Karnataka 2nd PUC Result 2022: ಜೂನ್ ಕೊನೆ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ

| Updated By: ಆಯೇಷಾ ಬಾನು

Updated on: Apr 24, 2022 | 6:51 AM

ಕಳೆದ ವರ್ಷ ಕೊರೊನಾದಿಂದ ಫಲಿತಾಂಶ 1 ತಿಂಗಳು ತಡವಾಗಿತ್ತು. ಪ್ರತಿ ವರ್ಷ ಮಾರ್ಚ್, ಏಪ್ರಿಲ್ನಲ್ಲಿ ಪಿಯು ಪರೀಕ್ಷೆ ನಡೆಯುತ್ತಿತ್ತು. ಆದರೆ ಈ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ಪರೀಕ್ಷೆ ನಡೆಯುತ್ತಿದೆ. PU ಫಲಿತಾಂಶ ಬೇಗ ನೀಡಲು ರಜಾ ದಿನಗಳಲ್ಲೂ ಮೌಲ್ಯಮಾಪನ ಮಾಡಲು ನಿರ್ಧರಿಸಲಾಗಿದೆ.

Karnataka 2nd PUC Result 2022: ಜೂನ್ ಕೊನೆ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಜೂನ್ ಕೊನೆ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರ ಬೀಳಲಿದೆ. ಪ್ರತಿ ವರ್ಷದಂತೆ ಈ ಬಾರಿ ದ್ವಿತೀಯ PU ಫಲಿತಾಂಶ ತಡವಾಗಲ್ಲ. ದ್ವಿತೀಯ PU ಪರೀಕ್ಷೆ ಫಲಿತಾಂಶ ನೀಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈವರೆಗೆ ಪರೀಕ್ಷೆ ಮುಗಿದ ನಂತರ ಮೌಲ್ಯಮಾಪನ ಮಾಡಲಾಗ್ತಿತ್ತು. ಆದ್ರೆ ಈ ಬಾರಿ ಒಂದೊಂದು ಪರೀಕ್ಷೆ ಮುಗಿಯುತ್ತಿದ್ದಂತೆ ಮೌಲ್ಯಮಾಪನ ಮಾಡಲಾಗುತ್ತಿದೆ.

ಕಳೆದ ವರ್ಷ ಕೊರೊನಾದಿಂದ ಫಲಿತಾಂಶ 1 ತಿಂಗಳು ತಡವಾಗಿತ್ತು. ಪ್ರತಿ ವರ್ಷ ಮಾರ್ಚ್, ಏಪ್ರಿಲ್ನಲ್ಲಿ ಪಿಯು ಪರೀಕ್ಷೆ ನಡೆಯುತ್ತಿತ್ತು. ಆದರೆ ಈ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ಪರೀಕ್ಷೆ ನಡೆಯುತ್ತಿದೆ. PU ಫಲಿತಾಂಶ ಬೇಗ ನೀಡಲು ರಜಾ ದಿನಗಳಲ್ಲೂ ಮೌಲ್ಯಮಾಪನ ಮಾಡಲು ನಿರ್ಧರಿಸಲಾಗಿದೆ. ಮೊದಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮೌಲ್ಯಮಾಪಕರ ನಿಯೋಜನೆ ಮಾಡಲಾಗಿದೆ. ಮೇ 20ರಿಂದ ಜೂನ್ 15ರೊಳಗೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದೆ. ಉನ್ನತ ಶಿಕ್ಷಣಕ್ಕೆ ಹೋಗಲು ವಿದ್ಯಾರ್ಥಿಗಳಿಗೆ ತೊಂದ್ರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರದ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ತ್ವರಿತಗತಿಯಲ್ಲಿ ರಿಸಲ್ಟ್ ನೀಡಲಾಗುತ್ತೆ ಎಂದು ಬೆಂಗಳೂರಿನಲ್ಲಿ PU ಮಂಡಳಿ ನಿರ್ದೇಶಕ ಆರ್.ರಾಮಚಂದ್ರನ್ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಗೆ 11,379 ವಿದ್ಯಾರ್ಥಿಗಳು ಗೈರು
ದ್ವಿತೀಯ ಪಿಯುಸಿ ಪರೀಕ್ಷೆಗೂ ಸಾವಿರಾರು ವಿದ್ಯಾರ್ಥಿಗಳು ಗೈರಾರಿದ್ದಾರೆ. ಮೊದಲ ದಿನವೇ ಬರೋಬ್ಬರಿ 11 ಸಾವಿರದ 379 ಸ್ಟೂಡೆಂಟ್ಸ್ ಆಬ್ಸೆಂಟ್ ಆಗಿದ್ರು. ಉಳಿದಂತೆ ಬೆಂಗಳೂರಿನಲ್ಲಿ ಯಾವುದೇ ವಿದ್ಯಾರ್ಥಿನಿಯರು ಹಿಜಾಬ್ಗೆ ತಲೆಕೆಡಿಸಿಕೊಂಡಿಲ್ಲ. ಹಿಜಾಬ್ಗಿಂತ ಪರೀಕ್ಷೆಯೇ ಮುಖ್ಯ ಅಂತಾ ಎಕ್ಸಾಂಗೆ ಹಾಜರ್ ಆಗಿದ್ರು. ಈ ಮೂಲಕ ಉಡುಪಿ ಹೊರತುಪಡಿಸಿ ರಾಜ್ಯದೆಲ್ಲೆಡೆ ಸುಗಮವಾಗಿ ಪರೀಕ್ಷೆ ನಡೆಯುತ್ತಿದೆ.

ಇದನ್ನೂ ಓದಿ: ಹರಿಹರಕ್ಕೆ ಸಿದ್ದರಾಮಯ್ಯ ಬಂದಾಗ ಕಾರ್ಯಕರ್ತರಿಂದ ಭಾವಿ ಮುಖ್ಯಮಂತ್ರಿಗೆ ಜಯವಾಗಲಿ ಘೋಷಣೆ!

Archana Jois: ‘ಕೆಜಿಎಫ್’ ಸರಣಿಯಲ್ಲಿ ಮಿಂಚಿದ ಅರ್ಚನಾ ಜೋಯಿಸ್; ನಟಿಯ ಕ್ಯೂಟ್ ಫೋಟೋಗಳು ಇಲ್ಲಿವೆ