ಬೆಂಗಳೂರು: ವಾರ್ಷಿಕ ಮಾನ್ಯತೆ ನವೀಕರಣ ನೆಪವೊಡ್ಡಿ RTE ಶುಲ್ಕ ಮರುಪಾವತಿಗೆ ತಡೆಯೊಡ್ಡಲಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಒಕ್ಕೂಟವು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಗೆ ಪತ್ರ ಬರೆದಿದ್ದು, ಖಾಸಗಿ ಶಾಲೆಗಳಲ್ಲಿ RTE ಪ್ರವೇಶ (school admissions through RTE) ನಿಲ್ಲಿಸಲು ಚಿಂತನೆ ನಡೆದಿದೆ ಎಂದು ಎಚ್ಚರಿಸಿದೆ (Karnataka Government).
2022-23ನೇ ಶೈಕ್ಷಣಿಕ ವರ್ಷದಿಂದ ಖಾಸಗಿ ಶಾಲೆಗಳಲ್ಲಿ ಆರ್ ಟಿಇ (Right to Education -RTE) ಮಕ್ಕಳ ಪ್ರವೇಶ ಪಡೆಯದಿರಲು ನಿರ್ಧಾರ ಮಾಡಲಾಗಿದೆ. ಆರ್ ಟಿಇ ಪ್ರವೇಶ ಸ್ಥಗೊತಗೊಳಿಸದೆ, ಮುಂದಿವರಿಸಬೇಕು ಎಂತಾದರೆ ಕೂಡಲೇ RTE ಹಣ ಬಿಡುಗಡೆ ಮಾಡುವಂತೆ ಖಾಸಗಿ ಶಾಲಾ ಒಕ್ಕೂಟ ಒತ್ತಾಯ ಮಾಡಿದೆ. ಇಲ್ಲವಾದ್ರೆ ರಾಜ್ಯದ 11 ಸಾವಿರ ಖಾಸಗಿ ಶಾಲೆಗಳಲ್ಲಿ RTE ಸ್ಥಗಿತಗೊಳಿಸಲಾಗುವುದು ಎಂದು ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಪತ್ರದಲ್ಲಿ ರುಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಎಚ್ಚರಿಸಿದ್ದಾರೆ.
ಇನ್ಮುಂದೆ ಹೋಟೆಲುಗಳಲ್ಲಿ ರಾತ್ರಿ ಹೊತ್ತು ಸಹ ಸಿಗಲಿದೆ ಊಟ-ತಿಂಡಿ: ರಾಜ್ಯ ಸರ್ಕಾರ ಹೊಸ ಆದೇಶ
ಬೆಂಗಳೂರು: ಒಂದು ಕಡೆ ಬೆಲೆ ಏರಿಕೆ ಬಿಸಿಗೆ ಥಂಡಾ ಹೊಡೆದಿರುವ ಹೋಟೆಲುಗಳಿಗೆ ರಾಜ್ಯ ಸರ್ಕಾರ ಆಶಾದಾಯಕ ಸುದ್ದಿ ನೀಡಿದೆ. ಹೆಚ್ಚು ಸಮಯ ವ್ಯಾಪಾರ ನಡೆಸುವುದಕ್ಕೆ ಅನುಕೂಲವಾಗಲು ಇನ್ನು ಮುಂದೆ ಇಡೀ ದಿನ- ಇಡೀರಾತ್ರಿ (24/7) ಹೋಟೆಲ್ ಗಳು ಓಪನ್ ಆಗಿರಲಿವೆ. ಅಂದರೆ ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ಹೊತ್ತು ಸಹ ಊಟ-ತಿಂಡಿ ಸಿಗಲಿದೆ (night hotels). ಈ ಸಂಬಂಧ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಸರ್ಕಾರದ ಅಧಿಸೂಚನೆ ಪ್ರಕಾರ ಎಲ್ಲಾ ಹೋಟೆಲ್, ಬೇಕರಿ, ಸ್ವೀಟ್ಸ್ ಸ್ಟಾಲ್, ಐಸ್‌ಕ್ರಿಂ ಶಾಪ್ ಗಳು ದಿನದ 24 ಗಂಟೆಯೂ ತೆರೆಯಲು ಅವಕಾಶ ಕಲ್ಪಿಸಲಾಗಿದೆ (Bangalore hotels). ಇದೇ ಮೊದಲ ಬಾರಿಗೆ 24/7 ಹೋಟೆಲ್ ತೆರೆಯಲು ಸರ್ಕಾರದಿಂದ ಅವಕಾಶ ಕಲ್ಪಿಸಲಾಗಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ಅನುಕೂಲಕ್ಕಾಗಿ ಈ ವ್ಯವಸ್ಥೆ ಅನುಕೂಲವಾಗಲಿದೆ. ಸರ್ಕಾರದ ಆದೇಶವನ್ನು ಸ್ವಾಗತಿಸಿರುವ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘವು ಇದೀಗ ಪೊಲೀಸ್ ಇಲಾಖೆಯ ಅನುಮತಿಗಾಗಿ ಕಾಯುತ್ತಿದೆ.
Also Read:
ನೆಹರೂ ಅಯೋಗ್ಯ: RSS ಇರೋದಕ್ಕೆ ಈ ದೇಶ ಉಳಿದಿದೆ, ಹಿಂದೂಗಳು ಸುರಕ್ಷಿತವಾಗಿದ್ದಾರೆ – ಬಸನಗೌಡ ಪಾಟೀಲ್ ಯತ್ನಾಳ್
Published On - 4:03 pm, Tue, 19 April 22