ಮೂರು ಪತ್ನಿಯರನ್ನ ಬಿಟ್ಟು ಇನ್ನೊಬ್ಬ ಮಹಿಳೆ ಜತೆ ಪರಾರಿ; ದೇವರ ಹೆಸರಲ್ಲಿ ಮೋಸ
ತಾನೂ ಮಂತ್ರವಾದಿ ಅಂತಾ ಅಮಾಯಕ ಜನರನ್ನ ನಂಬಿಸುವ ಹೈದರ್ ಹೆಚ್ಚಾಗಿ ಟಾರ್ಗೆಟ್ ಮಾಡೋದು ಯುವತಿಯರನ್ನ, ಮಹಿಳೆಯರನ್ನ.
ಚಿಕ್ಕಮಗಳೂರು: ಸಹಜವಾಗಿ ಒಬ್ಬರನ್ನ ಮದುವೆಯಾಗಿ ಬಿಟ್ಟು ಮತ್ತೊಬ್ಬರನ್ನ ಮದುವೆಯಾಗಿರುವುದು ಕೇಳಿದ್ದೀವಿ. ಆದರೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರು ನಿವಾಸಿ ಯೂಸುಫ್ ಹೈದರ್ ಎಂಬುವವನು ಮೂರು ಮದುವೆಯಾಗಿ ನಾಲ್ಕನೇಯವಳೊಂದಿಗೆ ಪರಾರಿಯಾಗಿದ್ದಾನೆ. ಕಳಸ ಪಟ್ಟಣದ ಮಹಿಳೆ ಜೊತೆ ಮದುವೆಗೆ ಸಿದ್ಧತೆ ನಡೆಸುತ್ತಿರುವ ವಿಚಾರ ಗೊತ್ತಾದಾಗ ಬಾಳೆಹೊನ್ನೂರು ಬಿಟ್ಟು ಆ ಮಹಿಳೆ ಜೊತೆ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಮಹಿಳೆಯ ತಂದೆಯಿಂದ ದೂರು ದಾಖಲಾಗಿದ್ದು, ಯೂಸುಫ್ ಹೈದರ್ ತಾನು ಮಂತ್ರವಾದಿ ಅಂತಾ ಜನರನ್ನ ನಂಬಿಸಿದ್ದನಂತೆ.
ಮದುವೆಯಾಗೋದೇ ಚಟ ಎಲ್ಲರಿಗೂ ಮದುವೆ ಅನ್ನೋದು ಹೊಸ ಜೀವನಕ್ಕೆ ಕಾಲಿಡುವ ಸಂಭ್ರಮವಾದರೆ ಯೂಸುಫ್ ಹೈದರ್ಗೆ ಮದುವೆಯಾಗೋದು ಒಂದು ರೀತಿಯ ಚಟ. ಮೊದಲು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಮಹಿಳೆಯೊಬ್ಬರನ್ನ ವರಿಸಿದ ಈತ, ಆಕೆಗೆ ಎರಡು ಮಕ್ಕಳು ಜನಿಸಿದ ಬಳಿಕ ದೂರವಾದ. ಬಳಿಕ ಜಿಲ್ಲೆಯ ಮೂಡಿಗೆರೆಯ ಮಹಿಳೆಯೊಬ್ಬರನ್ನ ಮದುವೆಯಾಗುತ್ತಾನೆ. ಆಕೆಯೊಂದಿಗೂ ಜೀವನ ನಡೆಸಿದ್ದು ಕೇವಲ 6 ತಿಂಗಳು ಮಾತ್ರ. ಆ ಬಳಿಕ ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ಮಹಿಳೆ ಜೊತೆ ಮೂರನೇ ಮದುವೆಯಾಗಿ ನಾಲ್ಕು ವರ್ಷ ಸಂಸಾರ ಮಾಡುತ್ತಾನೆ. ಆಕೆಗೆ ಒಂದು ಹೆಣ್ಣು ಮಗುವಿದೆ. ಆದರೆ ಇದೀಗ ನಾಲ್ಕನೆ ಮಹಿಳೆ ಜೊತೆ ಮದುವೆಗೆ ಮುಂದಾಗಿದ್ದಾನೆ. ಮೋಸಗಾರ ಮಂತ್ರವಾದಿ ಜೊತೆ ಮದುವೆಯಾಗಲು ಆಕೆ ಕೂಡ ಮುಂದೆ ಬಂದಿದ್ದಾಳೆ. ಆಕೆಗೂ ಕೂಡ ನೊಂದ ಪತ್ನಿಯರು ಹೈದರ್ ನಿಜ ಬಣ್ಣದ ಬಗ್ಗೆ ತಿಳಿಸಿದ್ದಾರೆ.
