AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka 2nd PUC Exam-3: ದ್ವಿತೀಯ ಪಿಯುಸಿ 3ನೇ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ, ಇಲ್ಲಿದೆ ಟೈಮ್​ಟೇಬಲ್

ಕರ್ನಾಟಕದ ದ್ವಿತೀಯ ಪಿಯುಸಿ 3ನೇ ಪರೀಕ್ಷೆ ಜೂನ್ 6 ರಿಂದ 20 ರವರೆಗೆ ನಡೆಯಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪರೀಕ್ಷೆ ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ನಡೆಯಲಿದೆ. ಪರೀಕ್ಷೆಯ ವೇಳಾಪಟ್ಟಿ, ಇತರ ವಿವರಗಳನ್ನು ಇಲ್ಲಿ ನೀಡಲಾಗಿದೆ.

Karnataka 2nd PUC Exam-3: ದ್ವಿತೀಯ ಪಿಯುಸಿ 3ನೇ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ, ಇಲ್ಲಿದೆ ಟೈಮ್​ಟೇಬಲ್
ಸಾಂದರ್ಭಿಕ ಚಿತ್ರ
Ganapathi Sharma
|

Updated on: May 17, 2025 | 4:33 PM

Share

ಬೆಂಗಳೂರು, ಮೇ 17: ಕರ್ನಾಟಕ ದ್ವಿತೀಯ ಪಿಯುಸಿ (Second PUC) 3ನೇ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ 3ನೇ ಪರೀಕ್ಷೆಯ ವೇಳಾಪಟ್ಟಿಯನ್ನು ಅಧಿಕೃತ ವೆಬ್‌ಸೈಟ್ kseab.karnataka.gov.in/ ಇದರಲ್ಲಿ ಪ್ರಕಟಿಸಿದೆ. ಪರೀಕ್ಷೆಯು ಜೂನ್ 6 ರಿಂದ 20 ರ ರವರೆಗೆ ನಡೆಯಲಿದೆ. ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2 ರಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ 3 ನೇ ಪರೀಕ್ಷೆಗೆ ಹಾಜರಾಗಬಹುದು. ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 3 ರ ಹಾಲ್ ಟಿಕೆಟ್ ಅನ್ನು ಮಂಡಳಿಯು ಮೇ ಕೊನೆಯ ವಾರದಲ್ಲಿ ತಾತ್ಕಾಲಿಕವಾಗಿ ಬಿಡುಗಡೆ ಮಾಡುತ್ತದೆ.

2025 ರ ಕರ್ನಾಟಕ ದ್ವಿತೀಯ ಪಿಯುಸಿ 3ನೇ ಪರೀಕ್ಷೆಯ ವೇಳಾಪಟ್ಟಿಯ ವಿವರಗಳನ್ನು ಇಲ್ಲಿ ನೀಡಲಾಗಿದೆ. ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಪರೀಕ್ಷೆಗಳು ನಡೆಯಲಿವೆ.

ದ್ವಿತೀಯ ಪಿಯುಸಿ 3ನೇ ಪರೀಕ್ಷೆಯ ವೇಳಾಪಟ್ಟಿ

ದಿನಾಂಕ ಮತ್ತು ವಿಷಯ (ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ)

  • ಜೂನ್ 6 – ಕನ್ನಡ, ಅರೇಬಿಕ್
  • ಜೂನ್ 10 – ಇತಿಹಾಸ, ಭೌತಶಾಸ್ತ್ರ
  • ಜೂನ್ 11 – ರಾಜ್ಯಶಾಸ್ತ್ರ, ಸ್ಟಾಟಿಸ್ಟಿಕ್ಸ್, ಜೀವಶಾಸ್ತ್ರ
  • ಜೂನ್ 12 – ಅರ್ಥಶಾಸ್ತ್ರ, ರಸಾಯನಶಾಸ್ತ್ರ
  • ಜೂನ್ 13 – ಇಂಗ್ಲಿಷ್
  • ಜೂನ್ 14 – ತರ್ಕಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್, ಗಣಿತ, ಶಿಕ್ಷಣ, ಹೋಮ್ ಸೈನ್ಸಸ್
  • ಜೂನ್ 16 – ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಜಿಯೋಗ್ರಫಿ
  • ಜೂನ್ 17 – ಐಚ್ಛಿಕ ಕನ್ನಡ, ಅಕೌಂಟೆನ್ಸಿ
  • ಜೂನ್ 18 – ಹಿಂದಿ
  • ಜೂನ್ 19 – ಮನೋವಿಜ್ಞಾನ, ಭೂಗೋಳಶಾಸ್ತ್ರ, ಮೂಲ ಗಣಿತ
  • ಜೂನ್ 20 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ (ಬೆಳಗಿನ ಅವಧಿ).
  • ಜೂನ್ 20 – ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಬ್ಯೂಟಿ ಆ್ಯಂಡ್ ವೆಲ್​ನೆಸ್ (ಮಧ್ಯಾಹ್ನದ ಅವಧಿ ಮಧ್ಯಾಹ್ನ 2.15 ರಿಂದ ಸಂಜೆ 4.30 ರವರೆಗೆ).

ಇದನ್ನೂ ಓದಿ: ದ್ವಿತೀಯ ಪಿಯುಸಿ -2 ಫಲಿತಾಂಶ ಪ್ರಕಟ, 3ನೇ ಬಾರಿಯ ಪರೀಕ್ಷೆಗೆ ದಿನಾಂಕ ಘೋಷಣೆ

ಇದನ್ನೂ ಓದಿ
Image
2nd PUC Exam-2 Result: ದ್ವಿತೀಯ ಪಿಯು ಪರೀಕ್ಷೆ -2 ಫಲಿತಾಂಶ ಪ್ರಕಟ
Image
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆ
Image
ಬ್ರಿಟಿಷ್​ ಅಧಿಕಾರಿಗಳ ಮಕ್ಕಳು ಓದಿದ ಕೋಲಾರದ ಐತಿಹಾಸಿಕ ಶಾಲೆಯ ಕಥೆ ವ್ಯಥೆ!
Image
ಕ್ಯಾನ್ಸರ್ ಗೆದ್ದ ಬಾಲಕಿ, ಎಸ್​​ಎಸ್​ಎಲ್​​ಸಿ ಪರೀಕ್ಷೆಯಲ್ಲೂ ಟಾಪರ್

ಕರ್ನಾಟಕ ದ್ವಿತೀಯ ಪಿಯು ಪರೀಕ್ಷೆ-2 ರ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ 3ನೇ ಪರೀಕ್ಷೆಯ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ದ್ವಿತೀಯ ಪಿಯುಸಿ ಪರೀಕ್ಷೆ- 2 ರಲ್ಲಿ 60,692 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎರಡನೇ ದ್ವಿತೀಯ ಪಿಯು ಪರೀಕ್ಷೆಗೆ 1,94,077 ವಿದ್ಯಾರ್ಥಿಗಳು ಹಾಜರಾಗಿದ್ದರು.

ಶಿಕ್ಷಣ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಾಗಳ ಬಗ್ಗೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಾಗಳ ಬಗ್ಗೆ ತಿಳಿಯಿರಿ
ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಬಿಗ್ ಬಾಸ್​ಗೆ ಹೋಗೋಕೆ ಡಿ ಫ್ಯಾನ್ಸ್​ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಬಿಗ್ ಬಾಸ್​ಗೆ ಹೋಗೋಕೆ ಡಿ ಫ್ಯಾನ್ಸ್​ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!