ಇದನ್ನೂ ಓದಿ: ಕುಣಿದು ಕುಪ್ಪಳಿಸಿ ಪಟಾಕಿ ಹೊಡೆದು ಸಂಭ್ರಮಿಸಿದ ಮಂಜು ಪಾವಗಡ ಅಭಿಮಾನಿಗಳು; ಸಂಭ್ರಮಾಚರಣೆಯ ಝಲಕ್ ಇಲ್ಲಿದೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಟ್ಯಾಂಕರ್; ಬೆಂಕಿ ನಂದಿಸಿ, ಆತಂಕ ದೂರ ಮಾಡಿದ ಅಗ್ನಿ ಶಾಮಕ ಸಿಬ್ಬಂದಿ
(Tractor roll over due to brake failure in Chikmagalur Lucky driver escaped)
Published On - 3:37 pm, Sun, 22 August 21