AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಟ್ಯಾಂಕರ್; ಬೆಂಕಿ ನಂದಿಸಿ, ಆತಂಕ ದೂರ ಮಾಡಿದ ಅಗ್ನಿ ಶಾಮಕ ಸಿಬ್ಬಂದಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ನೆನ್ನೆ ಮಧ್ಯಾಹ್ನ ನಡೆದ ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಲಾರಿಯಲ್ಲಿ‌ ಬೆಂಕಿ‌ ಕಾಣಿಸುತ್ತಲೇ ಲಾರಿ ನಿಲ್ಲಿಸಿದ ಚಾಲಕ ಕೂಡಲೇ ಸ್ಥಳೀಯರ ನೆರವಿನಿಂದ ಬೆಂಕಿ ಆರಿಸಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಟ್ಯಾಂಕರ್; ಬೆಂಕಿ ನಂದಿಸಿ, ಆತಂಕ ದೂರ ಮಾಡಿದ ಅಗ್ನಿ ಶಾಮಕ ಸಿಬ್ಬಂದಿ
ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಟ್ಯಾಂಕರ್
TV9 Web
| Edited By: ಆಯೇಷಾ ಬಾನು|

Updated on: Aug 20, 2021 | 9:49 AM

Share

ಹಾಸನ: ಮಂಗಳೂರಿನಿಂದ ಬೆಂಗಳೂರಿಗೆ ಆಯಿಲ್ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಇಂಜಿನ್ನಲ್ಲಿ ದಿಡೀರ್ ಬೆಂಕಿ ಕಾಣಿಸುಕೊಂಡು ಹೊತ್ತಿ ಉರಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ನೆನ್ನೆ ಮಧ್ಯಾಹ್ನ ನಡೆದ ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಲಾರಿಯಲ್ಲಿ‌ ಬೆಂಕಿ‌ ಕಾಣಿಸುತ್ತಲೇ ಲಾರಿ ನಿಲ್ಲಿಸಿದ ಚಾಲಕ ಕೂಡಲೇ ಸ್ಥಳೀಯರ ನೆರವಿನಿಂದ ಬೆಂಕಿ ಆರಿಸಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ದೊಡ್ಡ ಟ್ಯಾಂಕರ್ನಲ್ಲಿ ಅಡುಗೆ ಆಯಿಲ್ ಇದ್ದುದರಿಂದ ಇಂಜಿನ್ ನಿಂದ ಬೆಂಕಿ ಹಿಂದಿನ ಟ್ಯಾಂಕ್ ಗೂ ಆವರಿಸೋ ಸಾಧ್ಯತೆ ಹೆಚ್ಚಿತ್ತು.

ಆದ್ರೆ ಟ್ಯಾಂಕ್ಗೆ ಬೆಂಕಿ ಆವರಿಸುವ ಮುನ್ನವೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕೂಡಲೆ ಬೆಂಕಿ‌ ನಂದಿಸಿ ನಡೆಯಬಹುದಾದ ಅಪಾಯ ತಪ್ಪಿಸಿದ್ರು. ಈ ಮಾರ್ಗದಲ್ಲಿ ಗ್ಯಾಸ್ ಹಾಗು ಪೆಟ್ರೋಲ್ ಡೀಸಲ್ ಟ್ಯಾಂಕರ್ ಗಳೂ ಕೂಡ ಸಂಚಾರ ಮಾಡೋದ್ರಿಂದ ಲಾರಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಆತಂಕಕ್ಕೆ ಕಾರಣವಾಗಿತ್ತು. ಆದ್ರೆ ಸಕಲೇಶಪುರದಿಂದ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಆತಂಕ ನಿವಾರಿಸಿದ್ರು.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಫ್ಘಾನಿಸ್ತಾನಕ್ಕೆ ತೆರಳಿ ಎಂದು ಉತ್ತರಿಸಿದ ಬಿಜೆಪಿ ನಾಯಕ

Follow Us
TV9 Web
TV9 Web

TV9 Kannada

Read More