Karnataka School Reopen: ದಸರಾ ಬಳಿಕ 1ರಿಂದ 5ನೇ ತರಗತಿ ಆರಂಭಕ್ಕೆ ಚಿಂತನೆ: ಶಿಕ್ಷಣ ಸಚಿವ ಬಿ ಸಿ ನಾಗೇಶ್

| Updated By: guruganesh bhat

Updated on: Sep 29, 2021 | 2:24 PM

ಸದ್ಯ ವೈರಲ್ ಇನ್ಫೆಕ್ಷನ್ ಡೆಂಘೀ ಜ್ವರದ ಕಾಟ ಇದೆ. ಹೀಗಾಗಿ 3,4,5 ನೇ ತರಗತಿ ಆರಂಭಿಸಲಾದರೂ ಅನುಮತಿ ನೀಡುವಂತೆ ಮನವಿ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

Karnataka School Reopen: ದಸರಾ ಬಳಿಕ 1ರಿಂದ 5ನೇ ತರಗತಿ ಆರಂಭಕ್ಕೆ ಚಿಂತನೆ: ಶಿಕ್ಷಣ ಸಚಿವ ಬಿ ಸಿ ನಾಗೇಶ್
Follow us on

ಬೆಂಗಳೂರು: ದಸರಾ ಬಳಿಕ 1 ರಿಂದ 5ನೇ ತರಗತಿ ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಈ ವಾರದಲ್ಲಿ ಸಿಎಂ ಹಾಗೂ ಕೊವಿಡ್ ತಾಂತ್ರಿಕಾ ಸಲಹಾ ಸಮಿತಿ ಚರ್ಚೆ ನಡೆಸಲಾಗುವುದು. ಸಭೆಯಲ್ಲಿ ಒಂದರಿಂದ ಐದರವರೆಗೆ ಶಾಲೆಗಳ ಆರಂಭಕ್ಕೆ ಮನವಿ ಮಾಡುತ್ತೇವೆ. ಆದರೆ ಸದ್ಯ ವೈರಲ್ ಇನ್ಫೆಕ್ಷನ್ ಡೆಂಘೀ ಜ್ವರದ ಕಾಟ ಇದೆ. ಹೀಗಾಗಿ 3,4,5 ನೇ ತರಗತಿ ಆರಂಭಿಸಲಾದರೂ ಅನುಮತಿ ನೀಡುವಂತೆ ಮನವಿ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

ತಮಿಳುನಾಡು: 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ನ 1ರಿಂದ ಶಾಲೆ ಆರಂಭ
ತಮಿಳುನಾಡಿನಲ್ಲಿ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿಯೇ ಪಾಠ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಒಂದೂವರೆ ವರ್ಷದ ನಂತರ (19 ತಿಂಗಳು) ಅಂದರೆ ನವೆಂಬರ್ 1ರಿಂದ ಶಾಲೆಗಳು ಆರಂಭವಾಗಲಿವೆ. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಕಳೆದ ಸೆ.1ರಿಂದಲೇ ಭೌತಿಕ ತರಗತಿಗಳು ನಡೆಯುತ್ತಿವೆ.

ದೀರ್ಘಾವಧಿಗೆ ಶಾಲೆಗಳು ನಡೆಯದ ಕಾರಣ ಕಲಿಕೆಯಲ್ಲಿ ಸಾಕಷ್ಟವಾಗಿದೆ ಎಂದು ವೈದ್ಯಕೀಯ ಪರಿಣಿತರು, ಪೋಷಕರು ಮತ್ತು ಶಿಕ್ಷಣ ತಜ್ಞರು ಅಭಿಪ್ರಾಯಟ್ಟಿದ್ದರು. ಅವರ ದೃಷ್ಟಿಕೋನವನ್ನು ಗಮನದಲ್ಲಿರಿಸಿಕೊಂಡು 1ರಿಂದ 8ನೇ ತರಗತಿವರೆಗಿನ ಎಲ್ಲ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ನವೆಂಬರ್ 1ರಿಂದ ಆರಂಭಿಸಲು ಅನುಮತಿ ನೀಡಲಾಗಿದೆ. ಕೊವಿಡ್-19 ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಶಾಲೆಗಳನ್ನು ನಡೆಸಬೇಕು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 

Jaggesh: ಜಗ್ಗೇಶ್ ಪುತ್ರ ಗುರುರಾಜ್ ಹೇಳಲಿದ್ದಾರೆ ತಂದೆಗೆ ಆಕ್ಷನ್ ಕಟ್; ನವರಸ ನಾಯಕ ಹಂಚಿಕೊಂಡ್ರು ಅಚ್ಚರಿಯ ಮಾಹಿತಿ

Puneeth Rajkumar: ದಾಖಲೆಯ ಮೊತ್ತಕ್ಕೆ ಮಾರಾಟವಾದ ‘ಜೇಮ್ಸ್’ ಚಿತ್ರದ ಟಿವಿ ರೈಟ್ಸ್; ಇಲ್ಲಿದೆ ಸಂಪೂರ್ಣ ಮಾಹಿತಿ

Published On - 2:16 pm, Wed, 29 September 21