AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amway: ಆ್ಯಮ್​ವೇ ಕಂಪೆನಿಯ 757 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಂಡ ಜಾರಿ ನಿರ್ದೇಶನಾಲಯ

Amway Asset Freeze: ಆ್ಯಮ್​ವೇ ಇಂಡಿಯಾಗೆ ಸೇರಿದ 750 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿಕೊಂಡಿದೆ. ಏಕೆ, ಏನು ಎಂಬಿತ್ಯಾದಿ ವಿವರ ಇಲ್ಲಿದೆ.

Amway: ಆ್ಯಮ್​ವೇ ಕಂಪೆನಿಯ 757 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಂಡ ಜಾರಿ ನಿರ್ದೇಶನಾಲಯ
ಸಾಂದರ್ಭಿಕ ಚಿತ್ರ
TV9 Web
| Updated By: Digi Tech Desk|

Updated on:Apr 19, 2022 | 12:00 PM

Share

ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ಗ್ರಾಹಕ ಸರಕುಗಳ ನೇರ ಮಾರಾಟದ ಕಂಪೆನಿ (Direct Selling Company) ಆ್ಯಮ್​ವೇ​ ಇಂಡಿಯಾಗೆ (Amway) ಸೇರಿದ ರೂ. 757 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (Enforcement Directorate) ಸೋಮವಾರ ತಿಳಿಸಿದೆ. ಆ್ಯಮ್​ವೇ ಇಂಡಿಯಾ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ನ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಗಳಲ್ಲಿ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಭೂಮಿ ಮತ್ತು ಕಾರ್ಖಾನೆ ಕಟ್ಟಡ, ಸ್ಥಾವರ ಮತ್ತು ಯಂತ್ರೋಪಕರಣಗಳು, ವಾಹನಗಳು, ಬ್ಯಾಂಕ್ ಖಾತೆಗಳು ಮತ್ತು ನಿಶ್ಚಿತ ಠೇವಣಿ (Fixed Deposits) ಸೇರಿವೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅಂದರೆ ಅದನ್ನು ವರ್ಗಾಯಿಸಲು, ಪರಿವರ್ತಿಸಲು ಅಥವಾ ಬದಲಾಯಿಸುವುದಕ್ಕೆ ಸಾಧ್ಯವಿಲ್ಲ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA Act) ಅಡಿಯಲ್ಲಿ ಒಟ್ಟು ರೂ. 757.77 ಕೋಟಿ ಆಸ್ತಿಯನ್ನು ಜಪ್ತಿ ಮಾಡಲಾಗಿದ್ದು, ಸ್ಥಿರ ಮತ್ತು ಚರ ಆಸ್ತಿಗಳು ರೂ. 411.83 ಕೋಟಿ ಮೌಲ್ಯದ್ದಾಗಿದೆ. ಉಳಿದವು ರೂ. 345.94 ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಆಗಿದ್ದು, ಆ್ಯಮ್​ವೇ ಸೇರಿದ 36 ಖಾತೆಗಳಲ್ಲಿ ಇರಿಸಲಾಗಿದೆ ಎಂದು ಅದು ಹೇಳಿದೆ. ಜಾರಿ ನಿರ್ದೇಶನಾಲಯವು ಕಂಪೆನಿಯು ಬಹು-ಹಂತದ ಮಾರ್ಕೆಟಿಂಗ್ “ಹಗರಣ”ವನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದು, ಅಲ್ಲಿ ಕಂಪೆನಿಯು ನೀಡುವ ಹೆಚ್ಚಿನ ಉತ್ಪನ್ನಗಳ ಬೆಲೆಗಳು “ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತಿಷ್ಠಿತ ತಯಾರಕರ ಪರ್ಯಾಯ ಜನಪ್ರಿಯ ಉತ್ಪನ್ನಗಳಿಗೆ ಹೋಲಿಸಿದರೆ ವಿಪರೀತವಾಗಿದೆ”.

“ಆಮ್​ವೇ ನೇರ ಮಾರಾಟದ ಬಹು-ಹಂತದ ಮಾರ್ಕೆಟಿಂಗ್ ನೆಟ್‌ವರ್ಕ್‌ನ ಸೋಗಿನಲ್ಲಿ ಪಿರಮಿಡ್ (Pyramid pattern) ವಂಚನೆ ನಡೆಸುತ್ತಿದೆ ಎಂದು ಜಾರಿ ನಿರ್ದೇಶನಾಲಯದ ಅಕ್ರಮ ಹಣ ವರ್ಗಾವಣೆ ತನಿಖೆಯಿಂದ ತಿಳಿದುಬಂದಿದೆ,” ಎಂದು ಸಂಸ್ಥೆ ಹೇಳಿದೆ. “ನಿಜವಾದ ಸಂಗತಿಗಳನ್ನು ತಿಳಿಯದೆ, ಸಾಮಾನ್ಯ ಜನಸಾಮಾನ್ಯರು ಕಂಪೆನಿಯ ಸದಸ್ಯರಾಗಿ ಸೇರಲು ಪ್ರಚೋದಿಸುತ್ತಾರೆ ಮತ್ತು ಅತಿಯಾದ ಬೆಲೆಗೆ ಉತ್ಪನ್ನಗಳನ್ನು ಖರೀದಿಸುತ್ತಾರೆ. ಹಾಗೂ ಇದರಿಂದಾಗಿ ಅವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹೊಸ ಸದಸ್ಯರು ಅವುಗಳನ್ನು ಬಳಸಲು ಉತ್ಪನ್ನಗಳನ್ನು ಖರೀದಿಸುತ್ತಿಲ್ಲ. ಆದರೆ ಆಫ್​ಲೈನ್ ಸದಸ್ಯರು ಪ್ರದರ್ಶಿಸಿದಂತೆ ಸದಸ್ಯರಾಗುವ ಮೂಲಕ ಶ್ರೀಮಂತರಾಗುತ್ತಾರೆ. ವಾಸ್ತವವೆಂದರೆ ಆಫ್​ಲೈನ್ ಸದಸ್ಯರು ಪಡೆಯುವ ಕಮಿಷನ್‌ಗಳು ಉತ್ಪನ್ನಗಳ ಬೆಲೆಗಳ ಹೆಚ್ಚಳಕ್ಕೆ ಅಗಾಧವಾಗಿ ಕೊಡುಗೆ ನೀಡುತ್ತವೆ,” ಎಂದು ಅದು ಸೇರಿಸಿದೆ.

