‘ಕೆಬಿಸಿ’ಯಲ್ಲಿ 5 ಕೋಟಿ ರೂ ಗೆದ್ದ ನಂತರ ಪ್ರಪಾತಕ್ಕೆ ಬಿದ್ದ ಬದುಕು; ನಂತರ ಏನಾಯಿತು? ಸುಶೀಲ್ ತೆರೆದಿಟ್ಟ ಜೀವನ ಕತೆ ಇಲ್ಲಿದೆ

KBC: ರಾತ್ರೋರಾತ್ರಿ ಯಶಸ್ಸು ಸಿಕ್ಕರೂ, ಕೆಲವೊಮ್ಮೆ ಬದುಕು ಅಷ್ಟೊಂದು ಸುಂದರವಾಗಿರುವುದಿಲ್ಲ. ಸಿಕ್ಕ ಯಶಸ್ಸನ್ನು ಸರಿಯಾಗಿ ವಿನಿಯೋಗಿಸುವುದು ಹಾಗೂ ಹಣವಿದ್ದರೂ ಮನಸ್ಸಿನ ಮಾತನ್ನು ಕೇಳುವುದು ಬಹಳ ಮುಖ್ಯ. ಇಲ್ಲವೆಂದಾದರೆ ಬದುಕಿನಲ್ಲಿ ಕಠಿಣ ಸನ್ನಿವೇಶಗಳು ಎದುರಾಗುತ್ತವೆ. ಅಂತಹ ಒಂದು ಪ್ರಕರಣದ ಜೀವಂತ ಉದಾಹರಣೆ ಕೆಬಿಸಿಯಲ್ಲಿ 5 ಕೋಟಿ ರೂ ಗೆದ್ದ ಸುಶೀಲ್ ಕುಮಾರ್. ಅವರ ಯಶಸ್ಸು, ಸೋಲು, ಸತ್ಯದ ಅರಿವಿನ ಕತೆ ಇಲ್ಲಿದೆ.

‘ಕೆಬಿಸಿ’ಯಲ್ಲಿ 5 ಕೋಟಿ ರೂ ಗೆದ್ದ ನಂತರ ಪ್ರಪಾತಕ್ಕೆ ಬಿದ್ದ ಬದುಕು; ನಂತರ ಏನಾಯಿತು? ಸುಶೀಲ್ ತೆರೆದಿಟ್ಟ ಜೀವನ ಕತೆ ಇಲ್ಲಿದೆ
ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ಪತ್ನಿ ಹಾಗೂ ಅಮಿತಾಭ್ ಬಚ್ಚನ್ ಜೊತೆ ಸುಶೀಲ್ ಕುಮಾರ್
Follow us
TV9 Web
| Updated By: shivaprasad.hs

Updated on: Aug 22, 2021 | 4:04 PM

ಬಾಲಿವುಡ್​ನ ಬಿಗ್​ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್​ಪತಿ’ಯಲ್ಲಿ ಮೊದಲ ಬಾರಿಗೆ 5 ಕೋಟಿ ಗೆದ್ದ ಸ್ಪರ್ಧಿಯ ಹೆಸರು ಸುಶೀಲ್ ಕುಮಾರ್. ಅವರು ಕಳೆದ ವರ್ಷ ಹಂಚಿಕೊಂಡಿದ್ದ ಒಂದು ಪೋಸ್ಟ್ ಎಲ್ಲರ ಗಮನ ಸೆಳೆದಿತ್ತು. ಅದರಲ್ಲಿ ಅವರು ಕೋಟ್ಯಾಧಿಪತಿಯ ಒಡೆಯನಾಗಿದ್ದರಿಂದ ರಾತ್ರೋ ರಾತ್ರಿ ಲಭಿಸಿದ ಪ್ರಸಿದ್ಧಿ ಅವರ ಬದುಕಿನಲ್ಲಿ ಎಂತಹ ಅನಾಹುತವನ್ನು ಸೃಷ್ಟಿಸಿತ್ತು ಎಂಬುದನ್ನು ಬರೆದುಕೊಂಡಿದ್ದರು. 2011ರ ‘ಕೆಬಿಸಿ’ ಶೋನಲ್ಲಿ ಗೆದ್ದ ನಂತರ ಹಣವನ್ನು ಉದ್ಯಮಕ್ಕಾಗಿ ಬಳಸಿದ್ದು, ಸಹವರ್ತಿಗಳಿಂದ ಸತತವಾಗಿ ಮೋಸಕ್ಕೊಳಗಾಗಿದ್ದು ಹಾಗೂ ಅದರಿಂದ ಕುಡಿತದ ದಾಸನಾಗಿದ್ದು, ಈ ಎಲ್ಲಾ ಕಾರಣಗಳಿಂದ ಕುಟುಂಬ ದೂರವಾಗಿದ್ದು.. ಈ ಘಟನೆಗಳನ್ನು ಅವರು ಪೋಸ್ಟ್ ಮೂಲಕ ಹಂಚಿಕೊಂಡಿದ್ದರು.