ದೇವರ ಹೆಸರಲ್ಲಿ ಮೋಸ ತಾನೂ ಮಂತ್ರವಾದಿ ಅಂತಾ ಅಮಾಯಕ ಜನರನ್ನ ನಂಬಿಸುವ ಹೈದರ್ ಹೆಚ್ಚಾಗಿ ಟಾರ್ಗೆಟ್ ಮಾಡೋದು ಯುವತಿಯರನ್ನ, ಮಹಿಳೆಯರನ್ನ. ಚಿಕ್ಕ ಚಿಕ್ಕ ಸಮಸ್ಯೆಗಳಿಂದ ಬಳಲುತ್ತಿರುವ ದುರ್ಬಲ ಮನಸ್ಸಿನವರನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡು ನಿಮ್ಮ ಕಷ್ಟವನ್ನ ನಾನು ಸರಿ ಮಾಡುತ್ತೇನೆ ಎಂದು ವಶೀಕರಣ ಮಾಡುವುದು ಈತನಿಗೆ ಸುಲಭವಾಗಿ ಬರುತ್ತಂತೆ. ಹೀಗಾಗಿ ಈತ ಸಹಜವಾಗಿ ಟಾರ್ಗೆಟ್ ಮಾಡೋದು ಯುವತಿಯರು, ಮಹಿಳೆಯರನ್ನೇ ಹೆಚ್ಚು ಅಂತ ಮೋಸ ಹೋದ ಮೂರನೇ ಪತ್ನಿ ತಿಳಿಸಿದ್ದಾರೆ. ಅಲ್ಲದೇ ದೇವರ ಹೆಸರಲ್ಲಿ ಯುವತಿಯರನ್ನ ದೈಹಿಕವಾಗಿ ಬಳಸಿಕೊಂಡಿದ್ದಾನೆ ಅಂತಾ ಪತ್ನಿಯರು ಆರೋಪಿಸಿದ್ದಾರೆ.
ಜೀವನ ಮಾಡೋದು ಹೇಗೆ? ಮೊದಲ ಪತ್ನಿ ಹೈದರ್ ಕಿರುಕುಳನಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದರೆ, ಎರಡನೇ ಪತ್ನಿ ಈತನನ್ನ ಮದುವೆಯಾಗಿದ್ದ ತಪ್ಪಿಗೆ ಈಗಲೂ ಬೇರೆಯವರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುವಂತಾಗಿದೆ. ಇನ್ನೂ ಮೂರನೇ ಪತ್ನಿ ದಿಕ್ಕಿಲ್ಲದೆ ಪುಟ್ಟ ಹೆಣ್ಣು ಮಗುವಿನ ಜೊತೆ ತವರು ಮನೆ ಸೇರಿದ್ದಾಳೆ. ಇವರೆಲ್ಲರೂ ನಾವು ಜೀವನ ಮಾಡೋದು ಹೇಗೆ ಅಂತ ಕಣ್ಣೀರು ಹಾಕಿದ್ದಾರೆ.
ಈತನಿಂದ ಮೋಸ ಹೋಗಿರುವ ಮಂಗಳೂರು ಮೂಲದ ಯುವತಿ ಈತನ ವಿರುದ್ಧ ದೂರು ದಾಖಲಿಸಿ, ವಾರೆಂಟ್ ಕೂಡ ಕಳಿಸಿದ್ದಾಳೆ. ಇಷ್ಟಾದರೂ ಈತ ಮಹಿಳೆಯರ ಜೀವನದಲ್ಲಿ ಚೆಲ್ಲಾಟ ಆಡುವುದನ್ನು ಬಿಟ್ಟಿಲ್ಲ. ಸದ್ಯ ಕಳಸ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಾಗಿದ್ದು, ನಮಗೆ ನ್ಯಾಯ ಕೊಡಿಸಿ ಅಂತಾ ಮೋಸ ಹೋದ ಪತ್ನಿಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ
ನಟಿಯ ಜತೆ ಮನ ಬಂದಂತೆ ಡ್ಯಾನ್ಸ್ ಮಾಡಿ ಕಾಲಿಗೆ ನಮಸ್ಕರಿಸಿದ ಆರ್ಜಿವಿ; ವಿಡಿಯೋ ವೈರಲ್
35 ಅಡಿಕೆ ಮರ ಕಡಿದ ದುಷ್ಕರ್ಮಿಗಳು; ದೂರು ನೀಡಿದರೂ ಕ್ರಮ ಕೈಗೊಳ್ಳದೆ ಪೊಲೀಸರ ನಿರ್ಲಕ್ಷ್ಯ
(Chikmagalur man has escaped with another woman leaving behind three wives)
Published On - 2:19 pm, Mon, 23 August 21