“ಕಂಪೆನಿಯ ಸಂಪೂರ್ಣ ಗಮನವು ಸದಸ್ಯರಾಗುವ ಮೂಲಕ ಹೇಗೆ ಶ್ರೀಮಂತರಾಗಬಹುದು ಎಂಬುದನ್ನು ಪ್ರಚಾರ ಮಾಡುವುದು. ಉತ್ಪನ್ನಗಳ ಮೇಲೆ ಯಾವುದೇ ಗಮನವಿಲ್ಲ. ಈ ಎಂಎಲ್​ಎಂ ಪಿರಮಿಡ್ ವಂಚನೆಯನ್ನು ನೇರ ಮಾರಾಟದ ಕಂಪೆನಿಯಾಗಿ ಮರೆಮಾಚಲು ಉತ್ಪನ್ನಗಳನ್ನು ಬಳಸಲಾಗುತ್ತದೆ,” ಎಂದು ಸಂಸ್ಥೆ ಹೇಳಿದೆ. ಇನ್ನು ಆ್ಯಮ್​ವೇ ಇಂಡಿಯಾ ಹೇಳಿಕೆಯಲ್ಲಿ, “ಅಧಿಕಾರಿಗಳ ಕ್ರಮವು 2011ರ ಹಿಂದಿನ ತನಿಖೆಗೆ ಸಂಬಂಧಿಸಿದೆ ಮತ್ತು ಅಂದಿನಿಂದ ನಾವು ಇಲಾಖೆಯೊಂದಿಗೆ ಸಹಕರಿಸುತ್ತಿದ್ದೇವೆ ಮತ್ತು ಕೋರಿದ ಎಲ್ಲಾ ಮಾಹಿತಿಯನ್ನು ಹಂಚಿಕೊಂಡಿದ್ದೇವೆ. 2011ರಿಂದ ಕಾಲಕಾಲಕ್ಕೆ. ಬಾಕಿ ಉಳಿದಿರುವ ಸಮಸ್ಯೆಗಳ ನ್ಯಾಯೋಚಿತ, ಕಾನೂನು ಮತ್ತು ತಾರ್ಕಿಕ ತೀರ್ಮಾನಕ್ಕೆ ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳು ಮತ್ತು ಕಾನೂನು ಅಧಿಕಾರಿಗಳೊಂದಿಗೆ ನಾವು ಸಹಕರಿಸುವುದನ್ನು ಮುಂದುವರಿಸುತ್ತೇವೆ.”

“ವಿಷಯವು ನ್ಯಾಯಸಮ್ಮತ ಆಗಿರುವುದರಿಂದ ನಾವು ಹೆಚ್ಚಿನ ಅಭಿಪ್ರಾಯ ನೀಡಲು ಬಯಸುವುದಿಲ್ಲ. ನಮ್ಮ ವ್ಯವಹಾರದ ಬಗ್ಗೆ ತಪ್ಪುದಾರಿಗೆ ಎಳೆಯುವ ಅನಿಸಿಕೆಯನ್ನು ಪರಿಗಣಿಸಿ, ದೇಶದಲ್ಲಿ 5.5 ಲಕ್ಷಕ್ಕೂ ಹೆಚ್ಚು ನೇರ ಮಾರಾಟಗಾರರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ನಿಮ್ಮನ್ನು ವಿನಂತಿಸುತ್ತೇವೆ,” ಎಂದು ಕಂಪೆನಿಯಿಂದ ಸೇರಿಸಲಾಗಿದೆ. ಡಿಸೆಂಬರ್‌ನಲ್ಲಿ ಪಿರಮಿಡ್ ಯೋಜನೆಗಳನ್ನು ಪ್ರಚಾರ ಮಾಡುವುದರಿಂದ ನೇರ ಮಾರಾಟ ಕಂಪೆನಿಗಳನ್ನು ಸರ್ಕಾರ ನಿಷೇಧಿಸಿತ್ತು. ಗ್ರಾಹಕರ ರಕ್ಷಣೆ (ನೇರ ಮಾರಾಟ) ನಿಯಮಗಳು, 2021 ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಮತ್ತು ಹಣ ಚಲಾವಣೆ ಯೋಜನೆಗಳನ್ನು ಪ್ರೋತ್ಸಾಹಿಸದಂತೆ ಟಪ್ಪರ್​ವೇರ್ (Tupperware), ಆ್ಯಮ್​ವೇ (Amway) ಮತ್ತು ಓರಿಫ್ಲೇಮ್ (Oriflame)ನಂತಹ ನೇರ ಮಾರಾಟದಲ್ಲಿ ತೊಡಗಿರುವ ಕಂಪೆನಿಗಳನ್ನು ನಿರ್ಬಂಧಿಸುತ್ತದೆ.

ಇದನ್ನೂ ಓದಿ: ಕಣ್ವ ಗ್ರೂಪ್​ಗೆ ಸೇರಿದ 84.40 ಕೋಟಿ ರೂಪಾಯಿ ಸ್ಥಿರಾಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ

Published On - 11:51 am, Tue, 19 April 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