ಸುಶೀಲ್ ಕುಮಾರ್ ಬದುಕು ಕೋಟ್ಯಾಧಿಪತಿಯಾದ ನಂತರ ಪ್ರಪಾತಕ್ಕೆ ಬಿದ್ದಿದ್ದು ಹೇಗೆ?

‘ಕೌನ್ ಬನೇಗಾ ಕರೋಡ್​ಪತಿ’ಯಲ್ಲಿ ಭಾಗವಹಿಸಿದ್ದ ಸುಶೀಲ್ ಕುಮಾರ್, ಇಡೀ ಸ್ಪರ್ಧೆಯ ಇತಿಹಾಸದಲ್ಲೇ ಮೊದಲ ಬಾರಿಗೆ 5 ಕೋಟಿ ರೂ ಗೆದ್ದ ಇತಿಹಾಸ ನಿರ್ಮಿಸಿದ್ದರು. ಅದರ ನಂತರ ಅವರ ಜೀವನದಲ್ಲಿ ನಡೆದ ಘಟನೆಗಳ ಕುರಿತು ಅವರು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು. ಅದಕ್ಕೆ ‘ಕೆಬಿಸಿಯಲ್ಲಿ ಗೆದ್ದ ನಂತರದ ನನ್ನ ಜೀವನದ ಅತೀ ಕೆಟ್ಟ ದಿನಗಳು’ ಎಂದು ಅವರು ಶೀರ್ಷಿಕೆ ನೀಡಿದ್ದರು. ಅದರಲ್ಲಿ ಅವರು ಬರೆದುಕೊಂಡಿರುವಂತೆ, ‘‘2015ರಿಂದ 2016ರ ನಡುವಿನ ಸಮಯ ನನ್ನ ಜೀವನದ ಅತ್ಯಂತ ಕಷ್ಟದ ದಿನಗಳಾಗಿದ್ದವು. ಆ ಸಮಯದಲ್ಲಿ ಏನು ಮಾಡಬೇಕೆಂಬುದೇ ತೋಚುತ್ತಿರಲಿಲ್ಲ. ಗೆದ್ದ ನಂತರ ತಿಂಗಳಿಗೆ ಸುಮಾರು ಹದಿನೈದು ದಿನಗಳ ಕಾಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಅಲ್ಲಿಗೆ ಬಂದವರು ಹಣವನ್ನು ಏನು ಮಾಡಿದಿರಿ ಎಂದು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ಸ್ವಲ್ಪ ಮೊತ್ತವನ್ನು ಕೆಲವು ಉದ್ಯಮಗಳಲ್ಲಿ ತೊಡಗಿಸಿದೆ’’ ಎಂದು ಅವರು ಬರೆದುಕೊಂಡಿದ್ದಾರೆ.

ಆದರೆ ಅವರು ಹಣ ತೊಡಗಿಸಿದ ಯಾವುದೇ ಉದ್ಯಮವು ಲಾಭ ಗಳಿಸದೇ, ನಷ್ಟದ ಹಾದಿ ಹಿಡಿಯಿತಂತೆ. ಈ ವಿಷಯಗಳಿಗೆ ಮನೆಯಲ್ಲಿ ಪತ್ನಿಯ ಜೊತೆಗೆ ಮನಸ್ತಾಪವೂ ತಲೆದೋರಿ, ಸುಶೀಲ್ ಕುಡಿತಕ್ಕೆ ದಾಸರಾದರಂತೆ. ನಂತರ ಮುಂಬೈಗೆ ಬಂದಿಳಿದ ಅವರು, ಸಿನಿಮಾಗಳಲ್ಲಿ ನಿರ್ದೇಶಕನಾಗಲು ಪ್ರಯತ್ನಿಸಿದರಂತೆ. ಆಗ ಯಾರೋ ಹೇಳಿದ ಮಾತು ಕೇಳಿ, ಕಿರುತೆರೆಯಲ್ಲಿ ಮೊದಲು ಪ್ರಯತ್ನಿಸಬೇಕು ಎಂಬ ಮಾತಿನಂತೆ ಅಲ್ಲೂ ಪ್ರಯತ್ನಿಸಿದರಂತೆ.

