AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

JEE Main 2026: ಜೆಇಇ ಮೇನ್ಸ್ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಕ್ಯಾಲ್ಕುಲೇಟರ್ ಬಳಸುವಂತಿಲ್ಲ; ಎನ್​ಟಿಎ ಸ್ಪಷ್ಟನೆ

2026ರಲ್ಲಿ ನಡೆಯುವ ಜೆಇಇ (ಜಾಯಿಂಟ್ ಎಂಟ್ರೆನ್ಸ್ ಎಕ್ಸಾಂ) ಮೇನ್ಸ್ ಬರೆಯುವ ಅಭ್ಯರ್ಥಿಗಳಿಗೆ ಪರೀಕ್ಷೆಯ ಸಮಯದಲ್ಲಿ ಕ್ಯಾಲ್ಕುಲೇಟರ್ ಬಳಸಲು ಅನುಮತಿ ನೀಡುವುದಿಲ್ಲ ಎಂದು ಎನ್‌ಟಿಎ (ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ) ಸ್ಪಷ್ಟಪಡಿಸಿದೆ. ಈ ಬಗ್ಗೆ ಪರಿಷ್ಕೃತ ಬುಲೆಟಿನ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತಾದ ಪೂರ್ತಿ ಮಾಹಿತಿ ಇಲ್ಲಿದೆ.

JEE Main 2026: ಜೆಇಇ ಮೇನ್ಸ್ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಕ್ಯಾಲ್ಕುಲೇಟರ್ ಬಳಸುವಂತಿಲ್ಲ; ಎನ್​ಟಿಎ ಸ್ಪಷ್ಟನೆ
Jee Main
ಸುಷ್ಮಾ ಚಕ್ರೆ
|

Updated on:Nov 03, 2025 | 3:24 PM

Share

ನವದೆಹಲಿ, ನವೆಂಬರ್ 3: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಜೆಇಇ ಮೇನ್ಸ್- 2026ರಲ್ಲಿ (JEE Mains 2026) ಕ್ಯಾಲ್ಕುಲೇಟರ್ ಬಳಕೆಯ ಬಗ್ಗೆ ತನ್ನ ಹಿಂದಿನ ಅಧಿಸೂಚನೆಯನ್ನು ಪರಿಷ್ಕರಿಸಿದೆ. ಪರೀಕ್ಷೆಯಲ್ಲಿ ವರ್ಚುವಲ್ ಕ್ಯಾಲ್ಕುಲೇಟರ್ ಬಳಕೆಗೆ ಅನುಮತಿ ನೀಡಿದ್ದು ಮುದ್ರಣ ದೋಷದಿಂದ ಉಂಟಾದ ಪ್ರಮಾದವಾಗಿದೆ ಎಂದು ಎನ್​ಟಿಎ ಸ್ಪಷ್ಟಪಡಿಸಿದೆ. ಪರೀಕ್ಷೆಯಲ್ಲಿ ಕ್ಯಾಲ್ಕುಲೇಟರ್‌ಗಳ ಬಳಕೆಗೆ ಅನುಮತಿ ಇಲ್ಲ ಎಂದು ಅದು ಹೇಳಿದೆ.

ಜೆಇಇ ಮೇನ್ಸ್​ ಕುರಿತಾದ ಈ ಹಿಂದಿನ ಮಾಹಿತಿ ಬುಲೆಟಿನ್‌ನಲ್ಲಿ, ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಸಮಯದಲ್ಲಿ ಆನ್-ಸ್ಕ್ರೀನ್ ಕ್ಯಾಲ್ಕುಲೇಟರ್ ಲಭ್ಯವಿರುತ್ತದೆ ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಆದರೆ, ಪರೀಕ್ಷೆ ನಡೆಸುವ ಸಂಸ್ಥೆಯಾದ ಎನ್‌ಟಿಎ ಈಗ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಈ ನಿಯಮ ಜೆನೆರಿಕ್ ಪರೀಕ್ಷೆಗೆ ಅನ್ವಯವಾಗುತ್ತದೆ. ಜೆಇಇ ಮೇನ್ಸ್​ಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿದೆ. ಈ ಪರೀಕ್ಷೆಯಲ್ಲಿ ಯಾವುದೇ ರೂಪದಲ್ಲಿ ಕ್ಯಾಲ್ಕುಲೇಟರ್‌ಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: JEE Advanced Exam 2025: ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಯನ್ನು ವಿಶ್ವದ ಎರಡನೇ ಕಠಿಣ ಪರೀಕ್ಷೆ ಎಂದು ಪರಿಗಣಿಸುವುದು ಏಕೆ?

