ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ದುರ್ಮರಣ; 9ಕ್ಕೂ ಹೆಚ್ಚು ಕುರಿಗಳು ಬಲಿ

ಜಿಲ್ಲೆಯಲ್ಲಿ‌ ಗುಡುಗು, ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಗಾಳಿ ಮಳೆಗೆ ಬೃಹತ್ ಗ್ರಾತದ ಮರ ನೆಲಕ್ಕೆ ಉರುಳಿದೆ. ಜತೆಗೆ ಶೀಟ್​ಗಳು ಹಾರಿಹೋಗಿರುವಂತಹ ಘಟನೆ ಕನಕಪುರ‌‌ ನಗರದ ಎಸ್ ಕರಿಯಪ್ಪ ರಸ್ತೆಯಲ್ಲಿ ನಡೆದಿದೆ.

ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ದುರ್ಮರಣ; 9ಕ್ಕೂ ಹೆಚ್ಚು ಕುರಿಗಳು ಬಲಿ
ಸಿಡಿಲು ಬಡಿದು ಸಾವನ್ನಪ್ಪಿರುವ ಇಬ್ಬರು ಕುರಿಗಾಹಿಗಳು ಮತ್ತು ಕುರಿಗಳು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Apr 18, 2022 | 8:21 PM

ವಿಜಯಪುರ: ಮಳೆ ಬರುತ್ತಿರುವಾಗ ಕುರಿ (Sheep) ಗಳನ್ನು ಮೇಯಿಸುವ ವೇಳೆ ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ಹಾಗೂ 9ಕ್ಕೂ ಅಧಿಕ ಕುರಿಗಳು ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಕೋಲಾರ ತಾಲ್ಲೂಕಿನ ಚಿರಲದಿನ್ನಿ ಗ್ರಾಮದಲ್ಲಿ ನಡೆದಿದೆ. ಭೀರಪ್ಪ ಬಡೆಗೋಳ ಹಾಗೂ ಮಹೇಶ ಬಡೆಗೋಳ ಮೃತ ಕುರಿಗಾಹಿಗಳು. ಮೃತರು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಜೋಡುಕುರಳಿ ಗ್ರಾಮದವರು ಎಂದು ಗುರುತಿಸಲಾಗಿದೆ. ಕುರಿಗಾಹಿಗಳ ಜೊತೆಗೆ ಒಂಭತ್ತಕ್ಕೂ ಅಧಿಕ ಕುರಿಗಳು ಬಲಿಯಾಗಿವೆ. ಕೊಲ್ಹಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ; ನೆಲಕ್ಕುರುಳಿದ ಬೃಹತ್ ಮರ;

ರಾಮನಗರ: ಜಿಲ್ಲೆಯಲ್ಲಿ‌ ಗುಡುಗು, ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಗಾಳಿ ಮಳೆಗೆ ಬೃಹತ್ ಗ್ರಾತದ ಮರ ನೆಲಕ್ಕೆ ಉರುಳಿದೆ. ಜತೆಗೆ ಶೀಟ್​ಗಳು ಹಾರಿಹೋಗಿರುವಂತಹ ಘಟನೆ ಕನಕಪುರ‌‌ ನಗರದ ಎಸ್ ಕರಿಯಪ್ಪ ರಸ್ತೆಯಲ್ಲಿ ನಡೆದಿದೆ. ಜಿಲ್ಲೆಯ ಕನಕಪುರ ಮನೆಯ ‌ಮೇಲೆ ಮರ ಉರುಳಿದ್ದು, ಅದೃಷ್ಟವಶತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಸತತ ಒಂದು ಗಂಟೆಯಿಂದ ನಿಲ್ಲದ ಮಳೆ; ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ:

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ ಜೋರಾಗಿದ್ದು, ಸತತ ಒಂದು ಗಂಟೆಯಿಂದ ಮಳೆ ಅಬ್ಬರ ನಿಂತ್ತಿಲ್ಲ. ಚಿಕ್ಕಮಗಳೂರು ನಗರ, ಆಲ್ದೂರು, ಸಖರಾಯಪಟ್ಟಣ, ಕಳಸಾಪುರ ಭಾಗಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಮಳೆ ಆರ್ಭಟ ಮುಂದುವರೆದಿದೆ. ಸತತ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಹಲವೆಡೆ ಮಳೆರಾಯ ಅಬ್ಬರಿಸುತ್ತಿದ್ದಾನೆ.

ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

ಬೆಂಗಳೂರು: ನಗರದಲ್ಲಿ ಇಂದು ಕೂಡ ಹಲವೆಡೆ ಗುಡುಗು ಸಹಿತ ಮಳೆಯ ಅಬ್ಬರ ಮುಂದುವರೆದಿದೆ. ಬೆಂಗಳೂರು ನಗರದ ಹಲವೆಡೆ ಧಾರಾಕಾರವಾಗಿ ವರುಣ ಆರ್ಭಟ ಶುರುವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸತತ ನಾಲ್ಕು ದಿನದಿಂದ ಮಳೆ ಆಗುತ್ತಿದ್ದು, ಹಲವೆಡೆ ಮಳೆಯಿಂದಾಗಿ ಟ್ರಾಫಿಕ್​ ಜಾಮ್​ ಉಂಟಾಗಿ ಸವಾರರು ಪರದಾಡುತ್ತಿದ್ದಾರೆ. ನಾಳೆಯೂ ಕರಾವಳಿ, ದಕ್ಷಿಣ ಒಳನಾಡು, ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರೆಯಲಿದ್ದು, ಇನ್ನೆರಡು ದಿನ ಗುಡುಗು, ಗಾಳಿ ಸಹಿತ ಮಳೆಯಾಗಲಿದೆ. ಇಂದು ಬೆಂಗಳೂರಿನಲ್ಲಿ ಕನಿಷ್ಟ 15 ಮಿ.ಮೀನಿಂದ ಗರಿಷ್ಠ 64 ಮಿ.ಮೀವರೆಗೆ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಮಾಹಿತಿ ನೀಡಿದೆ.

ಇದನ್ನೂ ಓದಿ:

ಯುದ್ಧಕ್ಕೆ ಮುನ್ನುಡಿ ಹಾಡಿದ ಪ್ರೇಮ್​; ಧ್ರುವ ಸರ್ಜಾ ಹೊಸ ಚಿತ್ರಕ್ಕೆ ಮೈಸೂರಿನಲ್ಲಿ ಮುಹೂರ್ತ

Published On - 8:18 pm, Mon, 18 April 22