AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಹರೂ ಅಯೋಗ್ಯ: RSS ಇರೋದಕ್ಕೆ ಈ ದೇಶ ಉಳಿದಿದೆ, ಹಿಂದೂಗಳು ಸುರಕ್ಷಿತವಾಗಿದ್ದಾರೆ – ಬಸನಗೌಡ ಪಾಟೀಲ್ ಯತ್ನಾಳ್

Basanagouda Patil Yatnal: ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಹೆಂಗಿದ್ದಾನಲ್ಲಾ? ಆತನನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿದರೆ ದೇಶ ಎತ್ತ ಸಾಗಬೇಕು? ಬಟಾಟಿಯಿಂದ ಬಂಗಾರ ತೆಗೆಯುತ್ತೇನೆ ಎನ್ನುತ್ತಾನೆ ರಾಹುಲ್ ಗಾಂಧಿ ಎಂದು ಇದೇ ಸಂದರ್ಭದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು.

ನೆಹರೂ ಅಯೋಗ್ಯ: RSS ಇರೋದಕ್ಕೆ ಈ ದೇಶ ಉಳಿದಿದೆ, ಹಿಂದೂಗಳು ಸುರಕ್ಷಿತವಾಗಿದ್ದಾರೆ - ಬಸನಗೌಡ ಪಾಟೀಲ್ ಯತ್ನಾಳ್
ನೆಹರೂ ಅಯೋಗ್ಯ: RSS ಇರೋದಕ್ಕೆ ಈ ದೇಶ ಉಳಿದಿದೆ, ಹಿಂದೂಗಳು ಸುರಕ್ಷಿತವಾಗಿದ್ದಾರೆ - ಬಸವನಗೌಡ ಪಾಟೀಲ್ ಯತ್ನಾಳ್
TV9 Web
| Updated By: ಸಾಧು ಶ್ರೀನಾಥ್​|

Updated on:Apr 19, 2022 | 3:12 PM

Share

ವಿಜಯಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್ -​​ RSS) ಇರೋದಕ್ಕೆ ಈ ದೇಶ ಉಳಿದಿದೆ ಎಂದು ವಿಜಯಪುರ ನಗರದ ಸುಹಾಗ ಕಾಲೋನಿ ಬಳಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಆರ್ ಎಸ್ ಎಸ್ ಇರೋ ಕಾರಣದಿಂದ ಹಿಂದೂಗಳು ಸುರಕ್ಷಿತವಾಗಿದ್ದಾರೆ. ಆರ್ ಎಸ್ ಎಸ್ ಇಲ್ಲದಿದ್ದರೆ ಕಷ್ಟವಿರುತ್ತಿತ್ತು. ನೆಹರೂನಂಥ ಅಯೋಗ್ಯ ಪ್ರಧಾನಮಂತ್ರಿ, ಆ ವ್ಯವಸ್ಥೆ ವಿರುದ್ದ ಹೋರಾಟ ಮಾಡಿ, ಇಂದು ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಗೃಹ ಸಚಿವರು ಹೀಗೆ ಎಲ್ಲರೂ ಆರ್ ಎಸ್ ಎಸ್ ಮೂಲದಿಂದ ಬಂದ ಕಾರಣ ಭಾರತ ಪ್ರಪಂಚದ ಮೂರನೇ ಶಕ್ತಿಯಾಗಿದೆ ಹೊರಹೊಮ್ಮಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Vijayapura City BJP MLA Basanagouda Patil Yatnal) ವ್ಯಾಖ್ಯಾನಿಸಿದ್ದಾರೆ.

ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಹೆಂಗಿದ್ದಾನಲ್ಲಾ? ಆತನನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿದರೆ ದೇಶ ಎತ್ತ ಸಾಗಬೇಕು? ಬಟಾಟಿಯಿಂದ ಬಂಗಾರ ತೆಗೆಯುತ್ತೇನೆ ಎನ್ನುತ್ತಾನೆ ರಾಹುಲ್ ಗಾಂಧಿ ಎಂದು ಇದೇ ಸಂದರ್ಭದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು. ಹಿಂದೂಗಳು ನಾಲ್ಕು ಮಕ್ಕಳನ್ನು ಹೆರಬೇಕು. ಇಬ್ಬರನ್ನಾ ಆರ್ ಎಸ್ ಎಸ್, ಭಜರಂಗದಳಕ್ಕೆ ಕಳುಹಿಸಬೇಕು ಎಂದು ಸಾಧ್ವಿ ರಿತಂಬರಾ ನೀಡಿರುವ ಹೇಳಿಕೆಯ ಕುರಿತು ವಿಜಯಪುರ ನಗರ ಶಾಸಕ ಯತ್ನಾಳಪ್ರತಿಕ್ರಿಯಿಸಿದರು.