ಈ ಕುರಿತು ಸುಶೀಲ್ ಬರೆಯುತ್ತಾ ಈ ಕಷ್ಟ ಸಮಯದಿಂದ ಹೇಗೆ ಮೇಲೆದ್ದೆ ಎಂಬುದನ್ನು ತಿಳಿಸಿದ್ದರು. ‘‘ದಿನವಿಡೀ ಕುಳಿತುಕೊಂಡು ಓದುತ್ತಿದ್ದೆ. ಕೊನೆಗೆ ನಾನೇ ನನ್ನ ಕುರಿತು ಪೂರ್ವಾಗ್ರಹವಿಲ್ಲದೇ ನೋಡಿಕೊಂಡೆ. ಆಗ ಜ್ಞಾನೋದಯವಾಯಿತು- ನಾನು ಮುಂಬೈಗೆ ಬಂದಿದ್ದು, ನಿಜವಾಗಿ ನಿರ್ದೇಶಕನಾಗುವ ಉದ್ದೇಶಕ್ಕಲ್ಲ. ನನ್ನಿಂದ, ನನ್ನ ಸಮಸ್ಯೆಗಳಿಂದ ಓಡಿ ಬರುವುದಕ್ಕಾಗಿ ಈ ದಾರಿ ಹಿಡಿದಿದ್ದೆ ಎಂದು. ಅಲ್ಲಿಂದ ವಾಸ್ತವದ ಅರಿವಾಯಿತು. ನಿಜವಾದ ಸಂತೋಷವಿರುವವುದು ನಮ್ಮ ಮನಸ್ಸು ಏನು ಮಾಡಲು ಬಯಸುತ್ತದೆಯೋ, ಅದನ್ನು ಮಾಡುವುದರಲ್ಲಿ. ಪ್ರಖ್ಯಾತ ವ್ಯಕ್ತಿಯಾಗುವುದಕ್ಕಿಂತ ಸಾವಿರ ಪಾಲು ಸುಖ, ನಮ್ಮ ಮನಸ್ಸಿನ ಮಾತು ಕೇಳುವುದರಲ್ಲಿದೆ. ಅಲ್ಲಿಂದ ಹೊಸ ಬದುಕು ಆರಂಭಿಸಿದೆ’’ ಎಂದು ಅವರು ಬರೆದುಕೊಂಡಿದ್ದರು. ಮುಂಬೈನಲ್ಲಿ ನಂತರ ಶಿಕ್ಷಕರಾಗಿ ಕೆಲಸ ಆರಂಭಿಸಿದ ಸುಶೀಲ್, 2016ರಲ್ಲಿ ಕುಡಿತವನ್ನು ಸಂಪೂರ್ಣ ಬಿಟ್ಟರು. ಅವರೇ ಬರೆದುಕೊಂಡಂತೆ, ಧೂಮಪಾನದ ಅಭ್ಯಾಸವನ್ನೂ 2019ರಲ್ಲಿ ತ್ಯಜಿಸಿದರು.

ಇದೀಗ ‘ಕೌನ್ ಬನೇಗಾ ಕರೋಡ್​ಪತಿ’ 13ನೇ ಸೀಸನ್ ತಯಾರಿಯಲ್ಲಿದ್ದು, ಅಮಿತಾಭ್ ಬಚ್ಚನ್ ಈ ಶೋವನ್ನು ನಡೆಸಿಕೊಡಲಿದ್ದಾರೆ. ಹೊಸ ಸೀಸನ್ ಅಭಿಮಾನಿಗಳಲ್ಲಿ ಕುತೂಹಲವನ್ನು ಹುಟ್ಟುಹಾಕಿದ್ದು, ಹಳೆಯ ಸೀಸನ್​ನ ಸುಂದರ ಕ್ಷಣಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Dhananjay: ಧನಂಜಯ್ ಬತ್ತಳಿಕೆ ಸೇರಿತು ಹೊಸ ಸಿನಿಮಾ; ಕುತೂಹಲ ಮೂಡಿಸುವ ಪೋಸ್ಟರ್ ಇಲ್ಲಿದೆ

ಕಿಸ್​​ ಮಾಡಬೇಕೆಂದರೂ ಅಭಿಮಾನಿಗಳು ಒಪ್ಪಲ್ಲ; ಬೇಸರ ತೋಡಿಕೊಂಡ ನಟಿ

(First time 5Cr winner in KBC Sushil Kumar writes about how his life changed after winning)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್