ಜೆಇಇ ಮೇನ್ಸ್ ಪರಿಷ್ಕೃತ ಮಾಹಿತಿ ಬುಲೆಟಿನ್ ಅನ್ನು ಈಗ ಅಪ್‌ಲೋಡ್ ಮಾಡಲಾಗಿದೆ. ಅಭ್ಯರ್ಥಿಗಳು ಅದನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಜೆಇಇ ಮೇನ್ಸ್ 2026ರ ನೋಂದಣಿ ಪ್ರಕ್ರಿಯೆಯು ಅಕ್ಟೋಬರ್ 31ರ ರಾತ್ರಿ ಪ್ರಾರಂಭವಾಯಿತು. ಆನ್‌ಲೈನ್ ಅರ್ಜಿ ವಿಂಡೋ ನವೆಂಬರ್ 27ರವರೆಗೆ ತೆರೆದಿರುತ್ತದೆ. ಮೊದಲ ಎರಡು ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ವರ್ಷ 15 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬರುವ ನಿರೀಕ್ಷೆಯಿದೆ.

ಎನ್​ಟಿಎ ಹೇಳಿಕೆಯಲ್ಲಿ ಏನಿದೆ?:

“NTAಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಗಾಗಿ ನೀಡಲಾದ ಮಾಹಿತಿ ಬುಲೆಟಿನ್‌ನ ಅನುಬಂಧ-VIIIರಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಸಮಯದಲ್ಲಿ ಆನ್‌ಸ್ಕ್ರೀನ್ ಸ್ಟ್ಯಾಂಡರ್ಡ್ ಕ್ಯಾಲ್ಕುಲೇಟರ್ ಬಳಕೆಗೆ ಅವಕಾಶವಿರುತ್ತದೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಈ ನಿಯಮ ಜನರಲ್ ಪರೀಕ್ಷೆ ನಡೆಸುವ ವೇದಿಕೆಯ ಭಾಗವಾಗಿದೆ. NTA ನಡೆಸುವ JEE ಮೇನ್ಸ್​ಗೆ ಇದು ಅನ್ವಯಿಸುವುದಿಲ್ಲ. ಈ ಪರೀಕ್ಷೆಯಲ್ಲಿ ಯಾವುದೇ ರೂಪದಲ್ಲಿ ಕ್ಯಾಲ್ಕುಲೇಟರ್‌ಗಳ ಬಳಕೆಗೆ ಅನುಮತಿ ಇಲ್ಲ” ಎಂದು ಎನ್​ಟಿಎ ಹೇಳಿಕೆಯಲ್ಲಿ ತಿಳಿಸಿದೆ. ಹಾಗೇ, JEE ಪರೀಕ್ಷೆಯ ಮಾಹಿತಿ ಬುಲೆಟಿನ್‌ನಲ್ಲಿ ಮುದ್ರಣ ದೋಷದಿಂದ ಅಭ್ಯರ್ಥಿಗಳಿಗೆ ಉಂಟಾದ ಅನಾನುಕೂಲತೆಗೆ ಎನ್​ಟಿಎ ವಿಷಾದ ವ್ಯಕ್ತಪಡಿಸಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ jeemain.nta.nic.in ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Inspiring Journey: ಯೂಟ್ಯೂಬ್‌ನಿಂದ ಅಧ್ಯಯನ ಮಾಡಿ ಜೆಇಇ ಅಡ್ವಾನ್ಸ್‌ಡ್‌ನಲ್ಲಿ 64 ನೇ ರ‍್ಯಾಂಕ್ ಗಳಿಸಿದ ಯುವಕ

ಈ ವರ್ಷದ ಪರೀಕ್ಷೆಯು ಎರಡು ಅವಧಿಗಳಲ್ಲಿ ನಡೆಯಲಿದೆ. 2026ರ ಜನವರಿ 21ರಿಂದ 30ರವರೆಗೆ ಮತ್ತು ಏಪ್ರಿಲ್ 2ರಿಂದ 9ರವರೆಗೆ ನಡೆಯಲಿದೆ. ಸೆಷನ್ 1ರ ಫಲಿತಾಂಶವನ್ನು ಫೆಬ್ರವರಿ 12ರಂದು ಘೋಷಿಸಲಾಗುವುದು. ಸೆಷನ್ 2ರ ಫಲಿತಾಂಶವನ್ನು ಏಪ್ರಿಲ್ 20ರಂದು ಪ್ರಕಟಿಸಲಾಗುವುದು. ಈ ಪರೀಕ್ಷೆಯನ್ನು 13 ಭಾಷೆಗಳಲ್ಲಿ ನಡೆಸಲಾಗುತ್ತದೆ ಅಂದರೆ ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ನಡೆಸಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:18 pm, Mon, 3 November 25

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