ಅವರು ಹೇಳಿದ್ದರಲ್ಲಿ ಏನು ತಪ್ಪಿದೆ? ಹಿಂದೂಗಳಷ್ಟೇ ಎರಡು ಮಕ್ಕಳನ್ನು ಹೆರಬೇಕೆಂಬ ಕಾಯ್ದೆ ಯಾಕಿದೆ? ಎಲ್ಲರಿಗೂ ಎರಡೇ ಮಕ್ಕಳಿರಬೇಕು, ಹಮ್ ದೋ – ಹಮಾರೇ ದೋ ಅಷ್ಟೆ. ಹಮ್ ದೋ ಹಮಾರೋ ದೋ ಎಂದು ಹಿಂದೂಗಳಿಗೆ ಹೇಳೋದು, ಹಮ್ ದೋ ಹಮಾರಾ ಪಾಂಚ್, ಹಮಾರಾ ಪೈದಾಹುವಾ ಪಚ್ಚೀಸ್ ಎಂದಂಗಾಗುತ್ತದೆ. ನನಗೆ ಐದು, ಹುಟ್ಟೋವು 25 ಆದರೆ ನಮ್ಮ ದೇಶ ಪಾಕಿಸ್ತಾನ ಆಗುತ್ತದೆ ಎಂದು ಎಚ್ಚರಿಸಿದ ಯತ್ನಾಳ್, ಸಾಧ್ವಿ ರಿತಂಬರಾ ಹೇಳಿದ್ದರಲ್ಲಿ ತಪ್ಪೇನು ಇಲ್ಲ. ಅದಕ್ಕಾಗಿ ಕಾಮನ್ ಸಿವಿಲ್ ಕೋಡ್ ಬರಬೇಕು. ಕಾಶ್ಮೀರದಲ್ಲಿ ಬಂದ ಹಾಗೆ ಕಾಮನ್ ಸಿವಿಲ್ ಕೋಡ್ ಬಂದರೆ ಎಲ್ಲರಿಗೂ ಒಂದೇ ಮದುವೆ, ಎರಡು ಮಕ್ಕಳು ಆಗಬೇಕು. ಇಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಿ.. ಅಲ್ಲಿ ಜನ್ನತ್ ಹೈ ಉದರ್… ಎಂದು ಯತ್ನಾಳ ಹೇಳಿದರು.

ಆರ್‌ಎಸ್‌ಎಸ್‌ ನವರು ದೇಶ ಭಕ್ತರಲ್ಲ; ದೇಶದ್ರೋಹಿಗಳು ಎಂದು ಜರಿದ ಮಾಜಿ ಸಿಎಂ ಸಿದ್ದರಾಮಯ್ಯ: ಇತ್ತ ವಿಜಯಪುರ ನಗರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು RSS ಇರೋದಕ್ಕೆ ಈ ದೇಶ ಉಳಿದಿದೆ, ಹಿಂದೂಗಳು ಸುರಕ್ಷಿತವಾಗಿದ್ದಾರೆ ಎಂದಿದ್ದರೆ ಅತ್ತ ಚಾಮರಾಜನಗರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್‌ ನವರು ದೇಶ ಭಕ್ತರಲ್ಲ; ದೇಶದ್ರೋಹಿಗಳು ಎಂದು ಜರಿದಿದಿದ್ದಾರೆ. ಅಂದು ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗಿಯಾದವರನ್ನ ಹತ್ಯೆ ಮಾಡಿ ಎಂದಿದ್ದರು. ಆರ್‌ಎಸ್‌ಎಸ್‌ ದೇಶ ಭಕ್ತರಲ್ಲ; ದೇಶದ್ರೋಹಿಗಳು. ಸಮಾಜದಲ್ಲಿ ಅಶಾಂತಿ ಮೂಡಿಸಲು ಗಲಭೆ ಸೃಷ್ಟಿ ಮಾಡುತ್ತಾರೆ. ಈ ದೇಶ ಒಂದು ಧರ್ಮದ ದೇಶವಾಗಿಲ್ಲ. ಬ್ರಿಟಿಷರನ್ನ ಓಡಿಸಿ, ಸ್ವಾತಂತ್ರ್ಯ ತಂದಿದ್ದು ಎಲ್ಲಾ ಧರ್ಮದವರು ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಚಾಮರಾಜನಗರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ

Also Read: ಬೊಮ್ಮಾಯಿ ಭಾಷಣಕ್ಕೆ ಅಡ್ಡಿ: ಸಂಶೋಧನಾ ವಿದ್ಯಾರ್ಥಿಯ ನೋಂದಣಿ ರದ್ದುಗೊಳಿಸ್ತೇವೆ ಎಂದು ವಿಶ್ವವಿದ್ಯಾಲಯದಿಂದ ನೋಟಿಸ್

Also Read: Amway: ಆ್ಯಮ್​ವೇ ಕಂಪೆನಿಯ 757 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಂಡ ಜಾರಿ ನಿರ್ದೇಶನಾಲಯ

Published On - 2:58 pm, Tue, 19 April 22